ಕಾರ್ಮಿಕರಿಗೆ ಕಾನೂನು ಅರಿವು ಅಗತ್ಯ

ಬನಹಟ್ಟಿಯ ಕೆಎಂಎಫ್ ಅಡಿಯಲ್ಲಿನ ಡೆಂಪೋಡೇರಿ ಹಾಲಿನ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ಆಶಪ್ಪ ಸಣಮನಿ ಉದ್ಘಾಟಿಸಿದರು. ಸಿದ್ಧೇಗೌಡ ಬಿ.ಎಸ್. ರವೀಂದ್ರ ಸಂಪಗಾಂವಿ, ಆರ್.ಜೆ. ಶಹಾ, ವರ್ಧಮಾನ ಕೋರಿ, ಹರ್ಷವರ್ಧನ ಪಟವರ್ಧನ, ಕೆ.ಜಿ. ಸಾಲಗುಡೆ, ವಿ.ಬಿ. ಖೇಮನ್ನವರ, ಎಂ.ಬಿ. ದರೂರ ಇತರರಿದ್ದರು.
ಬನಹಟ್ಟಿಯ ಕೆಎಂಎಫ್ ಅಡಿಯಲ್ಲಿನ ಡೆಂಪೋಡೇರಿ ಹಾಲಿನ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ಆಶಪ್ಪ ಸಣಮನಿ ಉದ್ಘಾಟಿಸಿದರು. ಸಿದ್ಧೇಗೌಡ ಬಿ.ಎಸ್. ರವೀಂದ್ರ ಸಂಪಗಾಂವಿ, ಆರ್.ಜೆ. ಶಹಾ, ವರ್ಧಮಾನ ಕೋರಿ, ಹರ್ಷವರ್ಧನ ಪಟವರ್ಧನ, ಕೆ.ಜಿ. ಸಾಲಗುಡೆ, ವಿ.ಬಿ. ಖೇಮನ್ನವರ, ಎಂ.ಬಿ. ದರೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ನ್ಯಾಯಾಧೀಶ ಆಶಪ್ಪ ಸಣಮನಿ ಹೇಳಿಕೆ
  • ಕಾನೂನು ಅರಿವು-ನೆರವು ಕಾರ್ಯಕ್ರಮ
ರಬಕವಿ/ಬನಹಟ್ಟಿ: ಕಾರ್ಮಿಕರಿಗೆ ತಮ್ಮ ಹಕ್ಕುಗಳ ಹಾಗೂ ಕಾನೂನುಗಳ ಅರಿವು ಇದ್ದಾಗ ಮಾತ್ರ ಸರ್ಕಾರದಿಂದ ಲಭ್ಯವಾಗುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಸಾಧ್ಯ ಎಂದು ಹಿರಿಯ ನ್ಯಾಯಾಧೀಶ ಆಶಪ್ಪ ಸಣಮನಿ ಹೇಳಿದರು.
ಬನಹಟ್ಟಿಯ ಕೆಎಂಎಫ್ ಅಡಿಯಲ್ಲಿನ ಡೆಂಪೋ ಡೈರಿ ಹಾಲಿನ ಕೇಂದ್ರದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಹಿತಾಸಕ್ತಿಗಾಗಿ ಸರ್ಕಾರ ವಿಶೇಷ ಇಲಾಖೆಯನ್ನು ಸ್ಥಾಪಿಸಿದ್ದು, ಯಾವುದೇ ರೀತಿಯ ದೌರ್ಜನ್ಯ ಅಥವಾ ವೇತನ-ಸೌಲಭ್ಯಗಳ ವಂಚನೆ ಕಂಡುಬಂದಲ್ಲಿ ಸಂಬಂಧಿತ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ಕರೆ ನೀಡಿದರು. ಮಹಿಳಾ ಕಾರ್ಮಿಕರ ಮೇಲಿನ ಲಿಂಗಭೇದ ಹಾಗೂ ಕಿರುಕುಳ ಪ್ರಕರಣಗಳಿಗೆ ಕಾನೂನು ಸಹಾಯ ಲಭ್ಯವಿದ್ದು, ಅಗತ್ಯವಿದ್ದಲ್ಲಿ ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಾಗರ ಕುಲಕರ್ಣಿ ಮಾತನಾಡಿ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಕಾನೂನು ಸಮಿತಿಗಳಿಂದ ಉಚಿತ ಸಲಹೆ ಪಡೆಯಬಹುದಾಗಿದೆ ಎಂದರು.
ಡೆಂಪೋ ಡೈರಿ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಸಿದ್ಧೇಗೌಡ ಮಾತನಾಡಿ, ಕಾರ್ಮಿಕರು ದೇಶದ ಅಭಿವದ್ಧಿಗೆ ಪ್ರಮುಖ ಶಕ್ತಿ ಎಂದರು. ಆದರೆ ಶಿಕ್ಷಣದ ಕೊರತೆಯಿಂದ ಹಲವರು ಸಂಘಟಿತವಾಗದೆ ಇರುವುದನ್ನು ವಿಷಾದನೀಯ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ರವೀಂದ್ರ ಸಂಪಗಾಂವಿ, ಆರ್.ಜೆ. ಶಹಾ, ವರ್ಧಮಾನ ಕೋರಿ ಉಪನ್ಯಾಸ ನೀಡಿದರು. ನ್ಯಾಯವಾದಿಗಳಾದ ಹರ್ಷವರ್ಧನ ಪಟವರ್ಧನ, ಕೆ.ಜಿ. ಸಾಲಗುಡೆ, ವಿ.ಬಿ. ಖೇಮನ್ನವರ, ಎಂ.ಬಿ. ದರೂರ, ಎಸ್.ಬಿ. ಜಿಡ್ಡಿಮನಿ, ಕೆ.ಎಸ್. ನ್ಯಾಮಗೌಡ, ಬಿ.ಆರ್. ಮದರಖಂಡಿ, ರಮೇಶ ವಾಂಗಿ, ಅಶ್ವಿನಿ ಹಾರೂಗೇರಿ, ಪ್ರಸನ್ನ ಬಾಣಕಾರ ಸೇರಿ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net