ಸರ್ಕಾರದ ಖಜಾನೆಯ ನಿಜವಾದ ಸ್ಥಿತಿಗತಿ ಏನು ?

ಪ್ರತಿಪಕ್ಷ ನಾಯಕ ಆರ್.ಅಶೋಕ
ಪ್ರತಿಪಕ್ಷ ನಾಯಕ ಆರ್.ಅಶೋಕ
Published on
ಬೆಂಗಳೂರು: ಕೇರಳಂ ಸಿಎಂ ವಿ.ಡಿ.ಸತೀಶನ್ ಮಾದರಿಯಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ಆರ್ಥಿಕ ಸ್ಥಿತಿ- ಗತಿ ಕುರಿತು ಹಣಕಾಸು ಶ್ವೇತಪತ್ರ ಮಂಡಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಬಿಟ್ಟುಹೋಗಿರುವ ಆರ್ಥಿಕ ಬಳುವಳಿ ಏನು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ರಾಜ್ಯದ ಜನರಿಗಿದೆ.
ರಾಜ್ಯದ ಸಾಲ ಎಷ್ಟು ಹೆಚ್ಚಾಗಿದೆ? ಸರ್ಕಾರದ ಖಜಾನೆಯ ನಿಜವಾದ ಸ್ಥಿತಿಗತಿ ಏನು? ಅವೈಜ್ಞಾನಿಕ ಯೋಜನೆಗಳು, ಮತಬ್ಯಾಂಕ್ ರಾಜಕಾರಣ ಮತ್ತು ದುಂದುವೆಚ್ಚಗಳಿಂದ ರಾಜ್ಯದ ಆರ್ಥಿಕತೆಗೆ ಎಷ್ಟು ಹಾನಿಯಾಗಿದೆ? ಮುಂದಿನ ಪೀಳಿಗೆಯ ಹೆಗಲ ಮೇಲೆ ಎಷ್ಟು ಸಾಲದ ಹೊರೆ ಹಾಕಲಾಗಿದೆ ಎಂಬುದರ ಬಗ್ಗೆ ಹಣಕಾಸು ಶ್ವೇತಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net