ರಸ್ತೆ ಸುರಕ್ಷತಾ ಅಭಿಯಾನದ ನಿಮಿತ್ತ ಬಸವಕಲ್ಯಾಣದಲ್ಲಿ ಮಂಗಳವಾರ ಪಿಐ ಅಲಿಸಾಬ್ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಪಿಎಸ್ಐಗಳಾದ ಸಿದ್ದೇಶ್ವರ, ಸುರೇಶ ಹಜ್ಜರಗಿ, ಸುಚಾತಾ ಕುನಾಳೆ ಇತರರು ಭಾಗವಹಿಸಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿಪಿಐ ಅಲಿಸಾಬ್ ಸಲಹೆ
ಬಸವಿಲ್ಯಾಣದಲ್ಲಿ ರಸ್ತೆ ಸುರಾ ಅಭಿಯಾನ, ಬೈಕ್ ರ್ಯಾಲಿ
ಬಸವಕಲ್ಯಾಣ: ಸುರಕ್ಷತೆಗಾಗಿ ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸಲೇ ಬೇಕು. ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ, ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ಇಲ್ಲವೇ ದಂಡ ಪಾವತಿಸಿ ಎಂದು ಸಿಪಿಐ ಅಲಿಸಾಬ್ ಹೇಳಿದರು.
ರಸ್ತೆ ಸುರಕ್ಷತಾ ಅಭಿಯಾನದ ನಿಮಿತ್ತ ಬೀದರ್ ಜಿಲ್ಲಾ ಪೊಲೀಸ್, ನಗರ ಪೊಲೀಸ್ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ನಡೆಸಿದವರ ಸಂಖ್ಯೆ ಹೆಚ್ಚಿದೆ. ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲು ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಎನ್ನುವ ೂಷ್ಯವಾಕ್ಯದೊಂದಿಗೆ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಗಾಂಧಿ ವೃತ್ತದಿಂದ ಮುಖ್ಯ ಮಾರ್ಗವಾಗಿ ಬಸವ ವೃತ್ತ, ಅಂಬೇಡ್ಕರ್ ವೃತ್ತ, ತ್ರಿಪುರಾಂತ ಪ್ರವಾಸಿ ಮಂದಿರದ ಮೂಲಕ ನಾಗಣ್ಣ ಕಟ್ಟಾ, ಶಿವಪುರ ರಸ್ತೆಯಿಂದ ನಾರಾಯಣಪುರ ಕ್ರಾಸ್, ಬಸವ ನಿಲ್ದಾಣ, ಜೀಜಾಮಾತಾ ಶಾಲೆ, ಕೋಟೆ ಮೂಲಕ ಗಾಂಧಿ ವೃತ್ತದ ವರೆಗೆ ಬೈಕ್ ರ್ಯಾಲಿ ನಡೆಸಲಾಯಿತು.
ಸಿಪಿಐ ಅಲಿಸಾಬ್ ನೇತೃತ್ವದಲಿ ನಡೆದ ಬೈಕ್ ರ್ಯಾಲಿಯಲ್ಲಿ ಸಂಚಾರಿ ಠಾಣೆ ಪಿಎಸ್ಐ ಸಿದ್ದೇಶ್ವರ, ಕ್ರೆಂ ವಿಭಾಗದ ಪಿಎಸ್ಗಳಾದ ಸುರೇಶ ಹಜ್ಜರಗಿ, ಸುಚಾತಾ ಕುನಾಳೆ ಹಾಗೂ ಎರಡು ಠಾಣೆಗಳ ಎಎಸ್ಐ ಮತ್ತು ಪೊಲೀಸ್ರು ಭಾಗವಹಿಸಿದ್ದರು. ಹೆಲ್ಮೆಟ್ ಧರಿಸಿದ ವಾಹನ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.