ತರಹೇವಾರಿ ಹೂಗಳಲ್ಲಿ ಅರಳಲಿದೆ 'ಗಂಗ'ರ ಕಾಲದ ಇತಿಹಾಸ; ಈ ದಿನದಿಂದ ಲಾಲ್​​ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಅವಕಾಶ..Lalbagh

Lalbagh’s Independence Day flower show
Lalbagh’s Independence Day flower show
Published on

ಪ್ರಮುಖ ಮುಖ್ಯಾಂಶಗಳು

  • ಲಾಲ್​ಬಾಗ್​ನಲ್ಲಿ ಈ ಬಾರಿ ಪಶ್ಚಿಮ ಗಂಗರ ಆಳ್ವಿಕೆ ಬಗ್ಗೆ ಫಲಪುಷ್ಪ ಪ್ರದರ್ಶನ.
  • ಆಗಸ್ಟ್ 6 ರಿಂದ 17 ರವರೆಗೆ 220ನೇ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ.
  • ಗಂಗರ ಕೊಡುಗೆ, ಸಂಸ್ಕೃತಿ, ಧರ್ಮ, ಭಾಷೆ ಬಗ್ಗೆ ಮಾಹಿತಿ ಅನಾವರಣ.
ಬೆಂಗಳೂರು: ಸ್ನೇಹ ಸಮ್ಮಿಲನ, ತರಹೇವಾರಿ ಹೂಗಳ ಅಧ್ಯಯನ, ಮರದಿಂದ ಕೊರೆದ ಕಲಾಕೃತಿಗಳು, ಹಳೆತನ್ನು ಅರಿಯುವುದು, ಅನಾದಿ ಕಾಲದ ಮರಗಳ ಅರಿವು, ಗುಲಾಬಿ ಗಿಡಗಳ ಆಕರ್ಷಣೆ..ಫೋಟೋ ಕ್ಲಿಕ್ಕಿಸಿಕೊಳ್ಳಲು ಸಿಗುವ ಬೆಟ್ಟದ ತುದಿ.. ಬ್ಲಾಗರ್ಸ್​​ಗಳಿಗೆ ಒಂದು ದಿನ ಕಾಂಟೆಂಟ್​ ಹೀಗೆ ನಾನಾ ವಿಚಾರಕ್ಕೆ ಲಾಲ್​ಬಾಗ್​ ಫಲಪುಷ್ಟ ಪ್ರದರ್ಶನ ಕಾರಣವಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಲಾಲ್​​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದೆ. 2026 ಆಗಸ್ಟ್​ 15ರ ಥೀಮ್ (Lalbagh’s Independence Day flower show)ಕರ್ನಾಟಕವನ್ನು ಆಳೀದ​ ಗಂಗರ ಕಾಲದ ಇತಿಹಾಸನ್ನು ತೋಟಗಾರಿಕಾ ಇಲಾಖೆ ಆಯ್ಕೆ ಮಾಡಿಕೊಂಡಿದೆ.

ಎಂದಿನಿಂದ ಇರಲಿದೆ ಪ್ರದರ್ಶನ

ಆಗಸ್ಟ್ 6 ರಿಂದ 17 ರವರೆಗೆ 220ನೇ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ಇರಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ 12 ದಿನಗಳ ಕಾಲ ನಡೆಯಲಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ ಎಂದಿನಂತೆ ಉಚಿತ ಪ್ರವೇಶ ಇರಲಿದೆ. ಆದರೆ, ವಯಸ್ಕರಿಗೆ ಹಾಗೂ ವಯೋವೃದ್ಧರಿಗೆ ಇರುವ ಪ್ರವೇಶ ಶುಲ್ಕ ಎಷ್ಟು ಎನ್ನುವದನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಗಂಗರ ಭವ್ಯ ಇತಿಹಾಸ, ಕೊಡುಗೆಗಳನ್ನು ಬಿತ್ತರಿಸುವುದು. ಯಾವ ಭಾಷೆ, ಧರ್ಮಕ್ಕೆ ಒತ್ತು ಕೊಟ್ಟರು ಎಂಬುವುದನ್ನು ಪ್ರದರ್ಶಿಸುವುದು ಈ ಥೀಮ್​ನ ಉದ್ದೇಶವಾಗಿದೆ.

ತೋಟಗಾರಿಕಾ ಇಲಾಖೆಯ ಅಧಿಕಾರಿ ಹೇಳಿದ್ದಿಷ್ಟು

ಇಪ್ಪತ್ತು ಥೀಮ್​ಗಳ ಬಗ್ಗೆ ಸಿಎಂ ಕಚೇರಿಗೆ ಕಳುಹಿಸಿದ್ದೆವು. ಅದರಲ್ಲಿ ಪಶ್ಚಿಮ ಗಂಗಾ ರಾಜವಂಶದ ಇತಿಹಾಸವನ್ನು ಪುಷ್ಪಗಳ ಮೂಲಕ ಪ್ರದರ್ಶಿಸಲು ಅನುವು ಮಾಡಿಕೊಡಲಾಯಿತು. ದಕ್ಷಿಣ ಕರ್ನಾಟಕದಲ್ಲಿ ಬಲವಾದ, ಏಕೀಕೃತ ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಗಂಗಾ ರಾಜವಂಶಕ್ಕಿದೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಗಂಗರ ಕಾಲದ ಆಳ್ವಿಕೆ ಬಗ್ಗೆ ಮಾಹಿತಿ ಕಲೆ ಹಾಕಲು ನಮ್ಮ ತಂಡ ನಿರಂತರ ಕೆಲಸ ಮಾಡುತ್ತಿದೆ. ಇತಿಹಾಸಕಾರರು, ಶಿಕ್ಷಣ ತಜ್ಞರು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಜೊತೆ ಮಾತನಾಡಿದ್ದೇವೆ. ಆಗಸ್ಟ್​ 15ರ ಸಲುವಾಗಿ ತಯಾರಾಗುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಂಗರ ಕಾಲದ ಪ್ರಮುಖ ಆಡಳಿತಗಾರರು, ಗಂಗರ ರಾಜಧಾನಿ ಯಾವುದು ಹೇಗಿತ್ತು, ತಲಕಾಡಿನ ದೇವಾಲಯ, ವರ್ಣಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಂಗ ರಾಜವಂಶಸ್ಥರು ಆಳ್ವಿಕೆ ಮಾಡಿದ ಬಗ್ಗೆ

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತವನ್ನು ಗಂಗ ರಾಜವಂಶಸ್ಥರು .ಶ. 350 ರಿಂದ 1000ರವರೆಗೆ ಆಳಿತು. ಇದನ್ನು ಗಂಗವಾಡಿ ಪ್ರದೇಶ ಎಂದು ಕರೆಯಲಾಗಿತ್ತು. ಇವರ ಪ್ರಮುಖ ರಾಜಧಾನಿ ಎಂದರೆ ಇಂದಿನ (ಕುವಲಾಳ)ಕೋಲಾರ, ತಲಕಾಡು. ಇವರ ಕಾಲದಲ್ಲಿ ಧರ್ಮ ಹಾಗೂ ಸಾಹಿತ್ಯಕ್ಕೆ ಹೆಚ್ಚು ಕೊಡುಗೆ ಕೊಡಲಾಯಿತು. ಮಾನ್ಯಪುರ ಎಂದರೆ ಇಂದಿನ ನೆಲಮಂಗಲ ಗಂಗರು ಮತ್ತೊಂದು ಆಡಳಿತ ಕೇಂದ್ರವನ್ನಾಗಿಸಿಕೊಂಡಿದ್ದರು. ಮುಕುಂದ ಇಂದಿನ ಚನ್ನಪಟ್ಟಣ ಅವರಿಗೆ ಮತ್ತೊಂದು ಪ್ರಮುಖ ನೆಲೆಯಾಗಿತ್ತು.
ಶ್ರವಣ ಬೆಳಗೊಳದಲ್ಲಿರುವ ಬಾಹುಬಲಿ ವಿಗ್ರಹ ಇವರ ಕಾಲದಲ್ಲಿಯೇ ಕೆತ್ತಲಾಗಿದೆ. ಜೈನ ಧರ್ಮ ಹಾಗೂ ವೈದಿಕ ಧರ್ಮವನ್ನು ಇವರು ಪ್ರೋತ್ಸಾಹಿಸಿದರು. ನೀರಾವರಿಗೆ ಪ್ರಮುಖ ಆದ್ಯತೆ ಕೊಡಲಾಗಿದೆ. ಕಾಲುವೆ ಮೂಲಕ ನೀರು ಹರಿಸುವುದನ್ನು ಕಾರಿಗೆ ತಂದರು. ಕನ್ನಡ, ಸಂಸ್ಕೃತಿ ಭಾಷೆಗೆ ಇಲ್ಲಿ ಬೆಂಬಲ ಸಿಕ್ಕಿತ್ತು. ಚಾವುಂಡ ರಾಯ ಚಾವುಂಡ ಪುರಾಣ ಬರೆದರು.

ಆಳ್ವಿಕೆ ನಡೆಸಿದ ಪ್ರಮುಖ ರಾಜರು ಯಾರು?

ಕರ್ನಾಟಕವನ್ನು ಆಳಿದ ಪ್ರಮುಖ ಪಶ್ಚಿಮ ಗಂಗಾ ರಾಜವಂಶದಲ್ಲಿ ಕೊಂಗುಣಿವರ್ದ, ದುರ್ವಿನೀತ ಹಾಗೂ ಶಿವಮಾರ ಒಬ್ಬರು. ರಾಚಮಲ್ಲ ಗಂಗರ ಆಳ್ವಿಕೆಯನ್ನು ಗಟ್ಟಿಗೊಳಸಿದ್ದರು ಎನ್ನುವುದು ಇತಿಹಾಸಪುಟದಲ್ಲಿ ಇವೆ
ಜನವರಿ 26 ಗಣರಾಜ್ಯೋತ್ಸವದಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹಾಗೂ ತಂದೆ ಕುವೆಂಪು ಅವರ ಕಾಂಬಿನೇಷನ್​ನಲ್ಲಿ ಆಯೋಜನೆ ಮಾಡಲಾಗಿತ್ತು. ಅಂದು ಹೊಸದಾಗಿ ನಾಟಕ ಪ್ರದರ್ಶಿಸುವ ಕಾರ್ಯಕ್ರಮವನ್ನು ಆಯೋಜಿಸಿ ಕಾರ್ಯರೂಪಕ್ಕೆ ತಂದ ಕಾರಣ ಹೆಚ್ಚು ಜನರು ಆಗಮಿಸಿದ್ದರು. ಈ ಬಾರಿ ಗಂಗರ ಆಳ್ವಿಕೆಯ ಥೀಮ್​ ಹೇಗೆ ಮೂಡಿಬರಲಿದೆ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net