ವೀವರ್ಸ್​ ಕಾಲನಿ, ಶಮಿಗಿರಿ ಕ್ಷೇತ್ರದಲ್ಲಿ ಸ್ವಾಮಿಯ ಆರಾಧನೆ / NELAMANGAL

ಬಸವನಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಇತರರು ಇದ್ದರು.
ಬಸವನಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಇತರರು ಇದ್ದರು.
Published on
ನೆಲಮಂಗಲ : ನಗರದ ವೀವರ್ಸ್​ ಕಾಲನಿಯ ಶ್ರೀ ಲಕ್ಷಿ$್ಮ ವೆಂಕಟೇಶ್ವರ ಸ್ವಾಮಿ ಮತ್ತು ಶಮಿಗಿರಿ ಕ್ಷೇತ್ರವೆಂದೆ ಪ್ರಸಿದ್ಧಿಯಾದ ಬಸವನಹಳ್ಳಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ವೈಕುಂಠ ಏಕಾದಶಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳವಾರ ದೇವಾಲಯಗಳಲ್ಲಿನ ಮಹಾಗಣಪತಿ, ವೈನತೇಯ ಸಮೇತ ಶ್ರೀ ಲಕ್ಷ್ಮೀವೆಂಕಟೇಶ್ವರ, ಲಕ್ಷ್ಮೀ ವೆಂಕರಮಣ ಪ್ರಮುಖ ದೇವರಿಗೆ ಆಭರಣ ಹಾಗೂ ವಿಶೇಷ ಹೂವಿನ ಅಲಂಕಾರ ಜತೆಗೆ ಸುಪ್ರಭಾತ ಸೇವೆ, ಧೂಪ ದೀಪ, ಚಾಮರ, ವ್ಯಂಜನ ಸೇವೆ ಅಭಿಷೇಕಗಳಂತಹ ವಿಶೇಷ ಪೂಜಾವಿಧಿ ನೆರವೇರಿಸಲಾಯಿತು.
ಬಸವನಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಬ್​, ಸದಸ್ಯ ಪ್ರದಿಪ್​, ಹೆಚ್ಚುವರಿ ಸದಸ್ಯ ಕೃಪಾನಂದ್​, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಹಿಳಾ ಮೊರ್ಚಾ ತಾಲೂಕು ಅಧ್ಯಕ್ಷೆ ಮಂಜುಳಾಸುರೇಶ್​, ಕರವೇ ರಾಜ್ಯ ಉಪಾಧ್ಯಕ್ಷ ಉಮೇಶ್​ಗೌಡ ಪೂಜೆ ಸಲ್ಲಿಸಿದರು.
ತಾಪಂ ಮಾಜಿ ಸದಸ್ಯ ವರದನಾರಾಯಣ್​, ಟಿಎಪಿಸಿಎಂಎಸ್​ ನಿರ್ದೇಶಕ ನರಸಿಂಹಮೂರ್ತಿ, ವಕೀಲ ನಾಗೇಶ್​, ಮುಖಂಡ, ಸ್ಟುಡಿಯೋ ಮಂಜುನಾಥ್​, ರವಿಕುಮಾರ್​, ಅರುಣ್​ಕುಮಾರ್​, ಶ್ರೀನಿವಾಸ್​, ಆಂಜಿನಪ್ಪ, ಲಕ್ಷ್ಮೀವೆಂಕಟೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಂ.ನಾರಾಯಣ್​, ಪದಾಧಿಕಾರಿಗಳಾದ ಎಂ.ಗಂಗರಾಜು, ನಾರಾಯಣ್​ರಾವ್​, ಲೋಕೇಶ್​, ಹನುಮಂತಪ್ಪ, ನಂದಕುಮಾರ್​, ಹೇಮಂತ್​, ಸುರೇಶ್​, ಹೇಮಮೂರ್ತಿ ಇತರರು ದೇವರ ದರ್ಶನ ಪಡೆದರು.
ಆಕರ್ಷಕ ದ್ವಾರ : ನಗರದ ವೀವರ್ಸ್​ ಕಾಲನಿ, ಬಸವನಹಳ್ಳಿ 2 ದೇಗುಲಗಳಲ್ಲೂ ಪ್ರವೇಶ ದ್ವಾರದ ಉತ್ತರ ದಿಕ್ಕಿನಲ್ಲಿ ಸಪ್ತ ವೈಕುಂಠ ದ್ವಾರ ನಿರ್ಮಿಸಿದ್ದು, ಭಕ್ತರನ್ನು ಆಕರ್ಷಿಸಿತು. ಮೂಲ ದೇವರ ದರ್ಶನ ಪಡೆದ ಭಕ್ತರು ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀವೆಂಕಟರಮಣನ ತೂಗುವ ಉಯ್ಯಲೆಯಲ್ಲಿ ಇಟ್ಟಿದ್ದು, ಕೆಳಭಾಗದಲ್ಲಿ ಹಾದು ಹೋಗಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಾಲಯ ಸಮಿತಿಯಿಂದ ಲಡ್ಡು ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.
ಹನುಮ ದೇಗುಲಗಳಲ್ಲಿ ವಿಶೇಷ ಪೂಜೆ : ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬೈರಶೆಟ್ಟಿಹಳ್ಳಿ ಮತ್ತು ಚೆನ್ನಪ್ಪ ಬಡಾವಣೆ ಹನುಮನ ದೇವಾಲಯಗಳಲ್ಲೂ ಏಕಾದಶಿ ಆಚರಿಸಲಾಯಿತು. ನಗರದ ಚೆನ್ನಪ್ಪ ಬಡಾವಣೆ ಶ್ರೀ ಆಂಜನೇಯ ದೇವರಿಗೆ ಮಾಡಿದ ಹೂವಿನ ಅಲಂಕಾರ ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net