

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕಾವೇರಿ2ನೇಹಂತದ 600 ಮಿ.ಮೀ.ವ್ಯಾಸದ ಮುಖ್ಯಕುಡಿಯುವ ನೀರಿನ ಕೊಳವೆಯಲ್ಲಿಉಂಟಾಗಿರುವ ಭಾರೀ ಸೋರಿಕೆಯನ್ನುತಡೆಗಟ್ಟಲು ಬೆಂಗಳೂರು ಜಲಮಂಡಳಿಯು(ಬಿಡಬ್ಲ್ಯೂಎಸ್‌ಎಸ್‌ಬಿ) ತುರ್ತುದುರಸ್ತಿ ಕಾಮಗಾರಿಯನ್ನುಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿಮೈಸೂರು ರಸ್ತೆ ಸೇವಾ ವ್ಯಾಪ್ತಿಯಹಲವು ಪ್ರದೇಶಗಳಲ್ಲಿ ಶನಿವಾರನೀರು ಸರಬರಾಜಿನಲ್ಲಿ ವ್ಯತ್ಯಯಉಂಟಾಗಲಿದೆ ಎಂದು ಬೆಂಗಳೂರುಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ಮನೋಹರ್ ತಿಳಿಸಿದ್ದಾರೆ.
ಸೌತ್‌ಎಂಡ್ವೃತ್ತದ ಮುಖಾಂತರ ಮೈಸೂರು ರಸ್ತೆಸೇವಾ ಪ್ರದೇಶಗಳಿಗೆ ಪ್ರತಿನಿತ್ಯ14 ಎಂಎಲ್‌ಡಿನೀರು ಸರಬರಾಜು ಮಾಡುವ ಕೊಳವೆಯಲ್ಲಿರಂಧ್ರ ಉಂಟಾಗಿ,ನೀರು ಪೋಲಾಗುತ್ತಿದೆ.ಆದ್ದರಿಂದ ಸೌತ್ಎಂಡ್ ರಸ್ತೆಯ ಸುರಾನ ಕಾಲೇಜುಬಳಿ ಇರುವ 24ಅಂಗುಲದ ಕವಾಟವನ್ನು8 ಗಂಟೆಗಳಕಾಲ ಬಂದ್ ಮಾಡಿ ದುರಸ್ತಿಕಾಮಗಾರಿಯನ್ನು ನಡೆಸಲಾಗುವುದುಎಂದು ತಿಳಿಸಿದ್ದಾರೆ.