ಕದನೂರು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸುಮಾರು 13 ಕಾಡಾನೆಗಳ ಹಿಂಡು ಸ್ಥಳೀಯ ಗದ್ದೆಯಲ್ಲಿ ಬೀಡು ಬಿಟ್ಟಿದ್ದವು. ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಡಿಆರ್‌ಎಫ್ ರಾಘವ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಾಡಿನತ್ತ ಓಡಿಸಲಾಯಿತು. ಸಿಬ್ಬಂದಿ ಮಹೇಶ್, ಹರೀಶ್, ಅನಿಲ್, ಸುರೇಶ್, ಮುರುಗನ್ ಹಾಗೂ ಶ್ರೀನಿಧಿ ತಂಡ ಕಾರ್ಯಾಚರಣೆಯಲ್ಲಿತ್ತು.