ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತ

ಅರಕಲಗೂಡು ತಾಲೂಕು ಕೊಣನೂರು ಪಿಎಂಶ್ರೀ ಶಾಲಾ ಪ್ರಾರಂಭೋತ್ಸವದಲ್ಲಿ ಬಿಇಒ ಕೆ.ಪಿ. ನಾರಾಯಣ ಅವರು ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಅಕ್ಷರ ದಾಸೋಹ ಅಧಿಕಾರಿ ರಂಗಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಜಗದೀಶ್, ಶಿಕ್ಷಕರು ಇದ್ದರು.

Published on
ಅರಕಲಗೂಡು: ತಾಲೂಕಿನಲ್ಲಿ 2026- 27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು. ಶಾಲೆಗೆ ಹೆಜ್ಜೆ ಇಟ್ಟ ವಿದ್ಯಾರ್ಥಿಗಳನ್ನು ಶಿಕ್ಷಕರು ಸೇರಿ ಬ್ಯಾಂಡ್ ಸೆಟ್ ಮೂಲಕ ಗುಲಾಬಿ ಹೂವು ನೀಡಿ ಬರಮಾಡಿಕೊಂಡರು.
ಪಟ್ಟಣದ ಪೇಟೆ ಪಿಎಂಶ್ರೀ ಮತ್ತು ಕೊಣನೂರು ಪಿಎಂಶ್ರೀ ಶಾಲೆಗೆ ಭೇಟಿ ನೀಡಿದ ಬಿಇಒ ಕೆ.ಪಿ. ನಾರಾಯಣ ಅವರು ಮಕ್ಕಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ತಾಲೂಕಿನಲ್ಲಿ ಈ ಬಾರಿ ಬೆಳವಾಡಿ ಮತ್ತು ದೊಡ್ಡಮಗ್ಗೆ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ. ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net