ಛಲವಿದ್ದರೆ ಅಡೆತಡೆ ಮೆಟ್ಟಿ ನಿಲ್ಲಬಹುದು

With determination, one can overcome obstacles.
With determination, one can overcome obstacles.
Published on
ಮಡಿವಾಳ: ನಗರ್ತ ಮಹಿಳಾ ಸಂಘದಿಂದ ಅನೇಕ ಸಮಾಜಮುಖಿ ಕಾರ್ಯಗಳು ನಡೆದುಕೊಂಡು ಬರುತ್ತಿವೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಗಳು ಸೇರಿವೆ ಎಂದು ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ.ಸಿ.ಸೋಮಶೇಖರ್​ ಹೇಳಿದರು.
ಬೆಂಗಳೂರಿನಲ್ಲಿ ನಗರ್ತ ಮಹಿಳಾ ಸಂಘ, ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಸಮಾಜದ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಅದರಲ್ಲೂ ಕ್ರೀಡಾಪಟು ಪಿ.ವಿ.ಸಿಂಧೂ ಕ್ರೀಡಾ ರಂಗದಲ್ಲಿ ಉನ್ನತ ಹೆಸರು ಪಡೆದಿದ್ದಾರೆ. ಸಾಧಿಸುವ ಛಲವೊಂದಿದ್ದರೆ ಸಾಕು ಅಡೆತಡೆಗಳನ್ನು ಮೆಟ್ಟಿ ನಿಲ್ಲಬಹುದು ಎಂದರು.
ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೆಣ್ಣು ಪ್ರತಿಯೊಂದು ರಂಗದಲ್ಲೂ ತಾನು ಅಬಲೆಯಲ್ಲ ಸಬಲೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಕಾರ್ಯದರ್ಶಿ ಲತಾ ದಿನೇಶ್​, ಪದಾಧಿಕಾರಿಗಳಾದ ಶೋಭಾ ಎಸ್​.ಪಿ, ಗಾಯತ್ರಿ, ಪಿ.ಲತಾ, ಗೀತಾ, ಮಧುಶ್ರೀ, ಅಂಬಿಕಾ, ಅಂಜನಾ, ನಿರ್ದೇಶಕರುಗಳಾದ ಶೈಲಜಾ, ಸವಿತಾ, ಭಾರತಿ, ಕೋಮಲಾ, ಶೋಭಾರಾಣಿ, ಲಲಿತಾ, ಇಂದಿರಾ, ಶಿವಮ್ಮ, ಭಾರತಿ, ಮಾಲಾ, ಪದ್ಮಾ ಇದ್ದರು.
ಸಂಘದ ಅಧ್ಯೆ ಶೋಭಾ ಪುಟ್ಟರಾಜು, ಎಎಸ್​ವಿಎನ್​ವಿ ಸಂಘದ ಅಧ್ಯಕ್ಷ ಎಸ್​.ಪ್ರಕಾಶ್​, ಗೌರವ ಕಾರ್ಯದರ್ಶಿ ಎಂ.ಎಸ್​.ಕೃಷ್ಣಮೂರ್ತಿ, ಆಧ್ಯಾತ್ಮಿಕ ಬರಹಗಾರ್ತಿ ವೀಣಾ ಬನ್ನಂಜೆ, ಸರಿಗಮಪ ಜ್ಯೂರಿ ಶಶಿಕಲಾ ಸುನಿಲ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net