ಚಿಂತಾಮಣಿ: ನಗರದ ರಾಷ್ಟ್ರೀಯ ಹೆದ್ದಾರಿ ಎಂ.ಜಿ.ರಸ್ತೆ ಸಮೀಪದ ಕಸದ ರಾಶಿಯಲ್ಲಿ ಪ್ರಜ್ಞಾಹಿನ ಸ್ಥಿತಿಯಲ್ಲಿ ಬಿದ್ದಿದ್ದ ಸುಮಾರು 45 ವರ್ಷ ವಯಸ್ಸಿನ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.
ಮಹಿಳೆ ಪ್ಲೆಕ್ಸ್, ಪೇಪರ್ನ್ನು ಹೊದ್ದ್ದುಕೊಂಡಂತೆ ಮಲಗಿರುವುದನ್ನು ಸ್ಥಳಿಯರು ಗಮನಿಸಿ ನಗರಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರ ಸಹಕಾರದದೊಂದಿಗೆ ಮಹಿಳೆಯನ್ನು ರಸಿ, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಈಕೆ ಯಾರು, ಎಲ್ಲಿಯವರು ಮತ್ತು ಇಲ್ಲಿಗೆ ಹೇಗೆ ಬಂದರು ಎಂಬ ಮಾಹಿತಿ ಇನ್ನು ತಿಳಿದುಬಂದಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.