ಪೊಲೀಸರ ಮಾಹಿತಿ ಪ್ರಕಾರ, ಶೀಲಾ ಕೆಎ-04-ಎಲ್‌ಸಿ-7204 ಸಂಖ್ಯೆಯ ಸ್ಕೂಟಿಯಲ್ಲಿ ಹಾಗೂ ಜಬಿ ಕೆಎ-11-ಎಂ-8783 ಸಂಖ್ಯೆಯ ಕಾರಿನಲ್ಲಿ ಗಾಂಜಾ ಸಾಗಿಸಿಕೊಂಡು ಬಂದಿದ್ದರು. ಕಬ್ಬೂರು ಸಮೀಪದ ಮರೆಮಂಟಿ ಕಾಡಿನ ಬಳಿಯ ನಿರ್ಜನ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡಲು ಸಂಚು ರೂಪಿಸಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಹಳ್ಳಿ ಮೈಸೂರು ಠಾಣೆ ಪೊಲೀಸರು ದಾಳಿ ನಡೆಸಿದರು.