ಮಸೀದಿಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಸಿಬ್ಬಂದಿ ಎಲ್ಲರನ್ನೂ ಒಂದೆಡೆ ಸೇರಿಸದೆ ಮನೆ-ಮನೆಗೆ ತೆರಳಿ ಮಾಹಿತಿ ದಾಖಲಿಸಬೇಕೆಂದು ಸೂಚಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದಂತಾಗಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮೃತಪಟ್ಟವರ ಹೆಸರಲ್ಲೂ ಮತದಾನ ನಡೆಯುತ್ತಿತ್ತು. ವಿಜಯಪುರದಲ್ಲಿ 15,000 ಜನ ಮೃತಪಟ್ಟವರಿದ್ದರು. ಆದರೆ, ಅವರ ಹೆಸರಲ್ಲೂ ಮತದಾನವಾಗಿವೆ. ಇನ್ನು ಮುಂದೆ ಮೃತಪಟ್ಟವರ ಹೆಸರುಗಳು ಕಡಿಮೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ವೋಟ್‌ಬ್ಯಾಂಕ್ ಕುಸಿಯುವ ಭಯ ಕಾಡುತ್ತಿದೆ ಎಂದು ಯತ್ನಾಳ ತಿಳಿಸಿದರು.