ಹೊಣೆಯಿಂದ ನುಣಿಚಿಕೊಳ್ಳದೇ ಕೆಲಸ ಮಾಡಿ / NELAMANGAL

ನೆಲಮಂಗಲದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಎಲ್​ಒ&-2 ಕಾರ್ಯಾಗಾರದಲ್ಲಿ ವಿಧಾನ ಪರಿಷತ್​ ಮಾಜಿ ಸದಸ್ಯ ಇ.ಕೃಷ್ಣಪ್ಪ, ಬಮುಲ್​ ನಿರ್ದೇಶಕ ಭವಾನಿಶಂಕರ್​ಬೈರೇಗೌಡ, ನಗರಸಭೆ ಸದಸ್ಯ ಶಿವಕುಮಾರ್​, ಅಂಜನಮೂರ್ತಿ, ಪುಷ್ಪಲತಾ ಮಾರೇಗೌಡ, ಜೆಡಿಎಸ್​ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್​ರಾಜು ಇತರರು ಇದ್ದರು.
ನೆಲಮಂಗಲದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಎಲ್​ಒ&-2 ಕಾರ್ಯಾಗಾರದಲ್ಲಿ ವಿಧಾನ ಪರಿಷತ್​ ಮಾಜಿ ಸದಸ್ಯ ಇ.ಕೃಷ್ಣಪ್ಪ, ಬಮುಲ್​ ನಿರ್ದೇಶಕ ಭವಾನಿಶಂಕರ್​ಬೈರೇಗೌಡ, ನಗರಸಭೆ ಸದಸ್ಯ ಶಿವಕುಮಾರ್​, ಅಂಜನಮೂರ್ತಿ, ಪುಷ್ಪಲತಾ ಮಾರೇಗೌಡ, ಜೆಡಿಎಸ್​ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್​ರಾಜು ಇತರರು ಇದ್ದರು.
Published on
ನೆಲಮಂಗಲ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್​ಐಆರ್​) ವೇಳೆ ಜೆಡಿಎಸ್​ ಬಿಎಲ್​ಎ&2 ಪದಾಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ನಗರದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್​ನಿಂದ ಆಯೋಜಿಸಿದ್ದ ಮತದಾನ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಬಿಎಲ್​ಒ&-2 ಕಾರ್ಯಾಗಾರದಲ್ಲಿ ಮಾತನಾಡಿದರು.ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದೆ. ಪ್ರತಿ ಮತವೂ ಅಮೂಲ್ಯವಾಗಿದ್ದು, ಕಾರ್ಯಕರ್ತರು ಹದ್ದಿನ ಕಣ್ಣಿನಂತೆ ಎಚ್ಚರಿಕೆ ವಹಿಸಬೇಕಿದೆ. ಮತದಾರರ ಪರಿಷ್ಕರಣೆ ಸೂಕ್ಷ್ಮ ವಿಚಾರವಾಗಿದ್ದು, ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇದೆ. ಒಂದು ವೇಳೆ ಮತದಾನ ಮಾಡದಿದ್ದರೇ ಆ ವ್ಯಕ್ತಿಯ ಅಸ್ತಿತ್ವವೇ ಕಳೆದುಕೊಂಡಂತಾಗುತ್ತದೆ. ಹಾಗಾಗಿಅರ್ಹ ಮತದಾರರ ಹೆಸರನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆಲ ಅಕ್ರಮ ಮತಗಳನ್ನು ಮತಪಟ್ಟಿಯಿಂದ ಕೈ ಬಿಡಬೇಕು. ಕ್ಷೇತ್ರದಾದ್ಯಂತ 276 ಬೂತ್​ಗಳಲ್ಲಿ ಜೆಡಿಎಸ್​ನಿಂದ ಬಿಎಲ್​ಒ&2 ಕಾರ್ಯಕರ್ತರ ನೇಮಕ ಮಾಡಲಾಗಿದೆ. ಮುಂಬರುವ ಗ್ರಾಪಂ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಜೆಡಿಎಸ್​ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್​ ಮಾತನಾಡಿ, ರಾಜ್ಯದಲ್ಲಿ 2028ಕ್ಕೆ ಜೆಡಿಎಸ್​ ಅಧಿಕಾರಕ್ಕೆ ಬರಲಿದ್ದು, ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್​ ಶಾಸಕರು ಇರುವ ಕ್ಷೇತ್ರದಲ್ಲಿ ದಬ್ಬಾಳಿಕೆ ಹೆಚ್ಚಾಗಿದೆ. ಜತೆಗೆ ಗ್ಯಾರಂಟಿ ಎಂದು ಸರ್ಕಾರದ ಹಣ ಲೂಟಿ ಮಾಡುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಬಿಎಲ್​ಒ&2ಗಳ ತಳಮಟ್ಟದಲ್ಲಿ ಮತದಾರ ಪರಿಷ್ಕರಣೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಮತಗಳನ್ನು ಸುರಕ್ಷಿಸಬೇಕಿದೆ ಎಂದರು.
ಅಭಿನಂದನೆ : ಇತ್ತೀಚೆಗೆ ಜೆಡಿಎಸ್​ನ ನೂತನ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಮಂಜುನಾಥ್​ ಅವರನ್ನು ಕಾರ್ಯಕರ್ತರು ಹಾಗೂ ಮುಖಂಡರು ಸನ್ಮಾನಿಸಿದರು. ಜೆಡಿಎಸ್​ ರಾಜ್ಯ ವಕ್ತಾರ ಪ್ರವಿಣ್​ಕುಮಾರ್​ ಅವರ ಮತದಾರ ಸಮಗ್ರ ಪರಿಷ್ಕರಣೆ ಕುರಿತು ವಿಶೇಷ ಕಾರ್ಯಾಗಾರ ಮೂಲಕ ಬಿಎಲ್​ಒ&2ಗೆ ಮಾಹಿತಿ ನೀಡಿದರು.
ಜಿಪಂ ಮಾಜಿ ಸದಸ್ಯ ಚಲುವರಾಜು, ತಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ಮಾಜಿ ಸದಸ್ಯ ವರದನಾರಾಯಣ್​, ಬೆಟ್ಟೇಗೌಡ, ರುದ್ರೇಶ್​, ಮುಖಂಡ ಬಿ.ಕೆ.ತಿಮ್ಮರಾಜು, ಭವಾನಿಶಂಕರ್​ಮಂಜುನಾಥ್​, ಬಿ.ಎಂ.ಶ್ರೀನಿವಾಸ್​, ಸಂಪತ್​ಬಾಬು, ಮೋಹನ್​ಕುಮಾರ್​, ಗುರುಪ್ರಸಾದ್​, ಸುರೇಶ್​, ಕನಕರಾಜು, ಜಗಜ್ಯೋತಿಬಸವೇಶ್ವರ, ಮಂಜಮ್ಮ, ಲೀಲಾಕುಮಾರ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net