ಉಳಿದವರಿಗೆ ಇಲ್ಲದ ಕಾನೂನು ನಮಗೇಕೆ

ಯಾದಗಿರಿ ನಗರದ ಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸುಪ್ರೀಂಕೋರ್ಟ್ ಸಲಹಾ ಸಮಿತಿ ಸದಸ್ಯೆ ಅಕ್ವೇ ಪದ್ಮಶಾಲಿ ಮಾತನಾಡಿದರು. ಎಸ್‌ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್‌ಪಿ ಧರಣೇಶ, ಪ್ರೀಯಾಂಕಾ, ಮಾಯಾ ಎಸ್.ಆರ್.ನಾಯಕ ಇತರರಿದ್ದರು.
ಯಾದಗಿರಿ ನಗರದ ಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸುಪ್ರೀಂಕೋರ್ಟ್ ಸಲಹಾ ಸಮಿತಿ ಸದಸ್ಯೆ ಅಕ್ವೇ ಪದ್ಮಶಾಲಿ ಮಾತನಾಡಿದರು. ಎಸ್‌ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್‌ಪಿ ಧರಣೇಶ, ಪ್ರೀಯಾಂಕಾ, ಮಾಯಾ ಎಸ್.ಆರ್.ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಲಹಾ ಸಮಿತಿ ಸದಸ್ಯೆ ಅಕ್ವೇ ಪದ್ಮಶಾಲಿ ಪ್ರಶ್ನೆ
  • ಯಾದಗಿರಿ ಎಸ್‌ಪಿ ಕಚೆರಿಯಲ್ಲಿ ಕರ‍್ಯಾಗಾರ
ಯಾದಗಿರಿ: ಲಿಂಗತ್ವ ಅಲ್ಪಸಂಖ್ಯಾತರಿಗಷ್ಟೇ ವೈದ್ಯಕೀಯ ಪರೀಕ್ಷೆ ಮಾಡುವ ಮೂಲಕ ಅವರ ಲಿಂಗತ್ವ ಪರೀಕ್ಷೆ ಮಾಡುವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿರುವ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಸುಪ್ರೀಂಕೋರ್ಟ್ ಸಲಹಾ ಸಮಿತಿ ಸದಸ್ಯೆ ಅಕ್ವೇ ಪದ್ಮಶಾಲಿ, ಉಳಿದವರಿಗೆ ಇಲ್ಲದ ಕಾನೂನು ನಮಗೇಕೆÀ ಎಂದು ಅವರು ಪ್ರಶ್ನಿಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಭಯ ಬೀಡಿ-ಪ್ರೀತಿ ಮಾಡಿ ಅಭಿಯಾನದಡಿ ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಪೊಲೀಸ್ ಅಽಕಾರಿಗಳ ಸಂವಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶೋಷಣೆ, ಅಪಮಾನ, ನಿರುದ್ಯೋಗ, ಬಡತನ ಮತ್ತು ಕುಟುಂಬದವರ ನಿರ್ಲಕ್ಷ್ಯ ಹೀಗೆ ಎಲ್ಲದರಿಂದಲೂ ವಂಚಿತವಾದ ಈ ಸಮುದಾಯಕ್ಕೆ ಸರ್ಕಾರ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ನಮ್ಮನ್ನು ಸಹ ಎಲ್ಲರಂತೆ ಕಾಣಬೇಕು ಎಂದರು.
ನಮ್ಮ ಹಕ್ಕುಗಳಿಗಾಗಿ ಕಳೆದ ಮೂವತ್ತು ವರ್ಷಗಳಿಂದ ನಮ್ಮ ಸಮುದಾಯದ ಸಾವಿರಾರು ಜನರು ಹೋರಾಟ ಮಾಡುತ್ತಿದ್ದಾರೆ. ಆದರೂ ಇನ್ನೂ ನಮಗೆ ಮುಖ್ಯವಾಹಿನಿಯಲ್ಲಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಆಶಾಕಿರಣ ಸಾಮಾಜಿಕ ಸೇವಾಸಂಸ್ಥೆ ಅಧ್ಯಕ್ಷೆ ಮಾಯಾ ಎಸ್.ಆರ್.ನಾಯಕ, ರಾಯಚೂರಿನ ಮಾಳವಿಕಾ ಅವರು ಮಾತನಾಡಿ, ಸಮಾಜದಲ್ಲಿ ತಮ್ಮನ್ನು ಕಾಣುತ್ತಿರುವ ರೀತಿ ಬಗ್ಗೆ ವಿವರಿಸಿದರು. ಲಿಂಗತ್ವ ಅಲ್ಪಸಂಖ್ಯಾತರಲ್ಲಿನ ಆಶೆ, ಬಯಕೆಗಳು ಏನೇನು ಇವೆ ಅವುಗಳನ್ನು ಅನುಭವಿಸುವ ರೀತಿ ಬಗ್ಗೆ ಹೇಳಿದರು. ಈ ವೇಳೆ ವಿವಿಧ ಪೊಲೀಸ್ ಠಾಣೆಗಳ ಪೋಲಿಸ್ ಅಽಕಾರಿಗಳು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಜನರಿಗೆ ವಿನಾಃ ಕಾರಣ ನೀಡುತ್ತಿರುವ ಕಿರುಕುಳ ಮತ್ತು ಬಿಕ್ಷಾಟನೆ ಮತ್ತು ಹೈವೈ ರಸ್ತೆಗಳ ನಡುವೆ ನಿಂತು ಹಣಕ್ಕಾಗಿ ಪೀಡಿಸುತ್ತಿರುವ ಬಗ್ಗೆ ಗಮನಕ್ಕೆ ತಂದಾಗ ಇದನ್ನು ಅಕ್ವೇ ಪದ್ಮಶಾಲಿ, ಮಾಯಾ ಎಸ್.ಆರ್.ನಾಯಕ, ಮಾಳವಿಕಾ ಅವರು ಒಪ್ಪಿಕೊಂಡು ಇಂತಹವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದರು.
ಹರೆಯದ ಹುಡುಗರನ್ನು ಹಣದ ಆಶೆಗೆ ಹೊಡೆದು ಅವರನ್ನು ಕಿಡ್ನಾಪ್ ಮಾಡಿರುವ ಘಟನೆಯನ್ನು ವಿವರಿಸಿದ ಪೊಲೀಸ್ ಅಽಕಾರಿ ಪಂಡಿತ ಅವರ ಮಾತಿಗೆ ಕ್ಷಣ ಕಾಲ ದಂಗಾದ ಅಕ್ವೇ ಪದ್ಮಶಾಲಿ ಇಂತಹ ಪ್ರವೃತ್ತಿಯುಳ್ಳವವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬೀಡಬಾರದು ಎಂದರು.
ಎಸ್‌ಪಿ ಪೃಥ್ವಿಕ್ ಶಂಕರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ರೈಲುಗಳಲ್ಲಿ ಪ್ರಯಾಣ ಮಾಡುವಾಗ ಕೆಲವು ಲಿಂಗತ್ವ ಅಲ್ಪಸಂಖ್ಯಾತರು ಹಣಕ್ಕಾಗಿ ಪೀಡಿಸಿದನ್ನು ಮೆಲಕು ಹಾಕಿದರು. ಸುಮ್ಮನ್ನೇ ಯಾರು ಹೀಗೆ ಮಾಡುವುದಿಲ್ಲ. ಅವರ ಬದುಕಿಗೆ ಬೇಕಾದ ಸೌಲಭ್ಯ ಸಿಕ್ಕರೆ ಯಾರು ಇಂತಹ ಕೆಲಸ ಮಾಡುವುದಿಲ್ಲ, ಆ ಕೆಲಸ ಆಗಬೇಕು ಎಂದು ಹೇಳಿದರು.
ಹೆಚ್ಚುವರಿ ಎಸ್‌ಪಿ ಧರಣೇಶ, ಅಮಿದಾಬೇಗಂ, ಪ್ರಿಯಾಂಕಾ ಅತಿಥಿಗಳಾಗಿ ಭಾಗವಹಿಸಿದ್ದರು. ಡಿವೈಎಸ್‌ಪಿಗಳಾದ ಭರತಕುಮಾರ ತಳವಾರ, ಜಾವಿದ್ ಇನಾಂದಾರ, ಸುರೇಶ ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net