ಈಗಾಗಲೇ ಗುರುತಿಸಿದ ವಸತಿ ಸ್ಥಳ ನಗರದಿಂದ ದೂರವಿದೆ ಎಂಬ ಯೋಧರ ಮನವಿ ಗಮನಿಸಿ, ನಗರದಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೊಸ ಸ್ಥಳ ಗುರುತಿಸಲಾಗಿದೆ. 256 ಯೋಧರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ಇದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಸೈನಿಕರ ವಸತಿಶಾಲೆ ಆರಂಭಿಸಲಾಗಿದೆ ಎಂದರು. ಜಂಟಿ ಕಾರ್ಯದರ್ಶಿ ರಘು, ಗೌರವಾಧ್ಯಕ್ಷ ಜಯಪಾಲ್ ಇತರರು ಇದ್ದರು.