ಬೇಲೂರು: ತಾಲೂಕಿನ ಹಗರೆ ಸಮೀಪದ ರಕ್ಷಿತಾರಣ್ಯದ ಗಡಿ ಭಾಗದಲ್ಲಿ ಕಾಡುಹಂದಿ ಬೇಟೆಯಾಡಿದ್ದ ಆರೋಪಿಯನ್ನು ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಹಗರೆ ಸಮೀಪದ ರಕ್ಷಿತಾರಣ್ಯದ ಗಡಿ ಭಾಗದ ಹಗರೆ-ಹೊಲಬಗೆರೆ ರಕ್ಷಿತಾರಣ್ಯದಲ್ಲಿ ಕಾಡುಹಂದಿ ಬೇಟೆಯಾಡುತ್ತಿರುವ ಬಗ್ಗೆ ವಲಯ ಅರಣ್ಯಾಧಿಕಾರಿ ಯತೀಶ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಬ್ಬ ಆರೋಪಿಯನ್ನು ಇತ್ತೀಚೆಗೆ ಬಂಧಿಸಿ ಆತನಿಂದ 1 ಕಿಯಾ ಕಾರು, ಡಿಬಿಬಿಎಲ್ ಗನ್-3 ಹಾಗೂ ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಆರ್‌ಎಫ್ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಯತೀಶ್, ಗಾರ್ಡ್‌ಗಳಾದ ಮಂಜುನಾಥ್, ಸತೀಶ್, ಚೇತನ್, ಪ್ರಕಾಶ್, ವಾಚರ್‌ಗಳಾದ ಹರೀಶ್, ಪ್ರಸನ್ನ ಸೇರಿದಂತೆ ಇತರರಿದ್ದರು.