ನಿಷ್ಠುರವಾಗಿ ಬರೆಯುವುದು ಸುಲಭದ ಮಾತಲ್ಲ

ಸಿರಿಗೇರಿಯಲ್ಲಿ ಅನ್ನಪೂರ್ಣ ಪ್ರಕಾಶನ ಸಂಸ್ಥೆಯಿಂದ ಆಯೋಜಿಸಿದ್ದ ಪಿ.ಲಂಕೇಶ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎಸ್ಸಿ, ಎಸ್ಟಿ  ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿದರು. ಹೆಚ್ಚುವರಿ ಎಸ್ಪಿ ನವೀನ್ ಕುಮಾರ್, ದೇವಸ್ಥಾನದ ಧರ್ಮಾಧಿಕಾರಿ ಹೂಗಾರ ಬಸವರಾಜ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಅನಿಸಿಕೆ
ಸಿರಿಗೇರಿ: ಮಾಧ್ಯಮ ರಂಗ ಬರವಣಿಗೆಗೆ ಸೀಮಿತವಾಗಿರದೆ ಸಮಾಜದ ಬದಲಾವಣೆ ಬಯಸುತ್ತದೆ ಎಂದು ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹೇಳಿದರು. 
ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಿರಿಗೇರಿ ಯರಿಸ್ವಾಮಿ ಅವರ ಅನ್ನಪೂರ್ಣ ಪ್ರಕಾಶನ ಸಂಸ್ಥೆಯಿಂದ ಕೊಡಗಿನ ಪತ್ರಕರ್ತ ಅನಂತಶಯನ ಅವರಿಗೆ ಪಿ.ಲಂಕೇಶ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
 ವಾಸ್ತವ ಮತ್ತು ಬದ್ಧತೆಯಿಂದ ನಿಷ್ಠುರವಾಗಿ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಕೌಟುಂಬಿಕ ಸಮಸ್ಯೆಗಳನ್ನು ಬದಿಗಿಟ್ಟು ಹೋರಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು. 
ಅನ್ನಪೂರ್ಣ ಪ್ರಕಾಶನ ಸಂಸ್ಥೆಯ ಸಿರಿಗೇರಿ ಯರಿಸ್ವಾಮಿ, ತೆಕ್ಕಲಕೋಟೆ ಸಿಪಿಐ ಚಂದನ್‌ಗೋಪಾಲ್, ಪಿಎಸ್‌ಐ ಶಶಿಧರ ನಾಯಕ್, ಪ್ರಮುಖರಾದ ಶಾನವಾಸಪುರ ಶಾಂತನಗೌಡ, ಬಿ.ಈರಯ್ಯ, ರಮೇಶ್ ಭಜಂತ್ರಿ, ಗೋಪಾಲಪ್ಪ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net