ಯಕ್ಷಗಾನದಲ್ಲೂ ಮಹಿಳೆಯರ ಸಾಧನೆ ಅನನ್ಯ; ಡಾ.ಪೂರ್ಣಿಮ ಬಣ್ಣನೆ; ಮಹಿಳಾ ಯಕ್ಷೋತ್ಸವಕ್ಕೆ ಚಾಲನೆ

ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಯಕ್ಷೋತ್ಸವ ಕಾರ್ಯಕ್ರಮಕ್ಕೆ ಹಿರಿಯ ಲೇಖಕಿ ಡಾ.ಆರ್.ಪೂರ್ಣಿಮಾ ಚಾಲನೆ ನೀಡಿದರು. ಸಂಸ್ಥೆಯ ನಿರ್ದೇಶಕಿ ಗೌರಿ ಕೆ. ಸಾಸ್ತಾನ, ಯಕ್ಷಗುರು ಶ್ರೀನಿವಾಸ ಸಾಸ್ತಾನ ಮತ್ತಿತತರರು ಉಪಸ್ಥಿತರಿದ್ದರು.
ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಯಕ್ಷೋತ್ಸವ ಕಾರ್ಯಕ್ರಮಕ್ಕೆ ಹಿರಿಯ ಲೇಖಕಿ ಡಾ.ಆರ್.ಪೂರ್ಣಿಮಾ ಚಾಲನೆ ನೀಡಿದರು. ಸಂಸ್ಥೆಯ ನಿರ್ದೇಶಕಿ ಗೌರಿ ಕೆ. ಸಾಸ್ತಾನ, ಯಕ್ಷಗುರು ಶ್ರೀನಿವಾಸ ಸಾಸ್ತಾನ ಮತ್ತಿತತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಕ್ಷಗಾನ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಅನನ್ಯ
  • ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ಡಾ. ಆರ್. ಪೂರ್ಣಿಮಾ ಬಣ್ಣನೆ
  • ಮಹಿಳಾ ಯಕ್ಷೋತ್ಸವಕ್ಕೆ - 2026ಕ್ಕೆ ಚಾಲನೆ

ಬೆಂಗಳೂರು: ಯಕ್ಷಗಾನವನ್ನುಸಾಮಾನ್ಯವಾಗಿ ಗಂಡುಕಲೆ ಎಂದೇಕರೆಯಲಾಗುತ್ತಿತ್ತು.ಆದರೆ ಆ ಕ್ಷೇತ್ರದಲ್ಲೂಮಹಿಳೆಯರೂ ಯಕ್ಷಗಾನದ ಎಲ್ಲಪ್ರಕಾರಗಳಲ್ಲಿ ಗಣನೀಯ ಸಾಧನೆಮಾಡಿ ಹೆಸರು ಗಳಿಸುತ್ತಿರುವುದುಹೆಮ್ಮೆಯ ಸಂಗತಿ ಎಂದು ಹಿರಿಯಲೇಖಕಿ ಹಾಗೂ ಕರ್ನಾಟಕ ಪತ್ರಕರ್ತೆಯರಸಂಘದ ಅಧ್ಯಕ್ಷೆ ಡಾ.ಆರ್.ಪೂರ್ಣಿಮಾಬಣ್ಣಿಸಿದ್ದಾರೆ.

ಕರ್ನಾಟಕಮಹಿಳಾ ಯಕ್ಷಗಾನ ಸಂಸ್ಥೆ ಕನ್ನಡಭವನದಲ್ಲಿ ಭಾನುವಾರ ಆಯೋಜಿಸಿದ್ದಮಹಿಳಾ ಯಕ್ಷೋತ್ಸವ -2026 ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದರು.

ಕಳೆದ26 ವರ್ಷಗಳಿಂದಯಕ್ಷಗಾನ ಕ್ಷೇತ್ರದಲ್ಲಿ ಸತತವಾಗಿಶ್ರಮಿಸುತ್ತಿರುವ ಕರ್ನಾಟಕಮಹಿಳಾ ಯಕ್ಷಗಾನ ಸಂಸ್ಥೆಯ ರೂವಾರಿ ಕೆ. ಗೌರಿಅವರ ಕೊಡುಗೆ ಅಪಾರ.ಮಹಿಳೆಯರು,ಯುವತಿಯರು ಮತ್ತುಬಾಲಕಿಯರಿಗೆ ಯಕ್ಷಗಾನ ಕಲೆಯಸೂಕ್ಷ್ಮತೆಗಳನ್ನು ಧಾರೆಯೆರೆದು,ಅವರನ್ನು ಪ್ರಸಂಗರೂಪದಲ್ಲಿ ವೇದಿಕೆಗೆ ತಂದುಯಕ್ಷೋತ್ಸವ ನಡೆಸುತ್ತಿರುವುದುಶ್ಲಾಘನೀಯ ಕೆಲಸ ಎಂದರು.

ವಂದೇಮಾತರಂ’ ಗೀತೆ 150ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಯಕ್ಷಗಾನ ನೃತ್ಯದಮೂಲಕ ಆಡಿ ತೋರಿಸಲಾಯಿತು.ಯಕ್ಷಗಾನ ವಿದ್ವಾಂಸಡಾ. ಆನಂದರಾಮಉಪಾಧ್ಯ, ಸರಳಯೋಗ ವೇದಿಕೆ ಟ್ರಸ್ಟ್ ಕಾರ್ಯಾಧ್ಯಕ್ಷ ಜಯಪ್ರಕಾಶ್ ಎ.ಜಿ.ಕೆ.,ಮಹಿಳಾ ಯಕ್ಷಗಾನಸಂಸ್ಥೆ ನಿರ್ದೇಶಕಿ ಗೌರಿ ಕೆ.ಸಾಸ್ತಾನ,ಯಕ್ಷಗುರುಶ್ರೀನಿವಾಸ ಸಾಸ್ತಾನ ಉಪಸ್ಥಿತರಿದ್ದರು.

ಉತ್ಸವದಅಂಗವಾಗಿ ಯಕ್ಷಗಾನ ಪೂರ್ವರಂಗ,ಕನಕಾಂಗಿ ಕಲ್ಯಾಣಮತ್ತು ಸುದರ್ಶನ ವಿಜಯ ಪೌರಾಣಿಕಪ್ರಸಂಗಗಳು ಮಹಿಳಾ ಕಲಾವಿದೆಯರಿಂದಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net