ವಾಯ್ಸ್​ ಮೆಸೇಜ್​ ಹಾಕಿ ಪತ್ನಿ ನೇಣಿಗೆ ಶರಣು

Wife commits suicide by leaving voice message
Wife commits suicide by leaving voice message
Published on

ದೇವನಹಳ್ಳಿ:

ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ವಂಚನೆಗೊಳಗಾಗಿ ಅರ್ಥಿಕ ನಷ್ಟ ಎದುರಿಸಿದ್ದರು ಎನ್ನಲಾದ ಕನ್ನಮಂಗಲ ನಿವಾಸಿ ನಾಗರತ್ನಮ್ಮ (55) ಮಂಗಳವಾರ ಮೊಬೈಲ್​ನಲ್ಲಿ ವಾಯ್ಸ್​ ಮೆಸೇಜ್​ ಹಾಕಿ ಬಳಿಕ ನೇಣಿಗೆ ಶರಣಾಗಿದ್ದಾರೆ.

ಏನಿದು ಪ್ರಕರಣ?

ಕನ್ನಮಂಗಲ ನಿವಾಸಿ ವೆಂಕಟಸ್ವಾಮಿ ಹಾಗೂ ನಾಗರತ್ನಮ್ಮ ಕೆಲವು ವರ್ಷಗಳಿಂದ ರಿಯಲ್​ಎಸ್ಟೇಟ್​ ವ್ಯವಹಾರ ನಡೆಸುತ್ತಿದ್ದು, ಭೂ ವ್ಯವಹಾರದಲ್ಲಿ ಸಾಕಷ್ಟು ಹಣ ಹೂಡಿಕೆೆ ಮಾಡಿದ್ದಾರೆ. ಜತೆಗೆ ಪರಿಚಯಸ್ಥರಿಂದಲೂ ಹಣ ಹೂಡಿಕೆ ಮಾಡಿಸಿದ್ದರು. ಆದರೆ, ವ್ಯವಹಾರದಲ್ಲಿ ವಂಚನೆಯಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿದ್ದರು. ಇವರ ಮೂಲಕ ಹಣ ಹೂಡಿಕೆ ಮಾಡಿದ್ದವರು ಹಣ ವಾಪಸ್​ ನೀಡುವಂತೆ ದಂಪತಿಗೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.

ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪತಿ ನಾಪತ್ತೆ

ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಆದ ವಂಚನೆ ಬಗ್ಗೆ ಪತಿ ವೆಂಕಟಸ್ವಾಮಿ ವಿಡಿಯೋ ಮಾಡಿ, ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದಾರೆ. ಲಾಭದ ಆಸೆ ತೋರಿಸಿ ನಮ್ಮಿಂದ ಹಣ ಪಡೆದು ನಮ್ಮ ಮೂಲಕ ಇತರರಿಂದಲೂ ಹಣ ಹೂಡಿಕೆ ಮಾಡಿಸಿ ವಂಚಿಸಿದ್ದಾರೆ. ಹಣ ವಾಪಸ್​ ಮಾಡದೆ ಸತಾಯಿಸುತ್ತಿದ್ದಾರೆ ಎಂದು ವಾಯ್ಸ್​ ಮೆಸೇಜ್​ ಹಾಕಿ ಕೆಲವರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net