ಬಿಡದಿಯಲ್ಲಿ ಕುಮಾರಸ್ವಾಮಿ ಅವರ ನೂರಾರು ಎಕರೆ ಜಮೀನು ಇದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಈಗಾಗಲೇ ಸಚಿವ ಎಂ.ಬಿ.ಪಾಟೀಲರು ಈ ವಿಚಾರದಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಅಲ್ಲಿ ನಮ್ಮದಿರೋದು 36 ಎಕರೆ ಜಮೀನು. ಅದು ಸಹ ಹಲವಾರು ದಶಕಗಳ ಹಿಂದೆ ತೆಗೆದುಕೊಂಡಿರುವಂಥದ್ದು. ಅಲ್ಲಿ ಡೈರಿ ಮಾಡುವುದು ನಮ್ಮ ತಂದೆಯ ಆಶಯ ಇತ್ತು. ಕರೊನಾ ಟೈಮಲ್ಲಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಆಗಿಲ್ಲ. ಅದು ಬಿಟ್ಟು ಅಲ್ಲಿ ಯಾವುದೇ ಲೇಔಟ್ ಮಾಡಿಲ್ಲ, ನಾವು ರಿಯಲ್ ಎಸ್ಟೇಟ್‌ನವರು ಅಲ್ಲ ಎಂದರು.