'ಸಂಪುಟದಲ್ಲಿ ಮಹಿಳೆಯರಿಗೆಲ್ಲಿದೆ ಸ್ಥಾನ': ಕರ್ನಾಟಕದ ಕಾಂಗ್ರೆಸ್​ ಸರ್ಕಾರಕ್ಕೆ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಪ್ರಶ್ನೆ!..​Margaret Alva

​Margaret Alva
​Margaret Alva
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ನೂತನ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಪ್ರಶ್ನಿಸಿದ ಮಾರ್ಗರೇಟ್ ಆಳ್ವಾ
  • ಗ್ಯಾರಂಟಿ ಯೋಜನೆಗಷ್ಟೆ ಮಹಿಳೆಯತು ಸೀಮಿತಾನ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಸೃಷ್ಟಿ
  • ಪಕ್ಷದ ಹಿರಿಯ ನಾಯಕಿಯ ಬಹಿರಂಗ ಪ್ರಶ್ನೆಗೆ ಮುಜುಗರಕ್ಕೀಡಾದ ಹೈ ಕಮಾಂಡ್
ನವದೆಹಲಿ: 'ಕರ್ನಾಟಕ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್​ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಜೂ.3ರಂದು ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಕಾಂಗ್ರೆಸ್ ಮಹಿಳೆಯನ್ನಾದರೂ ನೋಡಲು ನಾನು ಇಷ್ಟಪಡುತ್ತಿದ್ದೆ. ಇಲ್ಲದಿರುವುದು ತೀವ್ರ ನಿರಾಶೆ ಮೂಡಿಸಿದೆ' ಹೀಗೆಂದು ಸೋಶಿಯಲ್​ ಮೀಡಿಯಾದಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಪಕ್ಷದ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ.
ಲೋಕಭವನದ ಆವರಣದಲ್ಲಿ ಜೂನ್​.3ರಂದು ನಡೆದ ಭವ್ಯ ಸಮಾರಂಭದಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ 13 ಶಾಸಕರಿಗೆ ಸಚಿವ ಸಂಪುಟ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಈ ಮಧ್ಯೆ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ವಿಚಾರ ಎಂದರೆ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಇಲ್ಲ ಯಾಕೆ ಎಂದು.
ಹೌದು ಪಕ್ಷದ ಹಿರಿಯ ನಾಯಕಿಯಾದ ಮಾರ್ಗರೆಟ್ ಆಳ್ವ ಅವರು ಮಹಿಳಾ ಪ್ರಾತಿನಿಧ್ಯದ ಬಗ್ಗೆ ಧ್ವನಿ ಎತ್ತಿ ಹೈ ಕಮಾಂಡ್ ಮುಜುಗರಕ್ಕೊಳಗಾಗುವಂತೆ ಮಾಡಿದ್ದಾರೆ.
ಎಕ್ಸ್​ನಲ್ಲಿ ಹೇಳಿಕೊಂಡಿದ್ದೇನು?
ಮಾರ್ಗರೆಟ್ ಆಳ್ವ ಎಕ್ಸ್​​ನಲ್ಲಿ ಬರೆದುಕೊಂಡಿರುವುದು ಹೀಗೆ, "ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗದಿರುವುದು ತೀವ್ರ ನಿರಾಶೆ ಮೂಡಿಸಿದೆ. ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷದ ಗೆಲುವಿಗೆ ಮಹಿಳಾ ಮತದಾರರು ಮತ್ತು ಮಹಿಳಾ ಕಾರ್ಯಕರ್ತೆಯರು ಅಪಾರ ಶ್ರಮ ವಹಿಸಿದ್ದಾರೆ. ಆದರೆ ಅಧಿಕಾರ ಹಂಚಿಕೆಯ ವಿಷಯಕ್ಕೆ ಬಂದಾಗ ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮತ ಸೆಳೆಯಲು ಮಹಿಳೆಯರ ಬಳಕೆ?

ಚುನಾವಣಾ ಪ್ರಚಾರದ ವೇಳೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಮಹಿಳಾ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅದಾದ ನಂತರ ಕಾಂಗ್ರೆಸ್​ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣದಂತಹ ಗ್ಯಾರಂಟಿ ಯೋಜನೆ ಮೂಲಕ ದೇಶದಾದ್ಯಂತ ಭಾರಿ ಹೆಸರು ಮಾಡಿತ್ತು. ಆದರೆ, ಸಂಪುಟದಲ್ಲಿ ಮಹಿಳಾ ನಾಯಕಿಯರನ್ನು ಮೂಲೆ ಗುಂಪು ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.

ಅನುಭವಿ ಹೆಬ್ಬಾಳ್ಕರ್​​ಗೂ ಮಣೆ ಹಾಕದ ಸರ್ಕಾರ!

ಕಾಂಗ್ರೆಸ್​ ವಿಧಾನಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​, ರೂಪಕಲಾ ಶಶಿಧರ್, ನಯನಾ ಮೋಟಮ್ಮ ಮತ್ತು ಕನೀಜ್ ಫಾತಿಮಾ ಹಾಗೂ ವಿಧಾನ ಪರಿಷತ್ತಿನಲ್ಲಿ ಗಾಯತ್ರಿ ಶಾಂತೇಗೌಡ, ಪುಷ್ಪಾ ಅಮರನಾಥ್, ಬಿಲ್ಕಿಸ್ ಬಾನೋ, ಡಾ. ಆರತಿ ಕೃಷ್ಣ ಮತ್ತು ಉಮಾಶ್ರೀ ಪ್ರತಿನಿಧಿಸುತ್ತಾರೆ. ಆದರೆ, ಡಿಕೆ ಶಿವಕುಮಾರ್​ ನಾಯಕತ್ವದ ಸಂಪುಟಕ್ಕೆ ಮಹಿಳೆಯರು ಯಾರೂ ಪ್ರಮಾಣವಚನ ಸ್ವೀಕರಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರ ನಾಯಕತ್ವದ ಸಂಪುಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಇವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳೆಂದು ಪರಿಗಣಿಸಲಾಗಿತ್ತು. ಆದರೆ, ಅವರನ್ನು ಪರಿಗಣಿಸದೆ ಇರುವುದು ರಾಜಕೀಯ ಹಿರಿಯ ನಾಯಕರು ಹಾಗೂ ಚಿಂತಕರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net