ಸಿಂದಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂ ಕಾರ್ಯಕರ್ತರು ಕಾರ್ಮಿಕರ ದಿನ ಆಚರಿಸಿದರು. ರಮೇಶ ಸಾಸಾಬಾಳ, ಅಣ್ಣಾರಾಯ ಈಳಗೇರ, ಸರಸ್ವತಿ ಮಠ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿಪಿಐಎಂ ತಾಲೂಕು ಕಾರ್ಯದರ್ಶಿ ರಮೇಶ ಸಾಸಾಬಾಳ ಆಕ್ರೋಶ
ವಿಶ್ವ ಕಾರ್ಮಿಕರ ದಿನಾಚರಣೆ
ಸಿಂದಗಿ: ಅಮೆರಿಕಾ-ಇರಾನ್ ಯುದ್ಧದ ಪರಿಣಾಮ ಅಸಂಘಟಿತ ಕಾರ್ಮಿಕರ ಭವಿಷ್ಯದ ಮೇಲೆ ಕರಿನೆರಳು ಮೂಡಿದೆ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ರಮೇಶ ಸಾಸಾಬಾಳ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ವಿಶ್ವ ಕಾರ್ಮಿಕರ ದಿನಾಚರಣೆ ಆಚರಿಸಿ ಮಾತನಾಡಿದ ಅವರು, ಕೇಂದ್ರದ ನಾಲ್ಕು ಕಾರ್ಮಿಕ ಕೋಡ್ ಜಾರಿ ಮಾಡಿದ್ದು, ಬಂಡವಾಳ ಶಾಹಿ, ಕಾರ್ಪೋರೇಟ್ ಪರವಾದ ನೀತಿಗಳನ್ನು ಅನುಸರಿಸುವ ಮೂಲಕ ಕಾರ್ಮಿಕರ ಬದುಕು, ಭವಿಷ್ಯವನ್ನು ಮಣ್ಣು ಮಾಡಿವೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣರಾಯ ಈಳಗೇರ ಮಾತನಾಡಿ, ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಗ್ಗಟ್ಟು ಅವಶ್ಯಕ. ಈ ದಿಸೆಯಲ್ಲಿ ಹೋರಾಟ ಅಗತ್ಯ ಎಂದು ಹೇಳಿದರು.
ಸಿಐಟಿಯು ತಾಲೂಕು ಅಧ್ಯಕ್ಷೆ ಸರಸ್ವತಿ ಮಠ, ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುರಡೆ, ಗ್ರಾ.ಪಂ ನೌಕರ ಸಂಘದ ತಾಲೂಕು ಅಧ್ಯಕ್ಷ ಪಿಂಟು ಕೊಂಡಗೂಳಿ, ಕಾರ್ಯದರ್ಶಿ ಬ್ರಹ್ಮಣ್ಣ, ಸುಮಾ ಧೂಳಬಾ, ಸವಿತಾ ಕೋಕಟನೂರ, ಗಂಗು ಜಾಲವಾದ ಇತರರಿದ್ದರು.