ಮಹಿಳಾ ನೌಕರರ ಆತ್ಮಬಲ ಹೆಚ್ಚಿಸುವ ಕಾರ್ಯವಾಗಲಿ
| ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ ಸಲಹೆ | ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಮೂಲಕ ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಬೀತುಪಡಿಸಿದ್ದಾಳೆ, ಸರ್ಕಾರಿ ಮಹಿಳಾ ನೌಕರರ ಆತ್ಮಬಲ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘ ಕಾರ್ಯ ಪ್ರವೃತ್ತವಾಗಲಿ ಎಂದು ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ ಸಲಹೆ ಸೂಚನೆ.
ನಗರದ ಕುಮಾರ ಗಂಧರ್ವ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಕಚೇರಿ ಉದ್ಘಾಟನೆ ಹಾಗೂ ಅಖಿಲ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಮತ್ತು ಪುರುಷ ಇಬ್ಬರು ಸಮಾಜದ ಎರಡು ಕಣ್ಣುಗಳಿದಂತೆ. ಪುರುಷರಿಗೆ ನೀಡುವ ಪ್ರಾಧ್ಯಾನತೆ ಮಹಿಳೆಯರಿಗೆ ಎಲ್ಲಾ ರಂಗದಲ್ಲಿ ಸಿಗಬೇಕು.ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತುವ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ತಡೆಯಬೇಕು ಎಂದು ಹೇಳಿದರು.
ಮಹಿಳಾ ಸರ್ಕಾರಿ ನೌಕರರ ಸಂಘದ ಹಕ್ಕು, ಹೋರಾಟಕ್ಕಾಗಿ ಮಾತ್ರ ಸಿಮಿತವಾಗದೇ ,ಮಹಿಳೆಯರ ಆತ್ವವಿಶ್ವಾಸ ತುಂಬುವ ಕಾರ್ಯವಾಗಬೇಕು, ಮಹಿಳೆಯ ಪರ ಸದಾ ನಿಲ್ಲಬೇಕು ಎಂದರು.
ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ಶೈಲಜಾ ಗೌಡ ಮಾತನಾಡಿ ಇಂದು ಉದ್ಯೋಗ ಮಾಡುವ ಮಹಿಳೆ ಕರ್ತವ್ಯದ ಜೊತೆಗೆ ಕುಟುಂಬ ನಿರ್ವಹಣೆಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುವ ಮೂಲಕ ಸಮಾಜಕ್ಕೆ ಆದರ್ಶವಾಗಿದ್ದಾಳೆ.
ಮಹಿಳೆಯರ ಪ್ರಗತಿಯಾದರೇ ಮಾತ್ರ ದೇಶ ಪ್ರಗತಿಯಾಗಲಿದೆ,ಸರ್ಕಾರದ ವಿವಿಧ ಯೋಜನೆಗಳು ಮಹಿಳೆಯರಿಗೆ ಮನೆ ಮನೆಗೆ ತಲುಪಿಸುವ ಮಹತ್ವದ ಕಾರ್ಯ ನೌಕರರು ಕೆಲಸ, ನೌಕರರ ಕಷ್ಟಗಳನ್ನು ಆಲಿಸಲು, ಸದಾ ನೌಕರರೊಂದಿಗೆ ಸಂಘ ಇರಲಿದೆ ಎಂದು ಪ್ರಕಟಿಸಿದರು.
ಇದೇ ವೇಳೆ ಜಿಲ್ಲಾ ಮತ್ತು ತಾಲೂಕು ಪದಾಕಾರಿಗಳ ಪದಗ್ರಹಣ, ಉತ್ತಮ ಕಾರ್ಯ ನಿರ್ವಹಿಸಿದ ಮಹಿಳಾ ನೌಕರರಿಗೆ ಉತ್ತಮ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾಧ್ಯಕ್ಷೆ ಗೀತಾ ದಳವಾಯಿ,ಉಪಾಧ್ಯಕ್ಷೆ ವಿದ್ಯಾವತಿ ಭಜಂತ್ರಿ,ಪ್ರಧಾನ ಕಾರ್ಯದರ್ಶಿ ಡಾ.ಕೃಪಾಲಿನಿ ಗಡದವರ,ಕೋಶಾಧ್ಯಕ್ಷೆ ಗೀತಾ ಭಜಂತ್ರಿ,ಬಸವರಾಜ ರಾಯವಗೋಳ,ಮಲಗೌಡ ಪಾಟೀಲ ಇತರರಿದ್ದರು.