ಮಹಿಳೆ ಸರ ಅಪಹರಣ

ಮಹಿಳೆ ಸರ ಅಪಹರಣ
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನ ಗವಿಕುಂಟಹಳ್ಳಿಯಲ್ಲಿ ಗುರುವಾರ ಹಸುಗಳನ್ನು ಮೇಯಿಸಲು ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಬೈಕ್​ನಲ್ಲಿ ಬಂದ ಇಬ್ಬರು ಕಳ್ಳರು ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.
  • ಗವಿಕುಂಟಹಳ್ಳಿಯ ಮಹಿಳೆ ಸಾವಿತ್ರಮ್ಮ ಸರ ಕಳೆದುಕೊಂಡವರು.
  • ಮನೆಯಿಂದ ಹಸುಗಳನ್ನು ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಬಂದ ಕಳ್ಳರು ಬೈಕ್​ ಸರಿಪಡಿಸಿಕೊಳ್ಳುವಂತೆ ನಟಿಸಿ ಮಹಿಳೆ ಹತ್ತಿರ ಹೋಗುತ್ತಿದ್ದಂತೆ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಗುಡಿಬಂಡೆ: ತಾಲೂಕಿನ ಗವಿಕುಂಟಹಳ್ಳಿಯಲ್ಲಿ ಗುರುವಾರ ಹಸುಗಳನ್ನು ಮೇಯಿಸಲು ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಬೈಕ್​ನಲ್ಲಿ ಬಂದ ಇಬ್ಬರು ಕಳ್ಳರು ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಗವಿಕುಂಟಹಳ್ಳಿಯ ಮಹಿಳೆ ಸಾವಿತ್ರಮ್ಮ ಸರ ಕಳೆದುಕೊಂಡವರು. ಮನೆಯಿಂದ ಹಸುಗಳನ್ನು ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಬಂದ ಕಳ್ಳರು ಬೈಕ್​ ಸರಿಪಡಿಸಿಕೊಳ್ಳುವಂತೆ ನಟಿಸಿ ಮಹಿಳೆ ಹತ್ತಿರ ಹೋಗುತ್ತಿದ್ದಂತೆ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಗುಡಿಬಂಡೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲಿಸಿ, ಗೌರಿಬಿದನೂರು ತಾಲೂಕಿನ ರಾಮಚಂದ್ರಪುರದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net