ವಿದ್ಯುತ್​ ತಗುಲಿ ಮಹಿಳೆ ಸಾವು

Woman dies after being electrocuted
Woman dies after being electrocuted
Published on
ಚಿಂತಾಮಣಿ: ತಾಲೂಕಿನ ಗುಂಡ್ಲಹಳ್ಳಿಯಲ್ಲಿ ಬುಧವಾರ ವಿದ್ಯುತ್​ ತಗುಲಿ ರತ್ನಮ್ಮ(43) ಎಂಬುವರು ಮೃತಪಟ್ಟಿದ್ದಾರೆ.
ಶೌಚಗೃಹ ಮೇಲೆ ಹಾದು ಹೋಗಿದ್ದ ವಿದ್ಯುತ್​ ತಂತಿ ಬುಧವಾರ ಮಧ್ಯಾಹ್ನ ಬೀಸಿದ ಜೋರಾದ ಗಾಳಿಯಿಂದ ತುಂಡಾಗಿ ಶೀಟ್​ ಮೇಲೆ ಬಿದ್ದು ಶೌಚಗೃಹಕ್ಕೆ ಅಳವಡಿಸಿದ್ದ ಕಬ್ಬಿಣದ ಬಾಗಿಲಿಗೂ ವಿದ್ಯುತ್​ ಪ್ರವಹರಿಸಿದೆ. ಈ ಬಗ್ಗೆ ಅರಿವಿಲ್ಲದ ರತ್ನಮ್ಮ ಶೌಚಗೃಹದ ಬಾಗಿಲನ್ನು ತೆಗೆಯಲು ಹೋದಾಗ ವಿದ್ಯುತ್​ ತಗುಲಿ ಕುಸಿದು ಬಿದ್ದಿದ್ದಾರೆ.
ಕಿರುಚಾಟದ ಶಬ್ದ ಕೇಳಿಸಿ ಮಹಿಳೆ ಪತಿ ಶ್ರೀನಿವಾಸ್​ ವಿದ್ಯುತ್​ ತಂತಿಯನ್ನು ಪಕ್ಕಕ್ಕೆ ಸರಿಸಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದಾರೆ. ಆದರೆ, ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net