ಜತೆಗೆ ದೇವರ ಕಾರ್ಯಕ್ರಮಕ್ಕಾಗಿ 2ನೇ ಮಗುವನ್ನು ಕರೆದುಕೊಂಡು ಹೋಗಲು ಏ.13ರಂದು ಪತ್ನಿ ತವರಿಗೆ ಬಂದಾಗ ಆಕೆಯ ಕುಟುಂಬದವರು ಗಲಾಟೆ ಮಾಡಿ, ರಾಡ್ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು, ಚಿಂತಾಮಣಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಏ.14ರಂದು ಪ್ರಕರಣ ದಾಖಲಿಸಿದ್ದಾರೆ.