ಬೈಕ್​ನಿಂದ ಬಿದ್ದು ಮಹಿಳೆ ಮೃತ್ಯು

Woman dies after falling off bike
Woman dies after falling off bike
Published on
ಮುಳಬಾಗಿಲು: ಶ್ರೀನಿವಾಸಪುರ ತಾಲೂಕು ಚಿಂತಮಾಕಲಪಲ್ಲಿ ಗ್ರಾಮದ ಸಮೀಪದ ರಸ್ತೆಯಲ್ಲಿ ದ್ವಿಚಕ್ರ ವಾಹನದ ಹಿಂಭಾಗ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ತಾಲೂಕಿನ ಮುಡಿಯನೂರು ಗ್ರಾಮದ ಲಕ್ಷ$್ಮದೇವಮ್ಮ(55) ಮೃತೆ. ಮುಡಿಯನೂರು ಗ್ರಾಮದಿಂದ ಮಗ ಮಲ್ಲಿಕಾರ್ಜುನ್​ ಜತೆ ದ್ವಿಚಕ್ರ ವಾಹನದಲ್ಲಿ ನೆಂಟರ ಮನೆಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net