ಬಿಜೆಪಿ ಬಲವರ್ಧನೆಗೆ ಶ್ರಮಿಸಿ / ANEKAL

ಬನ್ನೇರುಘಟ್ಟದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಮತ್ತು ಜವಾಬ್ದಾರಿ ಹಂಚಿಕೆ ಕಾರ್ಯಕ್ರಮವನ್ನು ಶಾಸಕ ಎಂ.ಕೃಷ್ಣಪ್ಪ ಉದ್ಘಾಟಿಸಿದರು. ಬೆಂ.ದಕ್ಷಿಣ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಯಾರಂಡಹಳ್ಳಿ ಹರೀಶ್​ ರೆಡ್ಡಿ, ಎಡಿಎ ಮಾಜಿ ಅಧ್ಯಕ್ಷ ರಾಜಶೇಖರ್​ ರೆಡ್ಡಿ, ಬೆಂ.ದಕ್ಷಿಣ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಕೇಶವ್​ ರಾಜ್​, ಬಿಜೆಪಿ ನಾಯಕರು, ಕಾರ್ಯಕರ್ತರು ಇದ್ದರು.

Published on
ಆನೇಕಲ್​ : ಬೆಂಗಳೂರು ದಕ್ಷಿಣ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿದ್ದು, ಈ ಭಾಗದಲ್ಲಿ ಕಾರ್ಯಕರ್ತರು ಹಾಗೂ ಜವಾಬ್ದಾರಿ ಪಡೆದವರು ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ಸ್ಥಳಿಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಎಂ.ಕೃಷ್ಣಪ್ಪ ಹೇಳಿದರು.
ಬನ್ನೇರುಘಟ್ಟದ ಖಾಸಗಿ ಸಭಾಂಗಣದಲ್ಲಿ ಬೆಂ.ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಮತ್ತು ಜವಾಬ್ದಾರಿ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇವೇಳೇ ಕ್ಷೇತ್ರದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾಗಿ ಶಶಿಕುಮಾರ್​, ಪರಶುರಾಮ್​, ಗ್ರಾಮಾಂತರ ಬಿಜೆಪಿ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಭಾರತಿ ವೆಂಕಟೇಶ್​ ಗೌಡ, ಯುವ ಮೋರ್ಚಾ ಅಧ್ಯಕ್ಷರಾಗಿ ನವೀನ್​ ರೆಡ್ಡಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ರಘುರಾಮ್​, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಜೆಸಿ.ಕೃಷ್ಣಪ್ಪ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಮನ್ಸೂರ್​ ಸಾಬ್​, ರೈತ ಮೋರ್ಚಾ ಅಧ್ಯಕ್ಷರಾಗಿ ಚೇತನ್​, ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರಾಗಿ ಅಮಿತ್​ ಅವರನ್ನು ನೇಮಿಸಿ, ಆದೇಶ ಪತ್ರ ಹಸ್ತಾಂತರಿಸಲಾಯಿತು.
ನರೇಂದ್ರ ಮೋದಿ ಸರ್ಕಾರ 12ವರ್ಷ ಪೂರೈಸಿದ ಹಿನ್ನೆಲೆಯಲ್ಲೆಯಲ್ಲಿ ಹೆನ್ನಾಗರ ಗ್ರಾಪಂ ವ್ಯಾಪ್ತಿಯ ಯಾರಂಡಳ್ಳಿಯಿಂದ ಬೈಕ್​ ರ್ಯಾಲಿ ಮೂಲಕ ಬನ್ನೇರುಘಟ್ಟಕ್ಕೆ ತೆರಳಿ, ಚಂಪಕಧಾಮ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net