“ವಾಲ್ಮೀಕಿ ಅವರ ಬ್ಯಾನರ್ ಹರಿದುಹಾಕಿದ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರಿಬ್ಬರು ಈಗ ತಬ್ಬಾಡುತ್ತಿದ್ದಾರೆ. ತಬ್ಬಾಡಲಿ, ತೊಂದರೆ ಇಲ್ಲ. ಈ ಹಿಂದೆ ಒಬ್ಬರು ಮತ್ತೊಬ್ಬರ ಮೇಲೆ ಎಷ್ಟು ಪ್ರೀತಿ, ಲವಲವಿಕೆ ಹೊಂದಿದ್ದರು, ಕುಮಾರಸ್ವಾಮಿ ಹಾಗೂ ಜನಾರ್ದನ ರೆಡ್ಡಿ ನಡುವೆ ಸಂಬಂಧ ಹೇಗಿತ್ತು, ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವೆ ಸಂಬಂಧ ಹೇಗಿತ್ತು, ನಮಗೂ ಶ್ರೀರಾಮುಲು, ಕುಮಾರಸ್ವಾಮಿಗೆ ಏನಿತ್ತು ಎಂಬುದನ್ನು ಬದಿಗಿಡೋಣ. ಅವರು ಒಟ್ಟಾಗಿರಲಿ, ನಾವು ಬೇಡ ಎನ್ನುವುದಿಲ್ಲ. ಆದರೆ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸಾರ್ವಜನಿಕವಾಗಿ ಈ ರೀತಿ ಸುಳ್ಳು ಹೇಳುವುದರಿಂದ ನಿಮ್ಮ ಘನತೆಗೆ ಧಕ್ಕೆ ಬರುತ್ತದೆಯೇ” ಎಂದು ಕಿಡಿಕಾರಿದರು.