_1766255137090.webp?w=480&auto=format%2Ccompress&fit=max)
_1766255137090.webp?w=480&auto=format%2Ccompress&fit=max)
ಮೇಷ: ಕೆಲಸವು ಮುಂದುವರಿದು ಗ್ರಹಗಳು ಸರ್ವ ಶ್ರೇಯಸ್ಸನ್ನು, ಆರೋಗ್ಯವನ್ನು, ಕಾರ್ಯಜಯವನ್ನು ಕೊಟ್ಟೇ ಕೊಡುತ್ತವೆ. ಸಾಧ್ಯವಾದಲ್ಲಿ ಶನೇಶ್ವರ ದೆವಾಲಯದಲ್ಲಿ ಎಳ್ಳೆಣ್ಣೆ ಅಭಿಷೇಕ ಮಾಡಿಸಿ, ಎಳ್ಳುದೀಪಗಳನ್ನು ಹಚ್ಚಿದರೆ ವಿಶೇಷ ಫಲವು ಸಿಕ್ಕೇ ಸಿಗುತ್ತದೆ. ಮಾನವರು ಕೊಟ್ಟಿದ್ದು ತಾತ್ಕಾಲಿಕ. ದೇವರು ಕೊಟ್ಟಿದ್ದು ಶಾಶ್ವತ. ಶುಭವಾಗಲಿ
ವೃಷಭ: 20ನೇ ತಾರೀಕಿನಂದೇ ಪುಷ್ಯಮಾಸವು ಶುಕ್ರನ ನಕ್ಷತ್ರವಾದ ಪೂರ್ವಾಷಾಢದಿಂದ ಆರಂಭವಾಗುತ್ತಿರುವುದು ಒಳ್ಳೆಯದೇ. ಮಾಡುವ ಕಾರ್ಯಕ್ಕೆ ದೇವರು ಅನುಗ್ರಹಿಸುತ್ತಾನೆ. ಚಂದ್ರಚೂಡನಾದ ಅರುಣಾಚಲೇಶ್ವರನನ್ನು ಪೂಜಿಸಿದರೆ ಆಗದಿರುವ ಕಾರ್ಯಗಳು ನವಚೈತನ್ಯ ಪಡೆದು ಮುಂದುವರಿಯುತ್ತವೆ. ದ್ವಿತೀಯದಲ್ಲಿ ಗುರು ಇದ್ದಾನೆ. ಮುಂದೆ ಸಾಗಿ ಮುಂಚೂಣಿಯಲ್ಲಿ ನಿಮ್ಮ ಕೆಲಸ ಮಾಡಿ.
ಮಿಥುನ: ಗುರುವು ಲಗ್ನದಲ್ಲಿ ಆತ್ಮಕಾರಕನಾಗಿದ್ದಾನೆ. ಗುರುವೇ ಬ್ರಹ್ಮ ವಿಷ್ಣು ಮಹೇಶ್ವರರೇ ಆಗಿದ್ದಾರೆ. ತ್ರಿಮೂರ್ತಿಗಳನ್ನು ಪೂಜಿಸಿದರೆ ಡೊಂಕಾಗಿರುವ ಬಾಳನ್ನು ನೇರವಾಗಿಸಲು ಶಕ್ತಿ ತುಂಬಿ ಕಾರ್ಯದಲ್ಲಿ ಚಟುವಟಿಕೆ ಉಂಟು ಮಾಡಿ ಮುನ್ನಡೆಸುತ್ತಾರೆ. ಗುರು ಅಷ್ಟೋತ್ತರ ಪಠಿಸಿ. ಗುರುಸ್ವರೂಪ ದತ್ತ ದೇವರನ್ನು, ಸ್ವತಃ ನಿಮ್ಮ ಕುಲಗುರು ದರ್ಶಿಸಿ ಆಶೀರ್ವಾದ ಪಡೆಯಿರಿ.
ಕಟಕ: 12ರಲ್ಲಿ ಗುರುವಿದ್ದಾನೆ. ಸೋಂಕಿನ ಗಾಳಿಗೆ ಸಿಲುಕಿ ಉಸಿರಾಟದ ಸಮಸ್ಯೆ ಉಂಟಾಗಬಹುದು. ದೇಹಕ್ಕೆ ಆಯಾಸ ಮಾಡಿಕೊಳ್ಳಬೇಡಿ. ಧನುರ್ ಮಾಸದಲ್ಲಿ ಪ್ರಾತಃ ಕಾಲದಲ್ಲಿ ರಾಶಿಯ ದೇವತೆಯಾದ ಉಮಾಮಹೇಶ್ವರನನ್ನು ಪೂಜಿಸಿ, ಹೆಸರುಬೇಳೆ ಖಾರದ ಹುಗ್ಗಿ, ಬೆಲ್ಲದ ಸಿಹಿಯ ಹುಗ್ಗಿ ನೈವೇದ್ಯ ಮಾಡಿ ಸುಖವಾಗಿರಿ.
ಸಿಂಹ: ವಿಘ್ನಂ ವಿನಾಃ ವಿಜಯ ಬೇಕಾದಲ್ಲಿ ತೇಜಸ್ವರೂಪನಾದ ಗಣನಾಯಕನನ್ನೇ ಪೂಜಿಸಿ. ಈಶ್ವರನ ಕೈಲಾಸದ ಒಡ್ಡೋಲಗದಲ್ಲಿ ಗಣೇಶನಿಗೆ ಪ್ರಥಮ ಸ್ಥಾನ. ನಂತರ ನಂದಿಯು ಇರುತ್ತಾನೆ. ಇವರನ್ನು ಪೂಜಿಸಿದರೆ ಶಿವಮಾರ್ತಾಂಡನೇ ಶತ್ರುಗಳನ್ನು ದೂರ ಮಾಡಿ, ನಕಾರಾತ್ಮಕತೆ ಹೋಗಲಾಡಿಸಿ ನಿಮ್ಮನ್ನು ಕಾಪಾಡಲು ಉದ್ಯುಕ್ತನಾಗುತ್ತಾನೆ.
ಕನ್ಯಾ: ಆರೋಗ್ಯದ ಬಗ್ಗೆ ವಿಶೇಷವಾಗಿ ಗಮನ ಕೊಡಿ. 10ನೇ ಮನೆಯಲ್ಲಿ ಗುರುವಿದ್ದು, ಗುರುಸ್ವರೂಪರಾದ ತಂದೆಯನ್ನು ಆಥವಾ ನಿಮ್ಮನ್ನು ಕೈಹಿಡಿದು ನಡೆಸಿದ ಗುರುಗಳನ್ನು ಪೂಜಿಸಿ. ಯಾವುದೋ ಅದ್ಭುತ ಪ್ರಸಂಗ ಒದಗಿ ಬಂದು ಧನಲಾಭ ಉಂಟಾಗುತ್ತದೆ. ಶಿವಾಷ್ಟೋತ್ತರ ಪಠಿಸಿ. ಶಿವಪಂಚಾಕ್ಷರಿ ಜಪಿಸಿ.
ತುಲಾ: 9ರ ಗುರುವೇ ಸಾಕು ನಿಮ್ಮನ್ನು ಮುನ್ನಡೆಸಲು. ಗುರುವೇ ಕಣ್ಣು, ಶನಿಯೇ ಶರೀರದ ಅವಯವ. ನಿಮ್ಮನ್ನು ಕಾರ್ಯೋನ್ಮುಖರಾಗಿ ಮಾಡಿ ಕೆಲಸದಲ್ಲಿ ಧನ, ಕೀರ್ತಿ, ಲಾಭ, ಬದುಕಿನಲ್ಲಿ ಹರುಷವನ್ನು ಕೊಡಬೇಕೆಂದು ನಿಮ್ಮ ಮನೆಯ ಮಹಾದ್ವಾರದಲ್ಲಿ ನಿಂತಿದ್ದಾರೆ. ಕಾಣದ ರೂಪದಲ್ಲಿ ನಿಮ್ಮನ್ನು ಕಾಪಾಡುತ್ತಾರೆ. ಯಾರೂ ನಿಮಗೆ ಮೋಸ ಮಾಡದಂತೆ ನೋಡಿಕೊಳ್ಳುತ್ತಾರೆ. ಧೈರ್ಯವಾಗಿ ಮುಂದೆ ಸಾಗಿ, ಪಾರ್ವತಿಯೇ ನಿಮ್ಮ ರಕ್ಷಣೆಗಿದ್ದಾಳೆ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಇನ್ನು 15 ದಿನಗಳಲ್ಲಿ ಕೆಲಸದಲ್ಲಿನ ನಕಾರಾತ್ಮಕ ಸಂಗತಿಗಳು ಸಕಾರಾತ್ಮಕವಾಗಿ ಬದಲಾಗಿ ಧನಕ್ಷೇಮವನ್ನು, ಮನಸ್ಸಿಗೆ ಶಾಂತಿಯನ್ನು ಕೊಡುವುದರಲ್ಲಿ ಸಂದೇಹವಿಲ್ಲ. ಆದರೆ ಚತುರ್ಥದಲ್ಲಿ ವಕ್ರನಾಗಿ ಶನಿಯಿದ್ದು, 8ನೇ ಮನೆಯಲ್ಲಿ ಗುರುವಿದ್ದಾನೆ. ಆದ್ದರಿಂದ ತಗ್ಗಿಬಗ್ಗಿ ನಡೆದು ನಿಮ್ಮ ಗುರುಗಳ ಆಶೀರ್ವಾದ ಪಡೆದರೆ ಅವರೇ ನಿಮಗೆ ಮಾರ್ಗವನ್ನು ತೋರಿಸುತ್ತಾರೆ. ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಅತ್ಯಗತ್ಯ.
ಧನಸ್ಸು: ಏಳನೇ ಮನೆಯಲ್ಲಿ ಗುರುವಿದ್ದು ನಿಮ್ಮ ಕೆಲಸಗಳು ಆಗಲಿಲ್ಲವೆಂದರೆ ದೇವರೇ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾನೆಂದರ್ಥ. ಪರಿಶೀಲಿಸಿ ಯೋಗ್ಯ ನಿರ್ಧಾರ ತೆಗೆದುಕೊಂಡು ನಿಮ್ಮ ಕೆಲಸ ಮಾಡಿಕೊಳ್ಳಿ. ಮೇ ತಿಂಗಳವರೆಗೂ ಗುರು ಬಲವಿದ್ದು, ಪರೋಪಕಾರಿಗಳಾಗಿ ಬದುಕಿ. ಅಡಚಣೆ ಇಲ್ಲದೆ ಜೀವನದಲ್ಲಿ ಸಂತೋಷವನ್ನು, ಸಿದ್ಧಿಯನ್ನು ತಂದೇ ತರುತ್ತದೆ. ಕೆಲಸವು ಆಗಲು ದೈವ ಪ್ರಾರ್ಥನೆ ಬೇಕು.
ಮಕರ: 6ರಲ್ಲಿ ಗುರುವಿದ್ದಾನೆ 2ರಲ್ಲಿ ವಕ್ರ ಶನಿ ಇದ್ದಾನೆ. ಯಾವುದೋ ವಿಷಯಕ್ಕೆ ವಿಚಾರ ಮಗ್ನರಾಗಿ ಚಿಂತೆಯನ್ನು ದೂರವಿಟ್ಟು ಮುಂದೆ ಸಾಗಬೇಕು. ಸುಲಭಕ್ಕೆ ಶನಿಯು ಏನನ್ನೂ ಕೊಡನು. ದೇವರ ಮಹಾದೇವರಾದ ಗಿರಿಜಾ ರಮಣನನ್ನು ಪೂಜಿಸಿ. ನೀವು ಮನಸ್ಸು ಮಾಡಿದಲ್ಲಿ ಆಕಾಶವೇ ನಿಮ್ಮ ಗುರಿಯಾಗಿರಲಿ.
ಕುಂಭ: ಲಗ್ನದಲ್ಲಿ ರಾಹುವಿದ್ದು, ಆಲಸ್ಯ ತರುತ್ತಾನೆ. ಪಂಚಮದಲ್ಲಿರುವ ಗುರುವನ್ನು ಪ್ರಾರ್ಥಿಸಿದರೆ ಶುಭವನ್ನು, ಯಶಸ್ಸು, ಕೀರ್ತಿಯನ್ನು ತರುತ್ತಾನೆ. ಎಲ್ಲ ಗ್ರಹಗಳು ಎಲ್ಲ ಕಾಲದಲ್ಲೂ ಶುಭವನ್ನೇ ಕೊಡುವುದಿಲ್ಲ. ಪೂರ್ವ ಸುಕೃತದಂತೆ ಪರಮಾತ್ಮನು ಅನುಗ್ರಹಿಸುತ್ತಾನೆ. ಶನಿಯು ವಕ್ರನಾಗಿ ಲಗ್ನದಲ್ಲಿದ್ದು, ಹೆಂಡತಿ ಮಕ್ಕಳಿಗೆ ಶಾಪ ಕೊಡದೆ ಶಾಂತತೆಯಿಂದ ಯಾರು ಏನೇ ಹೇಳಿದರೂ ಮೌನವಾಗಿದ್ದರೆ, ನಿಮ್ಮ ಸಂತೋಷಕ್ಕೆ ಸರಿಸಾಟಿ ಯಾವುದೂ ಇರುವುದಿಲ್ಲ.
ಮೀನ: 13ರಲ್ಲಿ ವಕ್ರ ಶನಿ, ಚತುರ್ಥದಲ್ಲಿ ಗುರುವು, ದ್ವಾದಶದಲ್ಲಿ ರಾಹುವಿದ್ದಾನೆ. ರಾಹುವಿಗೆ ನಾಗದೇವರನ್ನು ಪೂಜಿಸಿ. ಕೃಷ್ಣಾಷ್ಟೋತ್ತರ ಪಠಿಸಿ. ಶುದ್ಧವಾದ ಆಕಳ ಹಾಲನ್ನು ನಾಗನಿಗೆ ಸಮರ್ಪಣೆ ಮಾಡಿದರೆ ಕೆಲಸಗಳು ಕಾರ್ಯಗತವಾಗುತ್ತದೆ. ಗುರು ಚತುರ್ಥದಲ್ಲಿರುವುದರಿಂದ ಗುರು ಅಷ್ಟೋತ್ತರ ಪಠಿಸಿ, ಕುಲಗುರುಗಳನ್ನು ದರ್ಶಿಸಿ. ಶನಿ ಅಷ್ಟೋತ್ತರ ಪಠಿಸಿ.