ರಬಕವಿ ಸಮೀಪದ ಸುಶೀಲಾದೇವಿ ಯೋಗ ಮತ್ತು ಪ್ರಕತಿ ಚಿಕಿತ್ಸಾ ವೈದ್ಯಕೀಯ ಕಾಲೇಜ್ ಹಾಗೂ ಸಂಶೋಧನಾ ಕೇಂದ್ರವನ್ನು ಕನ್ಹೇರಿ ಶ್ರೀ ಕಾಡಸಿದ್ಧೇಶ್ವರ ಸಂಸ್ಥಾನಮಠದ ಅದಶ್ಯ ಕಾಡಸಿದ್ಧೇಶ್ವರ ಶ್ರೀಗಳು ಉದ್ಘಾಟಿಸಿದರು. ಡಾ. ಪರಶುರಾಮ ರಾವಳ ಉಪಸ್ಥಿತರಿದ್ದರು.
ಸುಶೀಲಾದೇವಿ ಯೋಗ ಮತ್ತು ಪ್ರಕತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನೆ
ರಬಕವಿ/ಬನಹಟ್ಟಿ: ನಿಸರ್ಗದಲ್ಲಿಯೇ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಅಡಗಿದ್ದು, ಯೋಗ ಹಾಗೂ ಪ್ರಕತಿ ಚಿಕಿತ್ಸೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕನ್ಹೇರಿ ಶ್ರೀ ಕಾಡಸಿದ್ಧೇಶ್ವರ ಸಂಸ್ಥಾನಮಠದ ಅದಶ್ಯ ಕಾಡಸಿದ್ಧೇಶ್ವರ ಶ್ರೀಗಳು ಹೇಳಿದರು.
ಸಮೀಪದ ಕನ್ಹೇರಿ ಶ್ರೀ ಕಾಡಸಿದ್ಧೇಶ್ವರ ಸಂಸ್ಥಾನಮಠದ ಯೋಗಗುರು ಡಾ. ಪರಶುರಾಮ ರಾವಳ ನೇತತ್ವದಲ್ಲಿ ನಿರ್ಮಾಣಗೊಂಡ ಸುಶೀಲಾದೇವಿ ಯೋಗ ಮತ್ತು ಪ್ರಕತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಇಂತಹ ಸುಸಜ್ಜಿತ ಯೋಗ ಮತ್ತು ಪ್ರಕತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಆರಂಭವಾಗಿರುವುದು ಈ ಭಾಗದ ಜನತೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣದ ದಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಿಂದಲೇ ಕಾಲೇಜಿಗೆ ಪ್ರವೇಶ ಪಡೆದು ಸಮಾಜಮುಖಿ ವೈದ್ಯರಾಗಬೇಕು ಎಂದು ಕರೆ ನೀಡಿದರು.
ಪಾರಂಪರಿಕ ಆಹಾರ ಪದ್ಧತಿ, ಯೋಗ ಮತ್ತು ನಿಸರ್ಗಸಮ್ಮತ ಜೀವನಶೈಲಿಯನ್ನು ಅನುಸರಿಸಿದರೆ ಅನೇಕ ರೋಗಗಳನ್ನು ತಡೆಗಟ್ಟಬಹುದು. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಪ್ರಕತಿ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲೂ ಮಾನ್ಯತೆ ದೊರೆಯುತ್ತಿದ್ದು, ಭಾರತದ ಈ ಪಾರಂಪರಿಕ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ನಿಸರ್ಗ ಸಮ್ಮತ ಜೀವನಶೈಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿದೆ. ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಈ ಕಾಲೇಜ್ ಉತ್ತಮ ಅವಕಾಶವಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಸ್ಥಾಪಕ ಡಾ. ಪರಶುರಾಮ ರಾವಳ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಯೋಗ ಮತ್ತು ಪ್ರಕತಿ ಚಿಕಿತ್ಸಾ ಸೇವೆ ದೊರೆಯುವ ಉದ್ದೇಶದಿಂದ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜ್ ಆರಂಭಿಸಲಾಗಿದೆ ಎಂದು ಹೇಳಿದರು.
ಪೂನಂ ರಾವಳ, ಮಹೇಶ ರಾವಳ, ಲತಾ ರಾವಳ, ನಂದಕುಮಾರ ರಾವಳ, ಮಹಾವಿದ್ಯಾಲಯದ ವ್ಯವಸ್ಥಾಪಕ ವಿಜಯಕುಮಾರ ನಿಂಬರಗಿ, ಶ್ರೀದೇವಿ ಮಿಣಜಗಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.