ಕೆಎಲ್ಇ ಸಂಸ್ಥೆಯ ಪಾಲಿಟೆಕ್ನಿಕ್, ಐಟಿಐ, ಪಿಯುಸಿ ಮತ್ತು ಬಿಸಿಎ ಕಾಲೇಜು ಸಹಯೋಗದಲ್ಲಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸಂಸ್ಥೆ ಉಪಾಧ್ಯಕ್ಷ ಬಿ.ಎಸ್.ತಟವಟಿ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಅನೇಕ ಸೇನಾನಿಗಳ ಹೋರಾಟ, ತ್ಯಾಗ ಹಾಗೂ ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರಾಚಾರ್ಯ ಪ್ರೊ.ಶ್ರೀಧರ ನಿರಡಿ ಮಾತನಾಡಿದರು. ಮಾಜಿ ಸೈನಿಕರಾದ ಗಂಗಪ್ಪ ಗುಗ್ಗರಿ, ಗೌಡಪ್ಪ ಪಾಟೀಲ, ಗುರುನಾಥ ಮುತವಾಡ ಹಾಗೂ ಮಹಾವೀರ ದೇವಕ್ಕೆ ಅವರನ್ನು ಸನ್ಮಾನಿಸಲಾಯಿತು.