ಮನರೇಗಾ ಹೆಸರು ಬದಲಿಸಿ ಯಾವ ಕಿರೀಟ ಇಟ್ಕೊಳ್ತೀರಿ? / DODDABALLAPUR

ದೊಡ್ಡಬಳ್ಳಾಪುರ ತಾಲೂಕಿನ ಸಿದ್ದೆನಾಯಕನಹಳ್ಳಿಯಲ್ಲಿ ಡಾ.ಬಿ.ಆರ್​ ಅಂಬೇಡ್ಕರ್​ ಪುತ್ಥಳಿಯನ್ನು ಸಚಿವ ಕೆ.ಎಚ್​. ಮುನಿಯಪ್ಪ ಅನಾವರಣಗೊಳಿಸಿದರು. ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಡಾ. ಬಿ.ಆರ್​. ಅಂಬೇಡ್ಕರ್​ ಸ್ನೇಹದ ಬಳಗದ ಅಧ್ಯಕ್ಷ ನರೇಶ್​, ಗೌರವ ಅಧ್ಯಕ್ಷ ಮುನಿಯಪ್ಪ, ಗೌರವ ಅಧ್ಯಕ್ಷ ಎಂ ಮುನಿರಾಜು, ಉಪಾಧ್ಯಕ್ಷ ರು ಎಸ್​ ಎನ್​, ಮುನಿರಾಜು ಆರ್​, ಲೋಕೇಶ್​ ಎಂ, ಪ್ರಧಾನ ಕಾರ್ಯದರ್ಶಿ ಎಸ್​.ಎನ್​.ಸುಬ್ರಮಣಿ  ಇದ್ದರು.
ದೊಡ್ಡಬಳ್ಳಾಪುರ ತಾಲೂಕಿನ ಸಿದ್ದೆನಾಯಕನಹಳ್ಳಿಯಲ್ಲಿ ಡಾ.ಬಿ.ಆರ್​ ಅಂಬೇಡ್ಕರ್​ ಪುತ್ಥಳಿಯನ್ನು ಸಚಿವ ಕೆ.ಎಚ್​. ಮುನಿಯಪ್ಪ ಅನಾವರಣಗೊಳಿಸಿದರು. ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಡಾ. ಬಿ.ಆರ್​. ಅಂಬೇಡ್ಕರ್​ ಸ್ನೇಹದ ಬಳಗದ ಅಧ್ಯಕ್ಷ ನರೇಶ್​, ಗೌರವ ಅಧ್ಯಕ್ಷ ಮುನಿಯಪ್ಪ, ಗೌರವ ಅಧ್ಯಕ್ಷ ಎಂ ಮುನಿರಾಜು, ಉಪಾಧ್ಯಕ್ಷ ರು ಎಸ್​ ಎನ್​, ಮುನಿರಾಜು ಆರ್​, ಲೋಕೇಶ್​ ಎಂ, ಪ್ರಧಾನ ಕಾರ್ಯದರ್ಶಿ ಎಸ್​.ಎನ್​.ಸುಬ್ರಮಣಿ ಇದ್ದರು.
Published on
ದೊಡ್ಡಬಳ್ಳಾಪುರ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಗೆ ವಿಬಿ&ಜಿ ರಾಮ್​ ಜಿ ಎಂದು ಹೆಸರಿಟ್ಟಿರುವುದರಿಂದ ಪ್ರಧಾನಿ ಮೋದಿಗೆ ಗೌರವ ಕಡಿಮೆ ಆಗಿದೆ. ಒಬ್ಬ ರಾಷ್ಟ್ರಪಿತ, ಜಗತ್ತು ಒಪ್ಪಿರುವ ವ್ಯಕ್ತಿಯ ಹೆಸರು ಬದಲಾವಣೆ ಮಾಡಿ ನೀವು ಯಾವ ಕಿರೀಟ ಇಟುಕೊಳ್ಳುತ್ತಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಪ್ರಶ್ನಿಸಿದರು.
ನಗರದ ಡಾ. ಬಿ.ಆರ್​ ಅಂಬೇಡ್ಕರ್​ ಸ್ನೇಹದ ಬಳಗ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್​ ಅಂಬೇಡ್ಕರ್​ ಪುತ್ಥಳಿಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅದೊಂದು ದುರಂತ ವಿಚಾರ. ಈ ರಾಷ್ಟ್ರಕ್ಕೆ ಸ್ವಾತಂತ್ರ$್ಯ ತಂದುಕೊಟ್ಟ ಮಹಾನ್​ ಚೇತನ ಮಹಾತ್ಮಗಾಂಧಿ, ರಾಮ ಯಾರಿಗೂ ಬೇಡ ಅಂತ ಹೇಳಲ್ಲ. ಮನೆಯಲ್ಲಿ ರಾಮನಿಗೂ ಆಂಜನೇಯನಿಗೂ ಪೂಜೆ ಮಾಡುತ್ತೇವೆ. ಸಮಾಜ ಸುಧಾರಣೆ, ಸಮಾನತೆ ಸಾರುವ ಉದ್ದೇಶದಿಂದ ಮಹಾತ್ಮ ಗಾಂಧಿ ಹೆಸರು ಇಟ್ಟಿದ್ದೆವು. ಮನಮೋಹನ್​ ಸಿಂಗ್​ ಸರ್ಕಾರದಲ್ಲಿ ನಾನು ಸಚಿವನಿದ್ದಾಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಮಾಡಿದ್ದರು. ಇದನ್ನು ಇಡೀ ದೇಶ ಒಪ್ಪಿತ್ತು ಎಂದರು.
ಯಾರಿಗೆ ಗೊತ್ತಿಲ್ಲ ರಾಮ. ಎಷ್ಟು ಜನ ರಾಮ ಕೋಟಿ ಬರೆಯುತ್ತೀರಾ?. ನಾನು ನಿತ್ಯ ರಾಮ ಕೋಟಿ ಬರೆಯುತ್ತೇನೆ. ನೀವು ಓಟು ಪಡೆಯಲು ರಾಮನನ್ನು ಉಪಯೋಗಿಸಬೇಡಿ. ಆತ್ಮಶುದ್ದವಾಗಿ ರಾಮನನ್ನು ಪ್ರೀತಿ ಮಾಡಿ, ಪೂಜೆ ಮಾಡಿ. ಗಾಂಧಿ ಹೆಸರು ಬದಲಾಯಿಸಿದ್ದಕ್ಕೆ ನಮಗೆಲ್ಲ ನೋವಿದೆ. ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದರು.
ಕೃಷ್ಣಬೈರೇಗೌಡರ ಪೂರ್ವಜರ ಆಸ್ತಿ : ಸಚಿವ ಕೃಷ್ಣಬೈರೇಗೌಡ ಭೂ ಕಬಳಿಕೆ ವಿಚಾರ ಕುರಿತು ಮಾತನಾಡಿದ ಸಚಿವ ಮುನಿಯಪ್ಪ, ನಾನು ಅಲ್ಲೇ ರಾಜಕಾರಣ ಮಾಡಿದವನು. ಅದು ಮೂಲತ@ ಅವರ ಪೂರ್ವಜರ ಆಸ್ತಿ. ಅವರ ಚಿಕ್ಕಪ್ಪ ವ್ಯವಸಾಯ ಮಾಡುತ್ತಿದ್ದರು. ನೂರು ವರ್ಷಗಳ ಇತಿಹಾಸವಿದೆ. ಕೃಷ್ಣಬೈರೇಗೌಡರಿಗೆ ಗೊತ್ತಿಲ್ಲ, ಅಸಲಿಗೆ ಅವರು ಹುಟ್ಟಿದ್ದರೊ ಇಲ್ಲವೋ ಗೊತ್ತಿಲ್ಲ. ಇಂತದ್ದನೆಲ್ಲ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಕೃಷ್ಣಬೈರೇಗೌಡ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದ್ದಾರೆ. ಅದನ್ನ ಸಹಿಸಲಾಗದೆ ತರಲೆ ತಕರಾರು ತರುತ್ತಿದ್ದಾರೆ. ಆರೋಪ ಮಾಡುವವರು ದಾಖಲೆ ಒದಗಿಸಲಿ. ಉತ್ತರ ಕೊಡಲು ಅವರು ತಯಾರಿದ್ದಾರೆ. ಅವರಿಗೂ ಅದಕ್ಕೂ ಸಂಬಂಧವಿಲ್ಲ. ತನಿಖೆಗೆ ಅವರು ತಯಾರಿದ್ದಾರೆ ಎಂದರು..
ತಹಸೀಲ್ದಾರ್​ಗೆ ಅಧಿಕಾರ : ಬಿಪಿಎಲ್​ ಕಾರ್ಡ್​ ಎಪಿಎಲ್​ ಆಗಿ ಪರಿವರ್ತನೆಯಾಗಿದ್ದರೆ, ಅಂತಹವರು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿ ಮತ್ತೆ ಬಿಪಿಎಲ್​ ಕಾರ್ಡ್​ ಹಿಂದಿರುಗಿಸುವ ಅಧಿಕಾರವನ್ನು ತಹಸೀಲ್ದಾರ್​ಗೆ ನೀಡಲಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.

ದೇಶಕ್ಕೆ ಶ್ರೇಷ್ಠ ಸಂವಿಧಾನ ತಂದುಕೊಟ್ಟ ಮಹಾನ ವ್ಯಕ್ತಿ ಡಾ.ಬಿ.ಆರ್​ ಅಂಬೇಡ್ಕರ್​ ಅವರ ಪುತ್ಥಳಿಯನ್ನು ಅನಾವರಣ ಮಾಡಿದ್ದು ಸಂತಸ ತಂದಿದೆ. ಎಲ್ಲರೂ ಶಿಕ್ಷಣವನ್ನು ಪಡೆಯಬೇಕು. ಉತ್ತಮ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net