ಮಳೆ-ಚರಂಡಿ ನೀರಿನಲ್ಲಿ ವಾರದ ಸಂತೆ

ದೋರನಹಳ್ಳಿಯಲ್ಲಿ ಸೋಮವಾರ ಸುರಿದ ಅಲ್ಪ ಮಳೆಗೆ ಚರಂಡಿಯಲ್ಲಿ ನೀರು ಹೋಗದೆ ವಾರದ ಸಂತೆಗೆ ಮಳೆ ನೀರಿನೊಂದಿಗೆ ಕೊಳಚೆ ನೀರು ನುಗ್ಗಿರುವುದು.
ದೋರನಹಳ್ಳಿಯಲ್ಲಿ ಸೋಮವಾರ ಸುರಿದ ಅಲ್ಪ ಮಳೆಗೆ ಚರಂಡಿಯಲ್ಲಿ ನೀರು ಹೋಗದೆ ವಾರದ ಸಂತೆಗೆ ಮಳೆ ನೀರಿನೊಂದಿಗೆ ಕೊಳಚೆ ನೀರು ನುಗ್ಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತರಕಾರಿ ಮಾರುಕಟ್ಟೆ ಇಲ್ಲದೆ ದೋರನಹಳ್ಳಿ
  • ಕಲುಷಿತ ನೀರಿನಲ್ಲಿ ವ್ಯಾಪಾರ
  • ಎಚ್ಚೆತ್ತುಕೊಳ್ಳದ ಪಪಂ ಆಡಳಿತ
ದೋರನಹಳ್ಳಿ : ಮಳೆಗಾಲ ಶುರುವಾಗಿ ಎರಡು ತಿಂಗಳು ಸಮೀಪಿಸಿದ್ದು ಈವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆದರೂ ಸೋಮವಾರ ಬೆಳಗ್ಗೆ ಸುರಿದ ಅಲ್ಪ ಮಳೆಗೆ ರಸ್ತೆ ಮೇಲೆ ಹರಿದು ಬಂದ ಚರಂಡಿ ಮತ್ತು ಮಳೆ ನೀರಿನಲ್ಲಿ ವಾರದ ಸಂತೆ ನಡೆಯಿತು.
ಪಟ್ಟಣ ಪಂಚಾಯಿತಿಯಾಗಿ ಏಳು ತಿಂಗಳು ಕಳೆಯುತ್ತಾ ಬಂದರೂ ಸಾರ್ವಜನಿಕರು ಅಂದುಕೊAಡ ರೀತಿಯಲ್ಲಿ ಇನ್ನೂ ಪಟ್ಟಣ ಪಂಚಾಯಿತಿಯ ಪೂರ್ಣ ಕಾರ್ಯಾರಂಭ ಆಗುತ್ತಿಲ್ಲ. ಆದರೆ ಸಣ್ಣ-ಪುಟ್ಟ ಸಮಸ್ಯೆಗಳಾದ ಚರಂಡಿ ಸ್ವಚ್ಛತೆ, ಬೀದಿ ದೀಪಕ್ಕೆ ಬಲ್ಬ ಹಾಕುವುದು. ವಾರದ ಸಂತೆ ಸ್ಥಳಾಂತರ ಮಾಡಬೇಕಿದ್ದ ಸಣ್ಣ ಕೆಲಸಗಳು ಕೂಡ ನಡೆಯದಿರುವುದು ಹೋರಾಟಗಾರರ ಕಣ್ಣು ಕೆಂಪಾಗಿಸಿದೆ.
ಸAತೆ ಮೊದಲು ಹಳೇ ಪಿಎಚ್‌ಸಿ ಆವರಣದಲ್ಲಿ, ಹೆದ್ದಾರಿಯ ಅಕ್ಕ ಪಕ್ಕದಲ್ಲೆ ಜರುತ್ತಿತ್ತು ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಪಟ್ಟಣದ ಚಿಕ್ಕ ಅಗಸಿಯಿಂದ ಮಲ್ಲಯ್ಯ ದೇವಸ್ಥಾನದ ರಸ್ತೆಗೆ ಸ್ಥಳಾಂತರಿಸಲಾಯಿತು. ಆದರೆ ಈ ರಸ್ತೆಯಲ್ಲಿ ಸ್ವಲ್ಪ ಮಳೆಯಾದರೆ ಸಾಕು ಚರಂಡಿ ಮತ್ತು ಮಳೆ ನೀರು ಒಟ್ಟಿಗೆ ಸಂತೆಯೊಳಗೆ ನುಗ್ಗಿದ್ದರಿಂದ ತರಕಾಯಿ ಮಾರುವವರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು.
ವ್ಯಾಪಾರ ಮಾಡುವವರ ಎಡ ಬಲ ಎರಡು ಕಡೆ ಚರಂಡಿ ಸಂಪೂರ್ಣ ಕಸ, ಕಡ್ಡಿ, ಕಲ್ಲು, ಮಣ್ಣು, ಪ್ಲಾಸ್ಟಿಕ್‌ನಿಂದ ತುಂಬಿಕೊAಡಿದ್ದು, ಅಲ್ಪ ಮಳೆಗೆ ಹೀಗಾದರೆ ಇನ್ನೂ ದೊಡ್ಡ ದೊಡ್ಡ ಮಳೆ ಬಂದರೆ ಸಂತೆ ಏನಾಗಬಹುದು ಎಂದು ಯೋಚಿಸುವಂತಾಗಿದೆ. ಹೀಗಾಗಿ ಕೂಡಲೇ ಚರಂಡಿ ಸ್ವಚ್ಛಗೊಳಿಸಿ ಸಂತೆಗೆ ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಟ್ಟಣದ ಒಳ ರಸ್ತೆಗಳು, ಹೆದ್ದಾರಿ ಪಕ್ಕದ ಚರಂಡಿ ಮೇಲೆ ಅಕ್ರವಾಗಿ ಕೆಲವರು ಕಟ್ಟೆ, ಶೆಡ್, ಗೂಡಂಗಡಿ ನಿರ್ಮಾಣ ಮಾಡಿದರೆ ಇನ್ನೂ ಕೆಲವರು ಮನೆಯನ್ನೆ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಕೆಲವರು ವಾಹನ ಪಾರ್ಕಿಂಗ್ ಸ್ಥಳ ಮಾಡಿಕೊಂಡಿದ್ದರಿAದ ಅಲ್ಪ ಮಳೆ ಬಂದರೂ ನೀರು ನೇರವಾಗಿ ರಸ್ತೆಗಿಳಿಯುತ್ತದೆ ಹೀಗಾಗಿ ಕೂಡಲೇ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂಬುದು ಸಂತೆ ವ್ಯಾಪಾರಿಗಳು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net