ಗುಣಮಟ್ಟದ ಶಿಕ್ಷಣಕ್ಕೆ ನವೀನ ತಂತ್ರಜ್ಞಾನ ಅವಶ್ಯಕ

ಕೆಎಲ್ಇ ಫಾರ್ಮಸಿ ಕಾಲೇಜಿನಲ್ಲಿ ಕಾರ್ಯಾಗಾರ ಯಶಸ್ವಿ
ಕೆಎಲ್ಇ ಫಾರ್ಮಸಿ ಕಾಲೇಜಿನಲ್ಲಿ ಕಾರ್ಯಾಗಾರ ಯಶಸ್ವಿ
Published on

ಪ್ರಮುಖ ಮುಖ್ಯಾಂಶಗಳು

  • ಕೆಎಲ್ಇ ಫಾರ್ಮಸಿ ಕಾಲೇಜಿನಲ್ಲಿ ಕಾರ್ಯಾಗಾರ ಯಶಸ್ವಿ
  • ಬೆಳಗಾವಿ ಬಸವನ ಕುಡಚಿಯಲ್ಲಿರುವ ಕಾಲೇಜು
  • ಶಿಕ್ಷಣದಲ್ಲಿ ತಂತ್ರಜ್ಞಾನ ಕುರಿತು ಆಯೋಜಿಸಿದ್ದ ಕಾರ್ಯಾಗಾರ

ಗುಣಮಟ್ಟದ ಶಿಕ್ಷಣಕ್ಕೆ ನವೀನತೆ ಅವಶ್ಯ
| ಪ್ರಾಂಶುಪಾಲ ಡಾ.ಸುನೀಲ ಜಲಾಲಪುರ ಅಭಿಪ್ರಾಯ | ಕಾರ್ಯಾಗಾರ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:

ಆರೋಗ್ಯ ಕ್ಷೇತ್ರದ ಶಿಕ್ಷಣ ಗುಣಮಟ್ಟ ಸುಧಾರಿಸಲು ವಿಕಸನಗೊಳ್ಳುತ್ತಿರುವ ಶೈಕ್ಷಣಿಕ ಅವಶ್ಯಕತೆ ಪೂರೈಸಲು ನವೀನ ತಂತ್ರಜ್ಞಾನ ಮತ್ತು ಆಧುನಿಕ ಬೋಧನೆ-ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಕೆಎಲ್ ಐ ಕಾಲೇಜು ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ.ಸುನೀಲ ಜಲಾಲಪುರ ಅಭಿಪ್ರಾಯಪಟ್ಟರು.
ಸ್ಥಳೀಯ ಬಸವನ ಕುಡಚಿಯಲ್ಲಿರುವ ಕೆಎಲೈ ಕಾಲೇಜೈ ಆಫ್ ಫಾರ್ಮಸಿಯಲ್ಲಿ ಫಾರ್ಮಾಕಾಗ್ನೋಸಿ ವಿಭಾಗವು, ಡಿಪಾರ್ಟ್ಮೆಂಟ್ ಆಫ್ ಫಾರ್ಮಸಿ ಎಜುಕೇಶನ್ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲಿಕೆ ನಿರ್ವಹಣಾ ವ್ಯವಸ್ಥೆಗಳು : ಡಿಜಿಟಲ್ ಶಿಕ್ಷಣದ ಮೂಲಕ ಬೋಧನಾ ಶ್ರೇಷ್ಠತೆಯನ್ನು ಹೆಚ್ಚಿಸುವುದು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರ ಬಗ್ಗೆ.
ಬೋಧನಾ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ವಿದ್ಯಾರ್ಥಿ ಕೇಂದ್ರಿತ ಕಲಿಕೆಯನ್ನು ಉತ್ತೇಜಿಸುವಲ್ಲಿ, ಆಧುನಿಕ ಯುಗದ ಉನ್ನತ ಶಿಕ್ಷಣದಲ್ಲಿ ಬದಲಾಗುತ್ತಿರುವ ಅಗತ್ಯತೆ ಪೂರೈಸಲು ಕಲಿಕಾ ನಿರ್ವಹಣಾ ವ್ಯವಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಆಯೋಜಿಸಲಾಗಿದೆ.
ಸಂಪನ್ಮೂಲ ವ್ಯಕ್ತಿ ಡಾ.ರಮೇಶ ಭಂಡಾರಿ ಅವರು ಕಲಿಕಾ ನಿರ್ವಹಣಾ ವ್ಯವಸ್ಥೆಗಳು: ಅಡಿಪಾಯ ಕುರಿತು ಉಪನ್ಯಾಸ,
ಉಪ ಪ್ರಾಂಶುಪಾಲ ಡಾ.ಎಂ.ಬಿ.ಪಾಟೀಲ, ಡಾ.ಗೀತಾಂಜಲಿ ಸಾಲಿಮಠ, ಡಾ.ಡಿ.ಎನ್.ಶಾಸ್ತ್ರಿ ಡಾ.ಸತೀಶ ಕವಟಗಿಮಠ, ಡಾ.ಸ್ನೇಹಾ ಪಾಟೀಲ, ಡಾ.ಅಕ್ಷಯ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net