ಚಿಕಿತ್ಸೆ ಲಿಸದೆ ಮಹಿಳೆ ಸಾವು

Woman dies without treatment
Woman dies without treatment
Published on
ಚಿಕ್ಕಬಳ್ಳಾಪುರ: ಅನಾರೋಗ್ಯ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ತೌಡನಹಳ್ಳಿಯ ರಮೇಶ್​ ಅವರ ಪತ್ನಿ ಮಂಜುಳಾ (36) ಗುರುವಾರ ಮೃತಪಟ್ಟಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸೌತೇನಹಳ್ಳಿಯ ಮಂಜುಳಾ ಅವರನ್ನು 16 ವರ್ಷಗಳ ಹಿಂದೆ ರಮೇಶ್​ ಅವರು ವಿವಾಹವಾಗಿದ್ದರು. ಇತ್ತೀಚೆಗೆ ಸೌತೇನಹಳ್ಳಿಯಲ್ಲಿ ಕುಟುಂಬದ ಸದಸ್ಯರೊಬ್ಬರ ಸಾವಿಗೆ ಹೋಗಿ ಬಂದ ಮೇಲೆ ಮಂಜುಳಾ ವಿಚಿತ್ರವಾಗಿ ವರ್ತಿಸುತ್ತಿದ್ದರು. ಇದರ ನಡುವೆ ನಿತ್ರಾಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾವಿನ ಬೆನ್ನಲ್ಲೇ ಕುಟುಂಬಸ್ಥರು, ಭೂತಚೇಷ್ಟೆಯ ಕಾಟ ಎಂಬುದಾಗಿ ಹೇಳುತ್ತಿರುವುದು ಚರ್ಚೆಗ್ರಾಸವಾಗಿದೆ.
ಬೇರೆ ಬೇರೆ ಆಸ್ಪತ್ರೆಗಳಲ್ಲಿ ತೋರಿಸಿದರೂ ಸಮಸ್ಯೆ ಏನೆಂದು ಗೊತ್ತಾಗಲಿಲ್ಲ. ಭೂತದ ಕಾಟ ಎಂಬ ಮಾತಿನ ಹಿನ್ನೆಲೆಯಲ್ಲಿ ಮಂತ್ರ ಹಾಕಿಸಲಾಯಿತು ಎಂದು ಮೃತಳ ಪತಿ ರಮೇಶ್​ ತಿಳಿಸಿದ್ದಾರೆ. ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆಕೆಯ ಸಾವಿನಿಂದ ಅಘಾತವಾಗಿದೆ ಎಂದು ಮಂಜುಳಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net