ಯಲ್ಲಮ್ಮನಗುಡ್ಡದಲ್ಲಿ ಸಂಚಾರ ಕಿರಿಕಿರಿ

ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಅಪಾರ ಭಕ್ತ ಸಮೂಹ ಆಗಮಿಸಿದ್ದರಿಂದ ಎಲ್ಲೆಡೆ ಸಂಚಾರ ಸಿಕ್ಕು ಉಂಟಾಯಿತು.
ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಅಪಾರ ಭಕ್ತ ಸಮೂಹ ಆಗಮಿಸಿದ್ದರಿಂದ ಎಲ್ಲೆಡೆ ಸಂಚಾರ ಸಿಕ್ಕು ಉಂಟಾಯಿತು.
Published on
ಸವದತ್ತಿ: ಸಮೀಪದ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಅಪಾರ ಭಕ್ತ ಸಮೂಹ ಆಗಮಿಸಿದ್ದರಿಂದ ಮಂಗಳವಾರ ಎಲ್ಲೆಡೆ ಸಂಚಾರ ಸಿಕ್ಕು ಉಂಟಾಯಿತು. ಭಕ್ತರ ನಿಯಂತ್ರಣಕ್ಕಾಗಿ ಸವದತ್ತಿ ಯಿಂದ ಸಂಗಪ್ಪನಕೊಳ್ಳ ಮಾರ್ಗವಾಗಿ ಪ್ರವೇಶ ಹಾಗೂ ಯಲ್ಲಮ್ಮನಗುಡ್ಡ ಜೋಗುಳಬಾವಿ ಮಾರ್ಗವಾಗಿ ನಿರ್ಗಮನಕ್ಕೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಯಿತು. ಆದರೆ, ನಿರೀೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಸಂಚಾರ ಸಿಕ್ಕು ಹೆಚ್ಚಿತು.
ಯಲ್ಲಮ್ಮನಗುಡ್ಡದಿಂದ ಸವದತ್ತಿ ಎಪಿಎಂಸಿ ವರೆಗೆ, ಯಲ್ಲಮ್ಮನಗುಡ್ಡ ಜೋಗುಳಬಾವಿ ಮಾರ್ಗದ ಎಪಿಎಂಸಿ, ಮುನವಳ್ಳಿ, ಧಾರವಾಡ, ನರಗುಂದ ರಸ್ತೆಗಳಲ್ಲಿ 5 ಕಿಮೀ ಉದ್ದನೆಯ ವಾಹನಗಳ ಸಾಲು ಕಂಡುಬಂದವು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಜಾತ್ರೆಯ ಕೊನೆಯ ಮಂಗಳವಾರ ಸಿಬ್ಬಂದಿ ಕೊರತೆ ಎದ್ದು ಕಾಣಿಸಿತು. ಭಕ್ತರು ಸಂಚಾರ ಸಿಕ್ಕುವಿನಿಂದ ಕಂಗಾಲಾಗಿ ವಾಹನ ಅಲ್ಲಲ್ಲೆ ಬಿಟ್ಟು ಸುಮಾರು 5&6 ಕಿಮೀಗೂ ಅಧಿಕ ಮಾರ್ಗದವರೆಗೆ ಕಾಲ್ನಡಿಗೆ ಮೂಲಕ ತೆರಳುವ ಅನಿವಾರ್ಯತೆ ಎದುರಿಸಿದರು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಸಂಚಾರ ಹಾಗೂ ಸಿಬ್ಬಂದಿ ಸಮರ್ಪಕವಾಗಿರದ ಪರಿಣಾಮ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net