ನೇರ ನುಡಿ, ನಿಷ್ಠುರ ವ್ಯಕ್ತಿತ್ವದ ಹೋರಾಟಗಾರ ವೈ.ಕೆ.ರಾಮಯ್ಯ Lecture
ಕುಣಿಗಲ್ Lecture ತಾಲೂಕಿನ ಕನ್ನಡ ಭವನದ ಮಲ್ಲಮ್ಮ ಪಟೇಲ್ ನಾರಸೀಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೈ.ಕೆ ರಾಮಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಜಿ.ವಿ.ಆನಂದಮೂರ್ತಿ, ನಿವೃತ್ತ ಪ್ರಾಚಾರ್ಯರಾದ ರಾಮಣ್ಣ, ಜಯರಾಮಯ್ಯ, ವರದರಾಜು ಇದ್ದರು.
ಸದಾ ಜನಪರ ಚಿಂತನೆಗಳೊಂದಿಗೆ ಮನೆ ಮಾತಾಗಿದ್ದ ವೈ.ಕೆ ರಾಮಯ್ಯ ತಮ್ಮ
Lecture
ಹೋರಾಟದಿಂದಲೇ ನೇರ ನುಡಿ ನಿಷ್ಠೂರವಂತ ರಾಜಕಾರಣಿಯಾಗುವ ಮೂಲಕ ಶಾಸನ ಸಭೆಯಲ್ಲಿ ಮಾದರಿ ರಾಜಕಾರಣಿಯಾಗಿದ್ದರು ಎಂದು ವಿಮರ್ಶಕ ಡಾ.ಜಿ.ವಿ.ಆನಂದಮೂರ್ತಿ ತಿಳಿಸಿದರು.
ತಾಲೂಕಿನ ಕನ್ನಡ ಭವನದ ಮಲ್ಲಮ್ಮ ಪಟೇಲ್ ನಾರಸೀಗೌಡ ಸಭಾಂಗಣದಲ್ಲಿ ತಾಲೂಕು ಕಸಾಪದಿಂದ ಹಮ್ಮಿಕೊಂಡಿದ್ದ ವೈ.ಕೆ ರಾಮಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನನಗೆ ಮಂತ್ರಿ ಸ್ಥಾನಕ್ಕಿಂತ ನನ್ನ ೇತ್ರಕ್ಕೆ ಹೇಮಾವತಿ ನೀರೇ ಮುಖ್ಯ ಎಂದು 2 ವರ್ಷಗಳ ಕಾಲ ತುಮಕೂರು ಜಿಲ್ಲೆಗೆ ನೀರು ಹರಿಸಲು ಹೋರಾಟ ಮಾಡಿದಂತಹ ಮಹಾನ್ ಧೀಮಂತ ನಾಯಕ ರಾಮಯ್ಯ ಎಂದು ಬಣ್ಣಿಸಿದರು.
ಜಿಲ್ಲಾ ಕಸಾಪ ಅಧ್ಯ ಸಿದ್ದಲಿಂಗಪ್ಪ ಮಾತನಾಡಿ, ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಅವರ ಆಶಯದಂತೆ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಹಲವರು ದತ್ತಿ ನಿಧಿಯನ್ನು ಇಡುಗಂಟಾಗಿ ಕೇಂದ್ರ ಕಚೇರಿಯಲ್ಲಿ ಸುಮಾರು 3000ಕ್ಕೂ ಹೆಚ್ಚು ದತ್ತಿ ನಿಧಿಗಳನ್ನು ಇಟ್ಟಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 42 ಇದ್ದರೆ ಕುಣಿಗಲ್ ತಾಲೂಕಿನಲ್ಲಿ ಒಂದೇ ಒಂದು ವೈ.ಕೆ ರಾಮಯ್ಯ ಅವರ ಹೆಸರಿನಲ್ಲಿ ದತ್ತಿ ನಿಧಿ ಇದೆ. ದತ್ತಿ ನಿಧಿಯನ್ನು ವರ್ಷದಿಂದ ವರ್ಷಕ್ಕೆ ಬೆಳೆಸುವಂತಹ ಪ್ರೋತ್ಸಾಹಿಸುವಂತಹ ಕೆಲಸಗಳು ಆಗಬೇಕು. ಆ ನಿಟ್ಟಿನಲ್ಲಿ ಬರುವ ಹಣವನ್ನು ಅವರ ಆಶಯದಂತೆ ಕಾರ್ಯಕ್ರಮಗಳನ್ನು ರೂಪಿಸುವುದೇ ದತ್ತಿ ನಿಧಿಯ ಸದುದ್ದೇಶವಾಗಿದೆ ಎಂದರು.
ತಾಲೂಕು ಕಸಾಪ ಅಧ್ಯ ಡಾ.ಕಪಾನಿಪಾಳ್ಯ ರಮೇಶ್ ಮಾತನಾಡಿ, ಬಯಲು ಸೀಮೆಯಾಗಿದ್ದ ತಾಲೂಕು ಒಂದು ರೀತಿಯ ಮಲೆನಾಡು ಸೀಮೆ ಮೀರಿಸುವಂತೆ ತೆಂಗು ಕಂಗುಗಳ ಹೊತ್ತು ಕಂಗೊಳಿಸುವ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಅಂದಿನ ರಾಜಕೀಯದ ತ್ರಿವಿಕ್ರಮರಾಗಿದ್ದ ವೈ.ಕೆ ರಾಮಯ್ಯ ನೀರಿನ ಹೋರಾಟ ಸೇರಿ ಪ್ರಸ್ತುತ ರಾಜಕಾರಣಿಗಳು ತಾಲೂಕಿನ ಅಭಿವೃದ್ಧಿಗೆ ಹೇಮಾವತಿ ಹರಿಸುವ ಮೂಲಕ ನೀರಾವರಿ ೇತ್ರವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ ಎಂದರು.
ಜೀವಂದರ್ ಕುಮಾರ್, ದಲಿತ್ ನಾರಾಯಣ್, ನಿಡಸಾಲೆ ಪ್ರಸಾದ್, ಎಂ.ಡಿ. ಮೋಹನ್, ಶ್ರೀಧರ್ ಇದ್ದರು.