ಮತದಾನ ಪ್ರತಿಯೊಬ್ಬರ ಹಕ್ಕು

 ಸೋಲೂರಿನ ರಾಜಶೇಖರಯ್ಯ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ನಡೆಯಿತು. ಉಪ ಪ್ರಾಂಶುಪಾಲ ಜಗದೀಶ್, ಆಡಳಿತಾಧಿಕಾರಿ ಸುಗುಣ, ಸುಲೋಚನಾ ಇತರರು ಇದ್ದರು.
ಸೋಲೂರಿನ ರಾಜಶೇಖರಯ್ಯ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ನಡೆಯಿತು. ಉಪ ಪ್ರಾಂಶುಪಾಲ ಜಗದೀಶ್, ಆಡಳಿತಾಧಿಕಾರಿ ಸುಗುಣ, ಸುಲೋಚನಾ ಇತರರು ಇದ್ದರು.
Published on

ವಿದ್ಯಾರ್ಥಿಗಳಲ್ಲಿ ನಾಯಕರಾಗುವ ಸಾಮರ್ಥ್ಯ ಹಾಗೂ ಜವಾಬ್ದಾರಿ ಭಾವನೆ ಮೂಡಿಸಲು ವಿದ್ಯಾರ್ಥಿ ಪರಿಷತ್ ಚುನಾವಣೆ ಪ್ರಮುಖವಾಗಿದೆ ಎಂದು ಉಪ ಪ್ರಾಂಶುಪಾಲ ಜಗದೀಶ್ ತಿಳಿಸಿದರು.

ಸೋಲೂರಿನ ರಾಜಶೇಖರಯ್ಯ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಮಾತನಾಡಿ, ಮತದಾನವು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ಉತ್ತಮ ನಾಯಕನ ಆಯ್ಕೆ ಮಾಡುವ ಮೂಲಕ ಶಾಲೆ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಚುನಾವಣೆಗೂ ಮುನ್ನ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿ ತಮ್ಮ ಪ್ರಣಾಳಿಕೆಗಳನ್ನು ಸಹಪಾಠಿಗಳ ಮುಂದೆ ಮಂಡಿಸಿ, ಶಾಲೆ ಅಭಿವೃದ್ಧಿಗೆ ಕೈಗೊಳ್ಳುವ ಯೋಜನೆ ವಿವರಿಸಿದರು. ಬಳಿಕ ಚುನಾವಣಾ ನೀತಿ ಸಂಹಿತೆ ಪಾಲಿಸಿಕೊಂಡು ಮತದಾನ ಪ್ರಕ್ರಿಯೆ ನಡೆಸಲಾಯಿತು.
ಮತದಾನಕ್ಕಾಗಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು. ಮಕ್ಕಳು ರಹಸ್ಯ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಶಿಕ್ಷಕರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸಂಪೂರ್ಣ ಪ್ರಕ್ರಿಯೆ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಿಕೊಟ್ಟರು. ಶಾಲೆ ಆಡಳಿತಾಧಿಕಾರಿ ಸುಗುಣ, ಸುಲೋಚನಾ, ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net