ನಿರ್ದೇಶಕರ ಜವಾಬ್ದಾರಿಗಳ ಕುರಿತು ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಯೋಜನೆ ರೂಪಿಸುವುದು, ಹಣಕಾಸಿನ ವ್ಯವಹಾರಗಳನ್ನು ನಿಯಮಾನುಸಾರ ನಡೆಸುವುದು, ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು, ವಾರ್ಷಿಕ ಸಭೆಗಳನ್ನು ನಿಯಮಿತವಾಗಿ ನಡೆಸುವುದು ಹಾಗೂ ಸಂಘದ ಆಸ್ತಿ-ಪಾಸ್ತಿಯನ್ನು ಸಂರಕ್ಷಿಸುವುದು ನಿರ್ದೇಶಕರ ಕರ್ತವ್ಯ ಎಂದರು. ಅಲ್ಲದೆ ಸಹಕಾರಿ ಸಂಘಗಳ ಚುನಾವಣೆ ಕುರಿತು ಮಾಹಿತಿ ನೀಡಿದರು.