ಎಂಎಲ್ಸಿ ಮಾಡಿಸುವ ಭರವಸೆ ನೀಡಿ ಮಹಿಳೆಗೆ ₹ 1.50 ಕೋಟಿ ವಂಚನೆ

woman-defrauded of 1.50-crore
woman-defrauded of 1.50-crore
Published on

ಪ್ರಮುಖ ಮುಖ್ಯಾಂಶಗಳು

  • ಮೂವರ ವಿರುದ್ಧ ಎ್ಐಆರ್
ಬೆಂಗಳೂರು: ವಿಧಾನ ಪರಿಷತ್ ಸದಸ್ಯೆಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿ ಮಹಿಳೆಗೆ 1.5 ಕೋಟಿ ರೂ. ಪಡೆದು ಸರ್ಕಾರಿ ಶಾಲೆಯ ಶಿಕ್ಷಕನೋಬ್ಬ ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರು ಮೂಲದ ಗೀತಾ ಕೆ.ಸುವರ್ಣ(54) ವಂಚನೆಗೆ ಒಳಗಾದ ಮಹಿಳೆ. ನ್ಯಾಯಾಲಯ ಸೂಚನೆ ಮೇರೆಗೆ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಜು.27 ರಂದು ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೆರೆ ಯರ್ರಿಸ್ವಾಮಿನ ಹಾಗೂ ಇತನ ಸಹಚರರಾದ ಸಿದ್ದರಾಜು, ಬಸವರಾಜು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಯರಿಸ್ವಾಮಿಯು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ನಾಯಕರಾದ ರಣದೀಪ್ ಸುರ್ಜೇವಾಲಾ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿ ಹಲವು ನಾಯಕರ ಸಂಪರ್ಕವಿದೆ ಎಂದು ಮಹಿಳೆಯನ್ನು ನಂಬಿಸಿದ್ದ. ಕಾಂಗ್ರೆಸ್ ಪಕ್ಷದಿಂದ ತಮ್ಮನ್ನು ವಿಧಾನಪರಿಷತ್ ಸದಸ್ಯೆಯನ್ನಾಗಿ ನೇಮಕ ಮಾಡಿಸುತ್ತೇನೆ ಎಂದು ಹಂತ ಹಂತವಾಗಿ 1.50 ಕೋಟಿ ರೂ. ಪಡೆದು ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೋಟೆಲ್‌ನಲ್ಲಿ ಲೈಂಗಿಕ ಕಿರುಕುಳ:

ಕೇಂದ್ರದಲ್ಲಿ ಎಐಸಿಸಿ ನಾಯಕರನ್ನು ಭೇಟಿ ಮಾಡಿಸುವುದಾಗಿ ದೆಹಲಿಗೆ ಕರೆದುಕೊಂಡು ಹೋಗಿದ್ದ ಯರಿಸ್ವಾಮಿಯು, ಹೋಟೆಲ್‌ನಲ್ಲಿ ಅಸಭ್ಯವಾಗಿ ವರ್ತಿಸಿ ಲೈಂಕಿಗ ಕಿರುಕುಳ ನೀಡಿದ್ದ. ಕೆಲ ತಿಂಗಳ ಬಳಿಕ ಯರಿಸ್ವಾಮಿ ನೀಡಿದ್ದ ವಿಧಾನ ಪರಿಷತ್ ಸ್ಥಾನದ ಭರವಸೆ ಸುಳ್ಳು ಎಂಬುದಾಗಿ ತಿಳಿದಿದೆ. ಹೀಗಾಗಿ,ಹಣ ವಾಪಾಸ್ ಕೊಡುವಂತೆ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚಾರಿಟೇಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದ ಮಹಿಳೆಯಿಂದ 2024ರಲ್ಲಿ ವಿಧಾನಸೌಧದಲ್ಲಿ ಯರ್ರಿಸ್ವಾಮಿ ್ಲಪರಿಚಯವಾಗಿದ್ದ. ತಾನು ಕಾಂಗ್ರೆಸ್‌ನ ಮಾಧ್ಯಮ ವಕ್ತಾರ ಎಂದು ಹೇಳಿಕೊಂಡಿದ್ದ. 5 ಕೋಟಿ ರೂ.ನೀಡಿದರೆ ಎಂಎಲ್‌ಸಿ ಮಾಡಿಸುತ್ತೆನೆ ಎಂದು ನಂಬಿಸಿದ್ದು ಅಂತಿಮವಾಗಿ 1.25 ಕೋಟಿ ರೂ.ಗೆ ಮಾತುಕತೆಯಾಗಿತ್ತು.ಈ ಪೈಕಿ 1 ಕೋಟಿ ರೂ.ಗಳನ್ನು ಕೆ.ಆರ್ ರಸ್ತೆ ಸಮೀಪದ ಶಿಕ್ಷಕರ ಸದನದ ಯರ್ರಿಸ್ವಾಮಿ ಸೂಚನೆ ಮೇರೆಗೆ ಬಸವರಾಜು ಹಾಗೂ ಸಿದ್ದರಾಜುಗೆ ಅವರಿಗೆ ಕೊಟ್ಟಿದೆ. ಮಲ್ಲೆಶ್ವರಂನ ಕೆ.ಸಿ ಜನರಲ್ ಆಸ್ಪತ್ರೆ ಬಳಿ ಯರ್ರಿಸ್ವಾಮಿ ಸೂಚನೆ ಮೇರೆಗೆ ಒಬ್ಬ ಮಹಿಳೆಗೆ ಐದು ಲಕ್ಷ ರೂ ನೀಡಿದ್ದೆ ಎಂದು ಸಂತ್ರಸ್ತೆಯು ದೂರಿನಲ್ಲಿ ವಿವರಿಸಿದ್ದಾರೆ.

ತನಿಖೆಗೆ ಕೋರ್ಟ್ ಸೂಚನೆ:

ಯರಿಸ್ವಾಮಿಯು ಎಸಗಿದ ವಂಚನೆ ಸಂಬಂಧ ಸಂತ್ರಸ್ತೆ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ತನಿಖೆಗೆ ಕೋರಿದ್ದರು. ದೂರಿನಲ್ಲಿರುವ ಗಂಭೀರ ಆರೋಪಗಳನ್ನು ಪರಿಗಣಿಸಿರುವ ನ್ಯಾಯಾಲಯವು, ಆರೋಪಿಗಳಾದ ಯರ್ರಿಸ್ವಾಮಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆಗಸ್ಟ್ 25ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಈ ಬೆನ್ನಲ್ಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net