ಬೇತಮಂಗಲ: ಇತ್ತೀಚೆಗೆ ಪ್ರಕಟಗೊಂಡ 10ನೇ ತರಗತಿ ಫಲಿತಾಂಶದಲ್ಲಿ ಕೆಜಿಎ್ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಬೇತಮಂಗಲದ ಶಿಕ ದಂಪತಿ ಅರುಣಾ ಶಂಕರ್ ಪುತ್ರಿ ಹಾರಿಕಾ ಎಸ್. ರೆಡ್ಡಿ ಅವನ್ನು ಬುಧವಾರ ಶಾಸಕಿ ರೂಪಕಲಾ ಅವರು ಅಭಿನಂದಿಸಿದರು. dedication
ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ ಶಾಸಕಿ, ಕಳೆದ ಸಾಲಿನಲ್ಲಿ 10ನೇ ತರಗತಿ ಫಲಿತಾಂಶದಲ್ಲಿ ಹಿನ್ನಡೆಯಾಗಿತ್ತು. ಆದರೆ ಈ ಸಾಲಿನಲ್ಲಿ ಎಲ್ಲ ಶಿಕರು ಶ್ರಮವಹಿಸಿ ಉತ್ತಮ ಫಲಿತಾಂಶ ಸಾಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವಿದ್ಯಾರ್ಥಿಗಳೂ ಶ್ರಮವಹಿಸಿದ್ದಾರೆ. ಎಲ್ಲಿ ಶ್ರದ್ಧೆ ಇರುತ್ತದೆ ಅಲ್ಲಿ ಯಶಸ್ಸು ಇರುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಶ್ರದ್ಧೆಯಿಂದ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.ಸರ್ಕಾರಿ ಪ್ರೌಢ ಶಾಲೆಗಳಲ್ಲೂ ಸಹಾ ಈ ಸಾಲಿನಲ್ಲಿ ಉತ್ತಮ ಫಲಿತಾಂಶ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
621 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಹಾರಿಕಾ ಸಾಧನೆ ಖಂಡಿತವಾಗಿಯೂ ಪ್ರಶಂಸನೀಯ. ಇವರ ಸಾಧನೆಗೆ ಪೋತ್ಸಾಹಿಸಿದ ಅವರ ಪಾಲಕರಿಗೂ ಹಾಗೂ ಶಿಕರಿಗೆ ಅಭಿನಂದನೆ ತಿಳಿಸಿದರು.
ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯ ನಾಗರಾಜ್, ಗ್ರಾಪಂ ಮಾಜಿ ಅಧ್ಯ ವಿನು ಕಾರ್ತಿಕ್, ಸುರೇಂದ್ರ ಗೌಡ, ಸುಕನ್ಯಾ ಇತರರು ಇದ್ದರು.