ವಿವಾದದ ಸುಳಿಯಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು

ಬಂಥನಾಳಮಠದ ಪೀಠಾಧಿಕಾರಿ ವೃಷಭಲಿಂಗೇಶ್ವರ ಶ್ರೀಗಳು
ಬಂಥನಾಳಮಠದ ಪೀಠಾಧಿಕಾರಿ ವೃಷಭಲಿಂಗೇಶ್ವರ ಶ್ರೀಗಳು
Published on

ಪ್ರಮುಖ ಮುಖ್ಯಾಂಶಗಳು

  • ಯುವತಿಯೊಂದಿಗೆ ಶ್ರೀಗಳ ಅಸಭ್ಯ ಸಂಭಾಷಣೆ
  • ಹಲವು ಭಕ್ತರಿಂದ ಆಕ್ರೋಶ
ವಿಜಯಪುರ :

ಇಂಡಿ ತಾಲೂಕಿನ ಲಚ್ಯಾಣದಲ್ಲಿರುವ ಸುಪ್ರಸಿದ್ಧ ಬಂಥನಾಳ ಮಠದ ಪ್ರಸ್ತುತ ಪೀಠಾಧಿಕಾರಿ ವೃಷಭಲಿಂಗೇಶ್ವರ ಶ್ರೀಗಳು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಶ್ರೀಗಳದ್ದು ಎಂದು ಹೇಳಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಶ್ರೀಗಳು ಯುವತಿಯೊಂದಿಗೆ ನಡೆಸಿರುವ ಅಸಭ್ಯ ಸಂಭಾಷಣೆ ಭಾರಿ ಚರ್ಚೆಯಾಗುತ್ತಿದ್ದು, ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.
ಇತ್ತೀಚೆಗಷ್ಟೇ ಸಂಗನಬಸವ ದೇವರ ಉತ್ತರಾಧಿಕಾರಿ ನೇಮಕ ವಿಷಯದಲ್ಲಿ ಮಠದ ಭಕ್ತರು ಮತ್ತು ವೃಷಭಲಿಂಗ ಶ್ರೀಗಳ ನಡುವೆ ಮನಸ್ತಾಪವಾಗಿತ್ತು. ಪ್ರಕರಣ ತಹಸೀಲ್ದಾರ್ ಕೋರ್ಟ್ ಮೆಟ್ಟಿಲೇರಿದೆ.
ಇನ್ನೊಂದೆಡೆ ಮಠದ ಆಸ್ತಿಯನ್ನು ಶ್ರೀಗಳು ಅಕ್ರಮವಾಗಿ ಒಂದು ಕೋಟಿಗೂ ಅಧಿಕ ಲಾಭಕ್ಕೆ ಮಾರಾಟ ಮಾಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶ್ರೀಗಳ ವಿರುದ್ಧ ಕೆಲವು ಭಕ್ತರು ಹೋರಾಟವನ್ನೂ ನಡೆಸುತ್ತಿದ್ದಾರೆ. ಇದರ ನಡುವೆ ಯುವತಿಯೊಂದಿಗಿನ ಆಡಿಯೋ ಸಂಭಾಷಣೆ ಸದ್ದು ಮಾಡತೊಡಗಿದೆ.
ಸಂಬಂಧಿತ ಆಡಿಯೋ ಬಗ್ಗೆ ವೃಷಭಾನಂದ ಶ್ರೀಗಳು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ಸಂಬಂಧಪಟ್ಟ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿ, ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net