ಮಡಿವಾಳ: ಜೀವ ಮತ್ತು ಜೀವನ ಅತ್ಯಂತ ಅಮೂಲ್ಯ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ ಎಂದು ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹೂಡಿ ವಿಜಯ ಕುಮಾರ್ ತಿಳಿಸಿದರು.
ಮಾಲೂರು ತಾಲೂಕು ತೊರ್ನಹಳ್ಳಿಯ ಶ್ರೀ ಸಫಲಾಂಭ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮಾಸ್ತಿ ರಮೇಶ್ ನೀಡಿದ ಹೆಲ್ಮೆಟ್ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ, ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ದ್ವಿಚಕ್ರ ವಾಹನಗಳೇ ಹೆಚ್ಚು ಅಪಘಾತಕ್ಕೀಡಾಗುತ್ತವೆ. ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಸಾವನ್ನಪ್ಪಿರುವರ ಸಂಖ್ಯೆ ಹೆಚ್ಚಾಗಿದೆ. ಹೆಲ್ಮೆಟ್ ಧರಿಸದಿದ್ದರೆ ತಲೆಗೆ ಪೆಟ್ಟಾದಾಗ ಸಾಯುವ ಸಂಭವ ಹೆಚ್ಚಿರುತ್ತದೆ ಎಂದರು.
ಸಮಾಜ ಸೇವಕ ಮಾಸ್ತಿ ರಮೇಶ್ ಮಾತನಾಡಿ, ಅಮೂಲ್ಯ ಜೀವ ಉಳಿಸಿಕೊಳ್ಳಲಿ ಎಂಬ ಕಾರಣಕ್ಕೆ Helmet ಈ ಭಾಗದ ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬರಿಗೂ ಹೆಲ್ಮೆಟ್ ನೀಡಲಾಗುತ್ತಿದೆ ಎಂದರು.
ನಗರಸಭೆ ಮಾಜಿ ಸದಸ್ಯ ಭಾನುತೇಜ, ಶ್ರೀನಿವಾಸ್ಗೌಡ, ಚಂದ್ರಾರೆಡ್ಡಿ, ರೋಜಾ ರಾಜಪ್ಪ, ಶ್ರೀನಿವಾಸ್, ಮಂಜು, ಮಲ್ಲೇಶ್, ಶ್ರೀನಾಥ್, ಮಧುಚಂದ್ರ, ಮನೋಹರ್, ಆನಂದ್, ರಾಮಪ್ಪ, ಪ್ರಭು, ವೆಂಕಟೇಶ್ ರಾಹುಲ್ ಇದ್ದರು.