ಆದ್ದರಿಂದ ಕಡ್ಲೇವಾಡ ಪಿಸಿಎಚ್‌ದಿಂದ ಹಚ್ಯಾಳವರೆಗಾದರೂ ಕನಿಷ್ಠ ಉತ್ತಮ ಗುಣಮಟ್ಟದ ಡಾಂಬರ್ ರಸ್ತೆ ನಿರ್ಮಾಣ ಮಾಡಬೇಕು. ರಸ್ತೆ ಮೇಲಿನ ತಗ್ಗು ಗುಂಡಿಗಳನ್ನು ಮುಚ್ಚಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಯಾಣಿಕರಾದ ಚಂದ್ರಶೇಖರ ಹರನಾಳ, ಅರ್ಜುನ ಮಾಲಗಾರ, ಜಗದೀಶ ಚಟ್ಟರಕಿ, ಶಿವಾನಂದ ನಾಟೀಕಾರ, ಜಗದೀಶ ಬಳುಂಡಗಿ, ರಮೇಶ ಮಲಘಾಣ ಸೇರಿ ಕಡ್ಲೇವಾಡ ಪಿಸಿಎಚ್, ಚಟ್ಟರಕಿ, ಹಚ್ಯಾಳ ಸೇರಿ ಸಂಬಂಧಪಟ್ಟ ಗ್ರಾಮಗಳ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.