ವಾರಭವಿಷ್ಯ; ಈ ರಾಶಿಯವರು ಗಣಪತಿಯನ್ನು ಪೂಜಿಸಿದರೆ ವಿಶ್ವವನ್ನೇ ಜಯಿಸಬಹುದು

weekly-horoscope
weekly-horoscope
Published on
ಮೇಷ: ವಿಶ್ವಾವಸು ನಾಮ ಸಂವತ್ಸರ ಇನ್ನು ಪಂಚ ರಾತ್ರಿಗಳು ಮಾತ್ರ ಇದ್ದು, ಕುಜ, ರಾಹು, ಬುಧ ಒಂದೇ ಮನೆಯಲ್ಲಿದ್ದಾರೆ. ಶನಿಯು ವಕ್ರಗತಿಯನ್ನು ಬಿಡುವಾಗ ವಿಶ್ವಾದ್ಯಂತ ಯುದ್ಧ ಭೀತಿ, ಆತಂಕ ಸೃಷ್ಟಿಯಾಗುತ್ತದೆ. ಎಲ್ಲ ಸರ್ಕಾರಗಳು ನೊಂದು ದುಡ್ಡಿಗಾಗಿ ಹಪಹಪಿಸುತ್ತವೆ. ವೈಯಕ್ತಿಕವಾಗಿ ಮೇಷ ರಾಶಿಗೆ ದ್ವಾದಶದಲ್ಲಿ ಶನಿಯು ಇರುವಾಗ ಹಣಕಾಸಿನ ವಿಚಾರದಲ್ಲಿ ಎಚ್ಚರ, ಆರೋಗ್ಯದ ಬಗ್ಗೆ ಗಮನವಿರಲಿ.
ವೃಷಭ: ಏಕಾದಶದಲ್ಲಿ ಶನಿ, ದ್ವಿತಿಯದಲ್ಲಿ ಗುರು ಇದ್ದು, ಜೂ.2ರಿಂದ ಗುರುವು ಕಟಕ ರಾಶಿಗೆ ಬರುತ್ತಾನೆ. ಕನಸುಗಳು ನನಸಾಗುವ ಕಾಲ. ಈ ಹೊತ್ತಿಗೆ ಎಲ್ಲ ಗ್ರಹಗಳು ಸುಸ್ಥಿತಿಯಲ್ಲಿ ತಂದು ಒಳ್ಳೆಯ ಫಲ ಕೊಡಬೇಕಾದರೆ ಕೊಲ್ಲೂರು ಮೂಕಾಂಬಿಕೆಯಿಂದ ಮಾತ್ರ ಸಾಧ್ಯ. ನಿಮ್ಮ ಇಷ್ಟಾರ್ಥ ಉಂಟುಮಾಡಲು ಮೂಕಾಂಬಿಕೆ ಅಮ್ಮನವರನ್ನು ಆರಾಧಿಸಿ.
ಮಿಥುನ: ಜನ್ಮ ಗುರುವಿನಿಂದ ಸೊರಗಿ ಹೋಗಿದ್ದೀರಿ. ಮನೆಯಲ್ಲಿ ಏನಾದರೂ ಒಂದು ಘಟನೆ ನಡೆದು ಚಿಂತೆಯು ನಿಮ್ಮನ್ನು ಕಾಡುತ್ತದೆ. ಗುರು ಕಟಕ ರಾಶಿಗೆ ಒಂದು ಸೇರುವಾಗ ಶುಭ ಕಾಣುತ್ತೀರಿ. ಆರಿದ್ರಾ ನಕ್ಷತ್ರವು ಈಶ್ವರನ ನಕ್ಷತ್ರವೇ ಆಗಿದ್ದು ನೀವು ಕೂಡ ಈಶ್ವರನನ್ನು ಆರಾಧಿಸಿ. ಕಷ್ಟ-ನಷ್ಟ ದೂರವಾಗುವುದು.
ಕಟಕ: ಶನಿಯು 9ರಲ್ಲಿದ್ದು, ಧೈರ್ಯವನ್ನು ಬಲವನ್ನು ತುಂಬುತ್ತಾನೆ. ಆದರೆ ಗುರುವು ದ್ವಾದಶದಲ್ಲಿದ್ದು, ಕಠಿಣ ಸಮಸ್ಯೆಯನ್ನು ತಂದು ನಿಮ್ಮನ್ನು ಅಶಕ್ತರನ್ನಾಗಿ ಮಾಡುತ್ತದೆ. ಯಾವ ಭಯ-ಭೀತಿಯೂ ಬೇಡ. ಕೆಲಸವನ್ನು ಜಾಣ್ಮೆಯಿಂದ ಮಾಡಿಕೊಳ್ಳಿ. ಜನಬಲ, ಬುದ್ಧಿಬಲ, ದೈವಬಲ ಎಲ್ಲವೂ ಇದ್ದಾಗ ಸರಿಯಾಗಿ ಉಪಯೋಗಿಸಿಕೊಂಡು ಎಚ್ಚರಿಕೆಯಿಂದ ಸಾಗಿದರೆ ಸುಖವನ್ನು ಪಡೆಯಬಹುದು.
ಸಿಂಹ: ಈ ರಾಶಿಯವರಿಗೆ ಏಕಾದಶದಲ್ಲಿ ಗುರು ಇದ್ದರೂ ಅಷ್ಟಮದಲ್ಲಿ ಶನಿ ಇರುವುದು ಶುಭವಲ್ಲ. ಸಣ್ಣ ಪುಟ್ಟ ಭಾಧೆಗಳು ದೇಹವನ್ನು ಕಾಡುತ್ತವೆ. ಆದರೆ ಗುರುಬಲ ಅದನ್ನು ತಪ್ಪಿಸಿ ನಿಮ್ಮನ್ನು ಸಶಕ್ತಗೊಳಿಸುತ್ತದೆ. ದತ್ತಾತ್ರೇಯನ ಪ್ರಾರ್ಥನೆ ಮುಂದುವರಿಸಿ. ಧೈರ್ಯವನ್ನು ಕಳೆದುಕೊಳ್ಳಬೇಡಿ. ಭಗವಂತನಲ್ಲಿ ಭಾರಹಾಕಿ ಯಥಾಶಕ್ತಿ ನಿಮ್ಮ ಕೆಲಸ ಮಾಡಿಕೊಳ್ಳಿ. ಆದಿತ್ಯ ಹೃದಯ ಪಾರಾಯಣ ಮಾಡಿರಿ.
ಕನ್ಯಾ: ಸಪ್ತಮ,ಅಷ್ಟಮ ಶನಿಯ ಸಂಚಾರವು ಯಾವ ರಾಶಿಗೂ ಒಳ್ಳೆಯದಲ್ಲ. ಶನಿಮಹಾರಾಜನು ಪಾಠವನ್ನು ಕಲಿಸುತ್ತಾನೆ. ಯಾರನ್ನೂ ನೋಯಿಸದಿರಿ. ಅಹಂಕಾರ ಬೇಡವೇ ಬೇಡ. ಈ ಮಾರ್ಗದಲ್ಲಿ ನಡೆದರೆ ಬ್ರಹ್ಮ-ವಿಷ್ಣು- ಮಹೇಶ್ವರನಾದ ತ್ರಿಮೂರ್ತಿ ಸ್ವರೂಪ ಗುರುವು ಏಕಾದಶಕ್ಕೆ ಬಂದಾಗ ನಿಮಗೆ ಅಲ್ಪ ಸಂತೋಷ- ಸುಖ ಉಂಟು ಮಾಡುತ್ತಾನೆ. ದತ್ತಾತ್ರೇಯನನ್ನು ಪೂಜಿಸಿ.
ತುಲಾ: ಈ ರಾಶಿಯವರಿಗೆ ತೂಗಲು ಬರುತ್ತದೆ. ತೂಕಡಿಸಲೂ ಬರುತ್ತದೆ. ಚಿತ್ತ ಶುದ್ಧವಾಗಿಟ್ಟುಕೊಂಡು ಗುರಿಯನ್ನು ಮುಟ್ಟಬೇಕು. ಗಣಪತಿಯನ್ನು ಪೂಜಿಸಿದರೆ ವಿಶ್ವವನ್ನೇ ಜಯಿಸಬಹುದು. ಧನವು ನೀರಿನಂತೆ ಹರಿದು ಕೀರ್ತಿ, ಲಾಭವೂ ಬಂದು ಸೇರಿ ಭಗವಂತನು ನವಚೈತನ್ಯಕೊಡುತ್ತಾನೆ. ದುರ್ಗಿಯನ್ನು ಪ್ರಾರ್ಥಿಸಿ. ಗಣಪತಿಗೆ ನೈವೇದ್ಯ ನೀಡಿ. ವಿಷ್ಣುವಿಗೆ ನಮಸ್ಕಾರವಿರಲಿ.
ವೃಶ್ಚಿಕ: ಮನೆಯಲ್ಲಿ ಮಕ್ಕಳು ಜಗಳ ಮಾಡುವ ಸಂದರ್ಭವನ್ನು ಉಂಟು ಮಾಡಿಕೊಳ್ಳಬೇಡಿ. ಈ ಸಂದರ್ಭದಲ್ಲಿ ಆರೋಗ್ಯ ಭಾಗ್ಯಂ ಮಹದೃಶ್ವಯಣ ಎಂದು ನೆನೆದು ಸುಬ್ರಹ್ಮಣ್ಯ ದೇವರಿಗೆ ಪ್ರದಕ್ಷಿಣೆ ಹಾಕಿ. ಮೌನವಾಗಿ ಅಲ್ಲೇ ಕುಳಿತು ಸುಬ್ರಹ್ಮಣ್ಯ ಧ್ಯಾನಶ್ಲೋಕ ಪಠಿಸಿ. ಕಷ್ಟಗಳನ್ನು ತೊಂದರೆಯನ್ನು ನೀಗಿ ಜೀವನದಲ್ಲಿ ಹಣಬಂದು ಸೇರುವುದು.
ಧನಸ್ಸು: ಬಿಲ್ಲಿದ್ದರೂ ಸಾಲದು, ಬಾಣವಿದ್ದರೂ ಸಾಲದು, ಗುರಿಯೇ ಇಲ್ಲದಿದ್ದರೆ ಬಾಣ ಬಿಲ್ಲಿಗೇನು ಕೆಲಸ. ಅಂತಹ ನಿಮ್ಮ ಗುರಿಗೆ ಚತುರ್ಥ ಶನಿಯು ಅಷ್ಟೈಶ್ವರ್ಯವನ್ನು ನೀಡಿ ದೋಷ ತರುತ್ತಾನೆ. ನೀವೇ ಪ್ರಧಾನರಾಗಿ ಸರ್ವಜ್ಞನಂತೆ ವರ್ತಿಸಬೇಡಿ. ಸರಳವಾಗಿ ಇದ್ದರೆ ಸಪ್ತಮದಲ್ಲಿರುವ ಗುರುವು ಕಾಯುತ್ತಾನೆ. ಶನಿಗಾಗಿ ಶ್ರೀರಾಮ ರಕ್ಷಾ ಸ್ತೋತ್ರ ಪಠಿಸಿ.
ಮಕರ: ಈ ರಾಶಿಗೆ ಗುರುಬಲವಿಲ್ಲ. ತೃತೀಯ ಶನಿಯು ಏನನ್ನೂ ಕೊಡಲು ಸಿದ್ಧನಾಗಿರುತ್ತಾನೆ. ಒಳ್ಳೆಯ ಜಾಗದಲ್ಲಿ ಶನಿಯಿದ್ದರೂ ಗುರುಬಲ ಇಲ್ಲದಿರುವುದರಿಂದ ನೀವು ಒಂದು ರೂಪಾಯಿ ಬಯಸಿದರೆ 20 ಪೈಸೆ ಮಾತ್ರ ನಿಮ್ಮದಾಗುತ್ತದೆ. ಸಾಕ್ಷಾತ್ ನಿಮ್ಮ ಕುಲಗುರುಗಳನ್ನು ದರ್ಶಿಸಿ ಬನ್ನಿ. ಅವರನ್ನು ದರ್ಶಿಸಿದರೆ ಮನುಷ್ಯನ ಕಷ್ಟ ದೂರವಾಗುತ್ತದೆ.
ಕುಂಭ: ಶುಂಭನಿಶುಂಭ ಎಂಬ ರಾಕ್ಷಸರು ಜನರಿಗೆ ತೊಂದರೆ ನೀಡಿದ ಉದಾಹರಣೆ ಇದೆ. ಕುಂಭರಾಶಿಯಲ್ಲಿ ರಾಹು ಹಾಗೂ ಕುಜನೂ ಸೇರಿದ್ದಾರೆ. ಶನಿಯು ಕೊನೆಯ ಭಾಗದಲ್ಲಿದ್ದೀರಿ, ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ, ಯುದ್ಧವು ಭಾರತವನ್ನು ಅಲುಗಾಡಿಸಲು ಆಗದು. ಧೈರ್ಯದಿಂದ ಇರಿ. ರಾಹುವಿಗೆ ನೀಲಿ ಪುಷ್ಪದಿಂದ ಅಷ್ಟೋತ್ತರದಿಂದ ಪೂಜಿಸಿ. ಶಿವ ಪ್ರಾರ್ಥನೆ ಇರಲಿ.
ಮೀನ: ಶನಿ, ಶುಕ್ರರು ಒಟ್ಟಿಗೆ ಸೇರಿದ್ದಾರೆ. ಇಬ್ಬರೂ ಧೈತ್ಯಾಸುರರೇ. ಯಾರೊಂದಿಗೂ ಹೊಡೆದಾಡಬೇಡಿ. ಬುದ್ಧಿ ಮಾತನ್ನೂ ಹೇಳದಿರಿ. ಆಗ ನೆಮ್ಮದಿ ಸಿಗುವುದು. ಶನಿ ಸಂಚಾರದಿಂದ ಬಳಲಿದ್ದೀರಿ. ನಿತ್ಯವೂ ಶನಿ ಅಷ್ಟೋತ್ತರ ಪಠಿಸಿ. ದೇವರೇ ನಿಮ್ಮನ್ನು ಕಾಪಾಡುತ್ತಾನೆ. ದೃಢವಾದ ಭಕ್ತಿಯಿದ್ದರೆ ನಾಲ್ಕನೇ ಮನೆಯಲ್ಲಿದ್ದರೂ ಗುರುವು ಜಯ ಉಂಟು ಮಾಡುತ್ತಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net