ಬಾಬಾ ಸಾಹೇಬರ ತತ್ವಗಳು ನಾವೆಲ್ಲರು ಪಾಲಿಸಬೇಕು

ಸೇಡಂ : ತಾಲೂಕಿನ ರಂಜೋಳ ಗ್ರಾಮದಲ್ಲಿ ಆಯೋಜಿಸಿದ ಡಾ.ಬಿ.ಆರ್​.ಅಂಬೇಡ್ಕರವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಉದ್ಘಾಟಿಸಿದರು. ಶೀ ಭಂತೆ ವರಜ್ಯೋತಿ, ಶೀ ಜ್ಞಾನಪ್ರಕಾಶ ಸ್ವಾಮೀಜಿ, ಶೀ ಶಾಂತವೀರ ಮುರುರಾಜೇಂದ್ರ ಸ್ವಾಮೀಜಿ, ಸಂತೋಷಿರಾಣಿ ಪಾಟೀಲ್​ ತೆಲ್ಕೂರ, ಸತೀಶರೆಡ್ಡಿ ಪಾಟೀಲ್​ ರಂಜೋಳ, ಶಿವಕುಮಾರ ತೊಟ್ನಳ್ಳಿ ಇದ್ದರು.
ಸೇಡಂ : ತಾಲೂಕಿನ ರಂಜೋಳ ಗ್ರಾಮದಲ್ಲಿ ಆಯೋಜಿಸಿದ ಡಾ.ಬಿ.ಆರ್​.ಅಂಬೇಡ್ಕರವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಉದ್ಘಾಟಿಸಿದರು. ಶೀ ಭಂತೆ ವರಜ್ಯೋತಿ, ಶೀ ಜ್ಞಾನಪ್ರಕಾಶ ಸ್ವಾಮೀಜಿ, ಶೀ ಶಾಂತವೀರ ಮುರುರಾಜೇಂದ್ರ ಸ್ವಾಮೀಜಿ, ಸಂತೋಷಿರಾಣಿ ಪಾಟೀಲ್​ ತೆಲ್ಕೂರ, ಸತೀಶರೆಡ್ಡಿ ಪಾಟೀಲ್​ ರಂಜೋಳ, ಶಿವಕುಮಾರ ತೊಟ್ನಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಂಜೋಳ ಗ್ರಾಮದಲ್ಲಿ ಡಾ.ಬಿ.ಆರ್​.ಅಂಬೇಡ್ಕರ ಮೂರ್ತಿ ಅನಾವರಣ
ಸೇಡಂ: ಬಾಬಾ ಸಾಹೇಬರು ಕೇವಲ ಭಾರತ ದೇಶಕಲ್ಲದೆ ಇಡೀ ಜಗತ್ತಿಗೆ ಆದರ್ಶ ವ್ಯಕ್ತಿಯಾಗಿದ್ದು, ಅವರು ನೀಡಿದ ಅಮೂಲ್ಯ ಸಂವಿಧಾನದಡಿ ನಾವೆಲ್ಲರು ಸಮಾನವಾಗಿ ಬದುಕು ನಡೆಸುತಿದ್ದು ಅವರ ತತ್ವಗಳು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವದು ಅವಶ್ಯವಾಗಿದೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ತಾಲೂಕಿನ ರಂಜೋಳ ಗ್ರಾಮದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರವರ ಮೂರ್ತಿ ಅನಾವರಣಗೊಳಿಸಿದ ಅವರು ಮಾತನಾಡಿ, ಆರ್ಥಿಕ ಅಸಮಾನತೆ ಹೋಗಲಾಡಿಸಿದ ಶ್ರೇಷ್ಠ ಅರ್ಥಶಾಸರಾಗಿದ್ದ ಬಾಬಾ ಸಾಹೇಬರು ಜ್ಞಾನದ ಕಣಜವಾಗಿದ್ದಾರು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್​ ತೆಲ್ಕೂರ ಮಾತನಾಡಿ, ಬಾಬಾ ಸಾಹೇಬರು ತಮ್ಮ ಸಂವಿಧಾನದ ಮೂಲಕ ಮಹಿಳಾ ಸಮಾನತೆಯ ಹಕ್ಕನ್ನು ನಮಗೆ ನೀಡಿದ್ದಾರೆ. ಜೊತೆಗೆ ನಮಗೆ ಉತ್ತಮ ಬದುಕಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ತತ್ವಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು, ಸಮ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ ಕೊಡುಗೆ ಅನನ್ಯವಾದದ್ದು ಎಂದು ಬಣ್ಣಿಸಿದರು.
ಬೀದರನ ಶೀ ಭಂತೆ ವರಜ್ಯೋತಿ, ಕೋಡ್ಲಾ ಉರಿಲಿಂಗ ಪೆದ್ದಿಮಠದ ಶೀ ಜ್ಞಾನಪ್ರಕಾಶ ಸ್ವಾಮೀಜಿ, ಗುರುಮಠಕಲ್​ನ ಶೀ ಶಾಂತವೀರ ಮುರುಗರಾಜೇಂದ್ರ ಸ್ವಾಮೀಜಿ, ಮೂರ್ತಿ ಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್​ ಮಾತನಾಡಿದರು.
ಕಲಬುರಗಿ ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ತಾಪಂ ಮಾಜಿ ಸದಸ್ಯ ಜೈಭೀಮ ಊಡಗಿ, ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ, ಪ್ರಮುಖರಾದ ನಾರಾಯಣರೆಡ್ಡಿ ಶೇರಿಕಾರ, ಅಬ್ದುಲ್​ ರಸೀದ, ನರಸಿಂಹರೆಡ್ಡಿ ರಂಜೋಳ, ಗೌತಮ ಬೊಮ್ನಳ್ಳಿ, ಮಹಾಂತೇಶ ಸುತಾರ, ರಾಮಚಂದ್ರ ಗುತ್ತೇದಾರ, ಸೂಗಪ್ಪ ಬಳಗಾರ, ರಾಜು ಬಳಗಾರ, ಶೀಶೈಲ್​ ಬಟಗೇರಾ, ರಾಮಗೋಪಾಲಜೀ ಮರಾಠ, ಬಸವರಾಜ ಜಾಕನಳ್ಳಿ, ಶೀನಿವಾಸ ಸಂಗಾವಿ ಸೇರಿದಂತೆ ಇನ್ನಿತರರಿದ್ದರು.
ನಾಗೇಂದ್ರ ಮೈಲಾರಿ ಸ್ವಾಗತಿಸಿದರು. ಶಿಕ್ಷಕ ಲಕ್ಷ್ಮಣ ರಂಜೋಳ ನಿರೂಪಣೆ ಮಾಡಿದರು. ದೇವಿಂದ್ರಪ್ಪ ಗಡ್ಡಿಮನಿ ವಂದಿಸಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ವಿಶೇಷ ಸತ್ಕಾರ
ವಿವಿಧ ಕ್ಷೇತ್ರದ ಸಾಧಕರಾದ ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ಪಿಎಸ್​ಐ ನಾಗಮ್ಮ ದಂಡು, ಪಿಡಿಓ ಮಹೇಶ, ಶೀಕಾಂತ ಗಡ್ಡಿಮನಿ, ವಿಜಯಕುಮಾರ, ನಾಗೇಂದ್ರ ಮೈಲಾರಿ, ಅಬ್ದುಲ್​ ರಹೆಮಾನ, ವೆಂಕಟೇಶ, ಅನೀಲಕುಮಾರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net