ವಾರಭವಿಷ್ಯ: ಈ ರಾಶಿಯವರು ಜ್ಞಾನವಂತರಾಗಲು ಶ್ರೀರಾಮಚಂದ್ರನನ್ನು ಪೂಜಿಸಲು ಮರೆಯದಿರಿ
Zodiac Signs
Published on:
Copied
Follow Us
ಮೇಷ: ವಿಶ್ವಾವಸು ಸಂವತ್ಸರದ ಎರಡನೇ ಭಾನುವಾರವೂ ಸೂರ್ಯನಾರಾಯಣನ ಪೂಜೆಗೆ ಶ್ರೇಷ್ಠವಾದ ದಿವಸ. ಸೂರ್ಯನಿಗೆ ಮೇಷ ರಾಶಿ ಉಚ್ಚ ರಾಶಿಯಾಗಿ, ಅವನನ್ನು ಪೂಜಿಸಿದ್ದೆ ಆದರೆ ಆಗಬೇಕಾದ ಕೆಲಸ, ಆಗಿ ನಿಂತಿರುವ ಕೆಲಸ ಮುಂದೆ ಸಾಗಿ ಆಶೋತ್ತರ ಸಿದ್ಧಿಸುವ ಕಾಲವಿದು. ಸೂರ್ಯನಾರಾಯಣ ಕವಚ ಪಠಿಸಿ. ಯಶಸ್ಸಿನ ಮಂತ್ರವೇ ಸೂರ್ಯಾರಾಧನೆಯಾಗಿರಲಿ.
ವೃಷಭ: ಮಕರದಲ್ಲಿ ಶುಕ್ರ, ರವಿ, ಬುಧ ಒಂದೇ ಮನೆಯಲ್ಲಿ ಇದ್ದು ಒಳ್ಳೆಯ ಫಲ ಕೊಡುವ ಗ್ರಹಗಳು. ಯಾವುದೇ ಕಾರಣಕ್ಕೂ ಈ ರಾಶಿಯವರು ಹಳ್ಳದಲ್ಲಿ ಬೀಳದೆ ಹೊನ್ನಿನ ಬೆಳಕಿನಲ್ಲಿ ಸಾಗಿ ಕಾರ್ಯಪ್ರವೃತ್ತರಾದರೆ ಭಗವಂತನ ಅನುಗ್ರಹ ದೊರೆಯುವುದು. ದುರ್ಗೆಯನ್ನು ಪೂಜಿಸಿದರೆ ನೀರು ಹರಿಯುವಂತೆ ಸಲೀಸಾಗಿ ಕೆಲಸಗಳು ಮುಂದೆ ಸಾಗುತ್ತವೆ.
ಮಿಥುನ: ಲಗ್ನದಲ್ಲಿ ಗುರು ಇದ್ದಾನೆ. ರವಿ ಬುಧ ಮಿತ್ರರು. ನೀವು ಇನ್ನುಳಿದ ಬಾಕಿ ಮಾಘ ಮಾಸದ ದಿನಗಳಲ್ಲಿ ಮೂರು ದಿವಸ ಅರುಣ ಪೂರ್ವಕ ಸೂರ್ಯ ನಮಸ್ಕಾರ ಮಾಡಿದರೆ ಶರೀರಕ್ಕೆ ಆರೋಗ್ಯ ಹಾಗೂ ನಿಮ್ಮ ಯಶಸ್ಸಿಗೆ ಮಹತ್ವವಾದ ತಿರುವು ದೊರೆತು ಅನುಕೂಲವಾಗುತ್ತದೆ.
ಕಟಕ: ಪರಿಪೂರ್ಣ ಆರೋಗ್ಯ ಇರುವುದಿಲ್ಲ. ಅಲ್ಪ ಸ್ವಲ್ಪ ದೇಹ ಸ್ವಾಸ್ಥ್ಯ ಕುಗ್ಗುತದೆ. ಕೊಡದಲ್ಲಿ ಸಮುದ್ರವನ್ನೇ ಹೊರುತ್ತೇನೆ ಎಂಬ ಸಂಕಲ್ಪ ಬೇಡ. ಶನಿಯು 9ರಲ್ಲಿ ಇದ್ದಾನೆ. ಶನಿ ಅನುಗ್ರಹ ಪಡೆದ ಋಷಿಗಳು 150ವರ್ಷಗಳಿಗೂ ಅಧಿಕ ಬದುಕಿದ ಉದಾಹರಣೆ ಇದೆ. ಅವನಿಗೆ ಶಿವ ಪೂಜಕರನ್ನು ಕಂಡರೆ ಬಹಳ ಒಲುಮೆ. ಈ ಸಂದರ್ಭದಲ್ಲಿ ಸೂರ್ಯ, ಶನಿ, ಗುರುವಿಗೆ ಗುರು ನರಸಿಂಹನನ್ನು ಪ್ರಾರ್ಥಿಸಿ.
ಸಿಂಹ: ಈ ರಾಶಿಯವರು ಸಿಂಹವಾಗಿ ಗರ್ಜನೆ ಮಾಡಿದರೆ ಮಾತ್ರವೇ ಬೇಕಾದ್ದು ಸಿಗುತ್ತದೆ. ನೀವು ನಿಮ್ಮ ವ್ಯಕ್ತಿತ್ವ ಕಾಪಾಡಿಕೊಂಡರೆ ಕಾಲ ಯಮನನ್ನೇ ಗೆಲ್ಲಬಹುದು. ಕಾಲಜ್ಞಾನ, ಸಮಯ ಪ್ರಜ್ಞೆ ಕರ್ತವ್ಯ ಪ್ರಜ್ಞೆ, ಕಾಲದ ಇತಿ ಮಿತಿ ತಿಳಿದು ಸರಿಯಾಗಿ ವ್ಯವಹಾರ ಮಾಡಿ. 11ನೆ ಮನೆಯ ಗುರು ಕೊಡಬೇಕಾದ್ದನು ಕೊಟ್ಟೆ ಕೊಡುತ್ತಾನೆ.
ಕನ್ಯಾ: ಪಂಚಮದಲ್ಲಿ ಸೂರ್ಯ ಬುಧ ಶುಕ್ರ ಇರುವ ಗ್ರಹಸ್ಥಿತಿಗೆ ನೀವು ನಿಮ್ಮ ಕುಲದೇವರ ಮೊರೆಹೋಗಿ. ಸಪ್ತಮ ಶನಿ, ದಶಮದಲ್ಲಿ ಗುರು ಇದ್ದಾನೆ. ಎಚ್ಚರಿಕೆಯಿಂದ ಸಾಗಿ. ಧನ ಸಂಪಾದನೆ ಧರ್ಮ ಮಾರ್ಗದಲ್ಲಿ ಇರಲಿ. ನಡೆಯುವ ಮಾತು ತಪ್ಪಿದರೆ ದೈವವೇ ಶಿಕ್ಷೆ ನೀಡುತ್ತಾನೆ.ಕೆಲಸ ಕಾರ್ಯಗಳಿಗೆ ದೈವ ಬಲವೇ ಮುಖ್ಯ.
ತುಲಾ: ಚಿನ್ನದಂತಹ ಸಮಯವಿದು. ನೀವೆಲ್ಲರೂ ನಿಮ್ಮ ತಂದೆ ತಾಯಿಗೆ ಚಿನ್ನದಂಥ ಮಕ್ಕಳಾಗಿದ್ದೀರಿ. ಈ ಸಮಯವನ್ನು ಪ್ರಜ್ಞಾವಂತರಾಗಿ ಯಾರ ಮನಸ್ಸನ್ನೂ ನೋಯಿಸದೇ, ಯಾರನ್ನೂ ಹಿಯಾಳಿಸದೇ, ಅಗೌರವ ತೋರದೆ ಇದ್ದಲ್ಲಿ ಬದುಕು ಬಂಗಾರವಾಗುವುದು. ಶನಿ ಸ್ತೋತ್ರವನ್ನು ಪಠಿಸಿ.
ವೃಶ್ಚಿಕ: ಪೆಟ್ಟು ಬಿದ್ದಾಗಲೇ ಅಂಗಾಂಗಗಳ ಕಾರ್ಯ ಗೊತ್ತಾಗುವುದು. ಶಾಸ್ತ್ರದಲ್ಲಿ ಒಂದು ಮಾತಿದೆ. ಯಾರನ್ನಾದರೂ ವ್ಯಂಗ್ಯ ಮಾಡಿ ದರೆ ಮುಂದೆ ಅಂಗವಿಕಲರಾಗುತ್ತಾರೆ ಎಂದು ಯಾರನ್ನೂ ಹಿಯಾಳಿಸದೇ ಸುಬ್ರಹ್ಮಣ್ಯನನ್ನು ಪೂಜಿಸಿ ಪ್ರಾರ್ಥಿಸಿ. ಆರೋಗ್ಯದಲ್ಲಿ ಚೇತರಿಕೆ, ಹೊಸ ಚೈತನ್ಯ ಕೊಡುತ್ತಾನೆ.
ಧನಸ್ಸು: ಜ್ಞಾನವಂತರಾಗಲು, ಶ್ರೀರಾಮಚಂದ್ರನನ್ನು ಪೂಜಿಸಲು ಮರೆಯದಿರಿ. ನಿಮ್ಮ ಸಮಯ ಒಳ್ಳೆಯದಿದೆ. ಹೆಣ್ಣು ಮಕ್ಕಳನ್ನು ದೈವವೆಂದು, ಅವರೇ ಚಂಡಿಕಾ, ದುರ್ಗಾಪರಮೇಶ್ವರಿ ಎಂಬ ಭಾವನೆಯಿಂದ ನೋಡಿ. ಚಂಡಿಯೇ ನಿಮ್ಮ ಸಂತೋಷ ಮುಗಿಲು ಮುಟ್ಟುವಂತೆ ಮಾಡುತ್ತಾಳೆ. ಧನ ನಿರೀಕ್ಷೆ ಮಾಡಬಹುದು.
ಮಕರ: ಈ ರಾಶಿಗೆ 6ರಲ್ಲಿ ಗುರು ಬುಧನ ಮನೆಯಲ್ಲಿ ಇದ್ದಾನೆ. ಬುಧ ಎಂದರೆ ಮಹಾವಿಷ್ಣು. 6, 8, 12ನೇ ಮನೆ ರೋಗ, ಋಣ, ಶತ್ರು ಭಯ ಸೂಚಿಸುತ್ತದೆ. ದೈವ ಋಣ ಪಿತೃ ಋಷಿ ಋಣ ತೀರಿಸಲೇಬೇಕು. ದಾರಿದ್ರ ದಹನ ಶಿವ ಸ್ತೋತ್ರ ಪಠಿಸಿ. 3ರ ಶನಿ ನೀವು ಬಯಸಿದ್ದನ್ನು ನಿಮ್ಮ ಮನೆ ಬಾಗಿಲಿಗೆ ಇಟ್ಟು ಹೋಗುತ್ತಾನೆ.
ಕುಂಭ: ರಾಶಿಯಲ್ಲಿ ರಾಹು ಇದ್ದು , ಸಮಯವು ನಮ್ಮ ಹಿಡಿತದಲ್ಲಿ ಇಲ್ಲದಿರುವಾಗ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಹಾಕಿ ಮುಂದೆ ಸಾಗಬೇಕು. ಶನಿ ಸಂಚಾರ ಇದ್ದು ಕೆಲಸಗಳು ಅಪೂರ್ಣವಾಗುತ್ತವೆ. ಆದ್ದರಿಂದ ಶುಕ್ರವಾರದ ಪ್ರದೋಷ ಕಾಲದಲ್ಲಿ ಮಹಾಲಕ್ಷ್ಮೀಯನ್ನು ಷೋಡಶ ಉಪಚಾರದಿಂದ ಪೂಜಿಸಿದರೆ ಕಷ್ಟ ಪರಿಹರಿಸುತ್ತಾಳೆ. ಲಕ್ಷ್ಮೀ ಸಹಸ್ರನಾಮ ಪಾರಾಯಣ ಮಾಡಿ.
ಮೀನ: ರಾಶ್ಯಾಧಿಪತಿ 4ರಲ್ಲಿ ಇದ್ದು, ಗುರು ಶನಿ ಬಲ ಇರುವುದಿಲ್ಲ. ಜಾಗ್ರತೆ ಯಿಂದ ಜೀವನ ನಡೆಸುವುದು ಒಳ್ಳೆಯದು. ನಿಮ್ಮ ದಿಕ್ಕನ್ನು ತಪ್ಪಿಸಲು ಗ್ರಹಗಳ ಪ್ರಭಾವ ಇರುವುದರಿಂದ ಶ್ರೀಕೃಷ್ಣನಿಗೆ ಪಾರಿಜಾತ ಪುಷ್ಪದಿಂದ ಅರ್ಚಿಸಿ. ‘ಕೃಷ್ಣಂ ವಂದೇ ಜಗದ್ಗುರುಂ’ ಎನ್ನುವುದನ್ನು ಮರೆಯದಿರಿ. ಕ್ಷೀರವನ್ನು ಕೃಷ್ಣನಿಗೆ ನೈವೇದ್ಯ ಮಾಡಿ. ಒಳ್ಳೆಯದಾಗುತ್ತದೆ.