

ಶಿಡ್ಲಟ್ಟ:
ದಿನೇದಿನೆ ನಗರದ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ನಗರದಿಂದ ಜಂಗಮಕೋಟೆ, ಕೈವಾರ ಹಾಗೂ ಎಚ್.ಕ್ರಾಸ್ ಮಾರ್ಗವಾಗಿಸಂಪರ್ಕ ಕಲ್ಪಿಸುವ ಗೌಡನಕೆರೆ ಬಳಿಯ ರಸ್ತೆ ಕಿರಿದಾಗಿರುವುದು ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಮುಳ್ಳಿನ ಗಿಡಗಳು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ.
ಸಾರ್ವಜನಿಕ ಸುರಕ್ಷತೆ ರ್ನಿಲಕ್ಷ
ಮುಳ್ಳಿನ ಗಿಡಗಳು ಸಂಚಾರದ ವೇಳೆ ಮೈಗೆ ತಾಗುತ್ತವೆ. ರಾತ್ರಿ ವೇಳೆ ಸ್ಪಷ್ಟವಾಗಿ ಕಾಣಿಸದ ಕಾರಣ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿವೆ. ರೇಷ್ಮೆ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಶಿಡ್ಲಟ್ಟದಲ್ಲಿ ರೇಷ್ಮೆ, ಕೃಷಿ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ಸರಕು ಸಾಗಣೆ ವಾಹನಗಳ ಓಡಾಟವೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಿರುವಾಗ ಇಂತಹ ಪ್ರಮುಖ ಸಂಪರ್ಕ ರಸ್ತೆಯೇ ಕಿರಿದಾಗಿ ಉಳಿದಿರುವುದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯೇ ಪ್ರಶ್ನೆಯಾಗಿದೆ. ಈ ಹಿಂದೆ ಕೂಡ ರಸ್ತೆ ಬದಿಯಲ್ಲಿ ಬೆಳೆದಿದ್ದ ಜಾಲಿ ಹಾಗೂ ಮುಳ್ಳಿನ ಗಿಡಗಂಟಿಗಳಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ದ್ವಿಚಕ್ರ ವಾಹನ ಸವಾರರಿಗೆ ಮುಳ್ಳುಗಳು ತಾಗಿ ಗಾಯಗಳಾಗಿರುವ ಉದಾಹರಣೆ ಉಂಟು.ಸಂಬಂಧಪಟ್ಟ ಇಲಾಖೆಯ ರ್ನಿಲಕ್ಷ$್ಯದಿಂದ ಸವಾರರು ಪರದಾಡುವಂತಾಗಿದೆ. ಹಾಗಾಗಿ ಕೂಡಲೇ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ಅಗತ್ಯವಿರುವ ಕಡೆ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ತಿರುವುಗಳ ಬಳಿ ಸೂಕ್ತ ಎಚ್ಚರಿಕೆ ಫಲಕ ಅಳವಡಿಸಬೇಕು, ರಾತ್ರಿ ವೇಳೆ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಗೋಚರಿಸುವಂತೆ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸಬೇಕು. ನಗರದ ಬೈಪಾಸ್ ರಸ್ತೆಯಲ್ಲಿನ ವಾಯುಪುತ್ರ ಹೋಟೆಲ್ ಬಳಿಯ ತಿರುವಿನಿಂದ ಆನೂರು ಕ್ರಾಸ್ವರೆಗೂ ರಸ್ತೆ ಕೆರೆಯ ಮೇಲಿರುವುದರಿಂದ ರಸ್ತೆ ಬಹುತೇಕ ಅಂಕು&ಡೊಂಕುಗಳಿಂದ ಕೂಡಿದೆ. ರಸ್ತೆ ಕಿರಿದಾಗಿದ್ದು, ತಿರುವುಗಳು ಹೆಚ್ಚಿವೆ. ರಸ್ತೆಯ ಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳಿಂದ ರಾತ್ರಿ ವೇಳೆ ಸಂಚರಿಸುವುದು ತಂಬಾ ಕಷ್ಟವಾಗಿದೆ. ಯಾಮಾರಿದರೆ ಬಿದ್ದು ಗಾಯಗೊಳ್ಳಬೇಕು. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ಬದಿಯ ಮುಳ್ಳಿನ ಗಿಡಗಳನ್ನು ತೆರವುಗೊಳಿಸಬೇಕು.
— ಎ.ಎ.ನಾರಾಯಣಸ್ವಾಮಿ, ಹುಣಸೇನಹಳ್ಳಿ ನಿವಾಸಿ
ಶಾಶ್ವತ ಪರಿಹಾರ ಕಲ್ಪಿಸಿ
ಅಪಘಾತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವ ಬದಲು, ಅಪಾಯದ ಮುನ್ಸೂಚನೆ ಇರುವ ಸಂದರ್ಭದಲ್ಲೇ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಗೌಡನಕೆರೆ ಏರಿ ರಸ್ತೆಯನ್ನು ಸುಗಮ ಹಾಗೂ ಸುರತ ಸಂಚಾರಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
ಶಿಡ್ಲಟ್ಟ ಹೊರವಲಯದ ಗೌಡನಕೆರೆ ಏರಿ ಮೇಲಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಮುಳ್ಳುಗಿಡಗಳು.
ಶಿಡ್ಲಘಟ್ಟಕ್ಕೆ ವರವಾಗಬೇಕಿದ್ದ
ಗೌಡನಕೆರೆಯಲ್ಲಿ ಯಾರೋ ಪುಣ್ಯಾತ್ಮರು ಜಾಲಿ ಗಿಡ ಬೆಳಸಿ ನಗರವನ್ನು ಹಾಳು ಮಾಡಿರುವುದು ಒಂದೆಡೆಯಾದರೆ, ಕಳೆದ 30 ವರ್ಷಗಳ ಹಿಂದೆ ರಸ್ತೆ ಹೇಗಿತ್ತೋ ಹಾಗೆಯೇ ಇದೆ. ರಸ್ತೆ ಅಗಲೀಕರಣವಾಗಿಲ್ಲ. ನಗರದಿಂದ ಕೈವಾರ, ಎಚ್.ಕ್ರಾಸ್ ಹಾಗೂ ಜಂಗಮಕೋಟೆಗೆ ಹೋಗಬೇಕಾದರೆ ಇದೇ ರಸ್ತೆಯಲ್ಲಿ ಹೋಗಬೇಕು. ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟ. ಈಗಾಗಲೇ ಬಹಳಷ್ಟು ಅಪಘಾತಗಳು ನಡೆದಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಗಲೀಕರಣ ಮಾಡುವ ಜತೆಗೆ ರಸ್ತೆ ಬದಿ ಬೆಳೆದು ನಿಂತಿರುವ ಮುಳ್ಳಿನ ಗಿಡಗಳನ್ನು ತೆರವುಗೊಳಿಸಬೇಕು.ಮುನಿಯಪ್ಪ ನಗರ ನಿವಾಸಿ.