ಊಟದ ಗೃಹ ಕಾಮಗಾರಿ ಪೂರ್ಣ ಯಾವಾಗ?

ದೋರನಹಳ್ಳಿ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷದಿಂದ ಪೂರ್ಣಗೊಳ್ಳದ ಊಟದ ಗೃಹ ಕಟ್ಟಡದ ಹೊರನೋಟ.
ದೋರನಹಳ್ಳಿ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷದಿಂದ ಪೂರ್ಣಗೊಳ್ಳದ ಊಟದ ಗೃಹ ಕಟ್ಟಡದ ಹೊರನೋಟ.
Published on
ದೋರನಹಳ್ಳಿ : ಎರಡು ವರ್ಷದಿಂದ ಮುಗಿಯದ ಊಟದ ಗೃಹ ಕಾಮಗಾರಿ, ಶಿಥಿಲಗೊಂಡ ತರಗತಿ ಕೋಣೆಗಳು, ಕುಡಿಯಲು ನೀರಿಲ್ಲದೆ ಮಕ್ಕಳ ಪರದಾಟ, ಆವರಣದಲ್ಲಿ ಹಂದಿಗಳ ಓಡಾಟ, ಅಲ್ಪ ಮಳೆಯಾದರೂ ಕೆರೆಯಂತೆ ಭಾಸವಾಗುವ ಮೈದಾನ... ಇದು ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರವಸ್ಥೆಯ ಚಿತ್ರಣ. 
ಶಾಲೆ ಸುತ್ತುಗೋಡೆ ಒಡೆದು ಹಾಳಾಗಿದ್ದರ ಬಗ್ಗೆ ವಿಜಯವಾಣಿ ಆಗಾಗ್ಗೆ ವಿಶೇಷ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತ ಶಿಕ್ಷಣ ಇಲಾಖೆ ಗಮನಕ್ಕೆ ತಂದ ನಂತರ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಭೇಟಿ ನೀಡಿ ಸಮಸ್ಯೆ ಮನಗಂಡು ಕಂಪೌAಡ್ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಭೂಸೇನಾ ನಿಗಮ ಕಾಮಗಾರಿ ನಡೆಸುತ್ತಿದೆ. ಆದರೆ ಬಹಳ ವಿಳಂಬ ಮಾಡುತ್ತಿದೆ. ಅಲ್ಲದೆ ಮಣ್ಣುಮಿಶ್ರಿತ ಮರಳು ಬಳಸುತ್ತಿದೆ. ಯೋಗ್ಯವಲ್ಲದ ಮರಳು ಬಳಸಿದರೆ ಸುತ್ತುಗೋಡೆ ಯಾವ ಸಂದರ್ಭದಲ್ಲೂ ಕುಸಿಯಬಹುದು ಎಂಬುದು ಪಾಲಕರು ಮತ್ತು ಎಸ್‌ಡಿಎಂಸಿಯವರ ಆತಂಕ.
ಇನ್ನು ಶಾಲೆಯ ೨೪೫ಕ್ಕೂ ಹೆಚ್ಚು ಮಕ್ಕಳು ಊಟಕ್ಕೆ ಕುಳಿತುಕೊಳ್ಳಲು ಸೂಕ್ತ ಸ್ಥಳವಿಲ್ಲ. ಈ ಕುರಿತು ವಿಜಯವಾಣಿ ಎರಡು ಬಾರಿ ವಿಶೇಷ ವರದಿ ಪ್ರಕಟಿಸಿದ ಬಳಿಕ ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಊಟದ ಗೃಹ ನಿರ್ಮಾಣಕ್ಕೆ ಮುಂದಾಗಿದೆ. ಈ ಕಾಮಗಾರಿಯೂ ಭೂಸೇನಾ ನಿಗಮಕ್ಕೆ ವಹಿಸಿದ್ದರಿಂದ ಎರಡು ವರ್ಷದಿಂದ ಇಲ್ಲದ್ದೊಂದು ನೆಪ ಹೇಳುತ್ತ ದಿನದೂಡುತ್ತಲೇ ಇದೆ.
ಕುಡಿಯುವ ನೀರಂತೂ ಇಲ್ಲವೇ ಇಲ್ಲ. ಎರಡು ಬೋರ್‌ವೆಲ್ ಕೊರೆಸಿದರೂ ಕುಡಿಯಲು ಯೋಗ್ಯವಲ್ಲದ ನೀರು ಬಂದಿದೆ. ಆರ್‌ಒ ಪ್ಲಾಂಟ್ ನಿರ್ಮಾಣ ಸಹ ಭೂಸೇನಾ ನಿಗಮದ ಊಟದ ಗೃಹದಲ್ಲೇ ಒಳಗೊಂಡಿದೆ. ಕಟ್ಟಡ ನಿರ್ಮಿಸಿ ಸುಮ್ಮನಾಗಿದೆ. ಬಾಗಿಲು, ಕಿಟಕಿ, ಸುಣ್ಣ-ಬಣ್ಣ, ವಿದ್ಯುತ್ ಸಂಪರ್ಕ, -Á್ಯನ್, ಉಗ್ರಾಣ, ಆರ್‌ಒ ಪ್ಲಾಂಟ್, ಅಡುಗೆ ಕೋಣೆ ನಿರ್ಮಿಸದೆ ದಿನದೂಡುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ತಕ್ಷಣ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಪಾಲಕರು, ಎಸ್‌ಡಿಎಂಸಿ ಸದಸ್ಯರು ಎಚ್ಚರಿಸಿದ್ದಾರೆ.
"

ಕಂಪೌAಡ್ ನಿರ್ಮಾಣಕ್ಕೆ ಸರಿಯಾದ ಮರಳು ಬಳಸುತ್ತಿಲ್ಲ. ಗಮನಕ್ಕೆ ತಂದರೂ ಭೂಸೇನಾ ನಿಗಮದವರು ಸರಿಯಾಗಿ ಸ್ಪಂದಿಸಿಲ್ಲ. ಕುಡಿಯುವ ನೀರಿಗಂತೂ ಮಕ್ಕಳು ಮನೆಗೆ ಹೋಗಿ ಕುಡಿದು ಬರುವ ಸ್ಥಿತಿ ಇದೆ. ಡೈನಿಂಗ್ ಹಾಲ್ ಕೆಲಸ ಮುಗಿಸಲು ಇನ್ನೆಷ್ಟು ವರ್ಷ ಬೇಕಾಗುತ್ತೋ ಗೊತ್ತಿಲ್ಲ. ಪಾಲಕರು, ಗ್ರಾಮಸ್ಥರನ್ನು ಸೇರಿಸಿ ಮಕ್ಕಳೊಂದಿಗೆ ಹೋರಾಟ ಮಾಡುವುದೊಂದೇ ನಮಗುಳಿದಿರುವ ಏಕೈಕ ದಾರಿ. ಮಕ್ಕಳಿಗೆ ಏನಾದರೂ ಆದರೆ ಶಿಕ್ಷಣ ಇಲಾಖೆ ಹಾಗೂ ಭೂಸೇನಾ ನಿಗಮದವರೇ ಹೊಣೆ.| ಹಣಮಂತ ಕುದರಿಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ



"

ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆ ಅಽಕಾರಿಗಳಿಗೆ ಸಾಕಷ್ಟು ಬಾರಿ ಗಮನಕ್ಕೆ ತರಲಾಗಿದೆ. ಭೂ ಸೇನಾ ನಿಗಮಕ್ಕೂ ವಿನಂತಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ನಿಗಮವು ಹಿರೇಅಗಸಿಯಲ್ಲಿ ಶಾಲಾ ಕೋಣೆ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಎಂಪಿಎಸ್ ಶಾಲೆಯಲ್ಲೂ ಕರೆಂಟ್ ಕನೆಕ್ಷನ್ ಕೊಟ್ಟಿಲ್ಲ. ಕಾಟಾಚಾರಕ್ಕೆ ಕೆಲಸ ಮಾಡುತ್ತಿದೆ. ಸಂಬAಽತರು ಎಚ್ಚೆತ್ತುಕೊಂಡರೆ ಸರಿ, ಇಲ್ಲವಾದರೆ ಹೋರಾಟ ಅನಿವಾರ್ಯ.| ಅಮರೀಶ ಗೋಲಗೇರಿಪ್ರಧಾನ ಕಾರ್ಯದರ್ಶಿ, ಹಳೇ ವಿದ್ಯಾರ್ಥಿಗಳ ಸಂಘ ದೋರನಹಳ್ಳಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net